KMF SHIMUL Jobs Alert: ಸಹಕಾರಿ ಹಾಲು ಉತ್ಪಾದಕರ ಸಂಘದಲ್ಲಿ ಭರ್ಜರಿ ನೇಮಕಾತಿ, ಗರಿಷ್ಠ 99,400 ವೇತನ
KMF SHIMUL Recruitment 2025: ಕರ್ನಾಟಕ ಸರ್ಕಾರಿ ವ್ಯಾಪ್ತಿಯಲ್ಲಿ ಉದ್ಯೋಗ ಹುಡುಕುತ್ತಿರುವ ಆಸಕ್ತಿ ಅಭ್ಯರ್ಥಿಗಳಿಗೆ ಇಲ್ಲೊಂದು ಗುಡ್‌ನ್ಯೂಸ್ ಇದೆ. ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ (KMF SHIMUL) ತನ್ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ
ಸದರಿ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ (KMF SHIMUL) ತನ್ನಲ್ಲಿ ಖಾಲಿ ಇರುವ 27 ಸಹಾಯಕ ವ್ಯವಸ್ಥಾಪಕ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಕರ್ನಾಟಕ ಸರ್ಕಾರದಲ್ಲಿ ವೃತ್ತಿಜೀವನ ಬಯಸಿದವರಿಗೆ ಇದೊಂದು ಉತ್ತಮ ಅವಕಾಶ ವಾಗಿದೆ. ಆಸಕ್ತರು ಕೂಡಲೇ ಸೂಕ್ತ ದಾಖಲಾತಿಗಳ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು. ನೇಮಕಾತಿ ಪೂರ್ಣ ವಿವರ ಮುಂದಿದೆ.

ನೇಮಕಾತಿ ಪೂರ್ಣ ವಿವರ
ನೇಮಕಾತಿ ಸಂಸ್ಥೆ: ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ (KMF SHIMUL)
ಹುದ್ದೆಗಳು: ಸಹಾಯಕ ವ್ಯವಸ್ಥಾಪಕ
ಒಟ್ಟು ಹುದ್ದೆಗಳು: 27
ಅರ್ಜಿ ಸಲ್ಲಿಕೆ ಕೊನೆ ದಿನ: ಸೆಪ್ಟಂಬರ್ 29
ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್
ಮಾಸಿಕ ವೇತನ: ಗರಿಷ್ಠ 99,400 ರೂಪಾಯಿ
ಅರ್ಜಿ ಶುಲ್ಕ: 1000 ರೂಪಾಯಿ
ವಿದ್ಯಾರ್ಹತೆ ಏನಿರಬೇಕು?
ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಸೇರಿದಂತೆ ರಾಜ್ಯದ ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ ಪದವಿ ಪಡೆದಿರುವುದು ಕಡ್ಡಾಯ ಎಂದು ಅಧಿಸೂಚನೆ ತಿಳಿಸಿದೆ.
ವಯೋಮಿತಿ ವಿವರ
ಸದರಿ ಈ ಸಹಾಯಕ ವ್ಯವಸ್ಥಾಪಕ ಹುದ್ದೆಗೆ ಸೇರಬಯಸುವ ಅಭ್ಯರ್ಥಿಗಳಿಗೆ ವಯಸ್ಸು ಕನಿಷ್ಠ 18 ವರ್ಷಗಳು ಹಾಗೂ ಗರಿಷ್ಠ 40 ವರ್ಷಗಳು ಆಗಿರಬೇಕು. ಇನ್ನೂ ಜಾತಿ ಮೀಸಲಾತಿ ಆಧಾರದಲ್ಲಿ ಆಯಾ ಅಭ್ಯರ್ಥಿಗಳಿಗೆ (2ಎ, 2ಬಿ, 3ಎ ಮತ್ತು 3ಬಿ) ವಯೋಮಿತಿಯಲ್ಲಿ 3 ವರ್ಷದಿಂದ 05 ವರ್ಷ ಸಡಿಲಿಕೆ ಸಿಗಲಿದೆ.
ಅರ್ಜಿ ಶುಲ್ಕ ಮತ್ತು ಮಾಸಿಕ ವೇತನ
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅದಕ್ಕೆ ನಿಗದಿಯಾಗಿರುವ 1000 ರೂಪಾಯಿ ಅರ್ಜಿ ಶುಲ್ಕವನ್ನು ಅಭ್ಯರ್ಥಿಗಳು (2ಎ, 2ಬಿ, 3ಎ ಮತ್ತು 3ಬಿ) ಪಾವತಿಸಬೇಕು. ಆಯ್ಕೆ ಆದವರಿಗೆ ಮಾಸಿಕ 34100 ರೂಪಾಯಿಯಿಂದ 99400 ರೂ.ವರೆಗೆ ನೀಡಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅರ್ಜಿ ಸಲ್ಲಿಕೆ ವಿಧಾನ ತಿಳಿಯಿರಿ?
ಆಸಕ್ತ ಅಭ್ಯರ್ಥಿಗಳು ಇಲ್ಲಿ ನೀಡಲಾಗಿರುವ ಲಿಂಕ್ 'kmf-shimul-recruitment-2025 / https://www.shimul.coop/?cat=5 ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿ ನೀಡಲಾಗಿರುವ ಅರ್ಜಿ ಭರ್ತಿ ಮಾಡಬೇಕು. ಜಾತಿವಾರು ನಿಮಗೆ ಅರ್ಜಿ ಶುಲ್ಕವಿದ್ದರೆ ಪಾವತಿಸಬೇಕು. ಅಗತ್ಯ ದಾಖಲೆ ಅಪ್ಲೋಡ್ ಮಾಡಬೇಕು.












Click it and Unblock the Notifications