ಕೆಎಎಸ್ ಮುಖ್ಯ ಪರೀಕ್ಷೆ ವೇಳಾಪಟ್ಟಿ ರಿಲೀಸ್
KAS: ಇದೀಗ ರಾಜ್ಯದಲ್ಲಿ ಉದ್ಯೋಗಾವಕಾಶಗಳು ತೆಗದುಕೊಳ್ಳುತ್ತಲೇ ಇವೆ. ಇನ್ನು ಕೆಲವು ಇಲಾಖೆಗಳ ಹುದ್ದೆಗಳ ನೇಮಕಾತಿ ಸಂಬಂಧ ವೇಳಾಪಟ್ಟಿ ಬಿಡುಗಡೆ ಮಾಡಲಾಗುತ್ತಿದೆ. ಹಾಗೆಯೇ ಇದೀಗ 384 ಕೆಎಎಸ್-ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಸಂಬಂಧ ಕರ್ನಾಟಕ ಲೋಕ ಸೇವಾ ಆಯೋಗ ಮುಖ್ಯ ಪರೀಕ್ಷೆಯ ಸಂಭಾವ್ಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಪೂರ್ವಭಾವಿ ಮರು ಪರೀಕ್ಷೆಯನ್ನು 2024ರ ಡಿಸೆಂಬರ್ 29ರಂದು ಕೆಪಿಎಸ್‌ಸಿ ಪರೀಕ್ಷೆ ನಡೆಸಿತ್ತು. ಇದೀಗ ಮುಖ್ಯ ಪರೀಕ್ಷೆಯ ವೇಳಾಪಟ್ಟಿಯನ್ನ ಬಿಡುಗಡೆ ಮಾಡಲಾಗಿದೆ. ಜೊತೆಗೆ ಇಲಾಖೆಯಿಂದ ನಡೆಯುವ ಮುಂದಿನ ಪರೀಕ್ಷೆಗಳ ದಿನಾಂಕಗಳನ್ನ ಬಿಡುಗಡೆ ಮಾಡಲಾಗಿದೆ. ಆದ್ದರಿಂದ ಕರ್ನಾಟಕ ಸರ್ಕಾದ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಿದಂತ ಅಭ್ಯರ್ಥಿಗಳು ಪೂರ್ವ ತಯಾರಿ ಮಾಡಿಕೊಳ್ಳುವುದು ಉತ್ತಮ.

384 ಕೆಎಎಸ್ ಹುದ್ದೆಗಳ ಮುಖ್ಯ ಪರೀಕ್ಷೆಯ ಸಂಭಾವ್ಯ ವೇಳಾಪಟ್ಟಿ ಆಗಿದೆ. ಈ ದಿನಾಂಕಗಳಂದು ಏನಾದರೂ ಕೇಂದ್ರ ಅಥವಾ ರಾಜ್ಯ ಸರ್ಕಾರದ ಆಡಳಿತಾತ್ಮಕದಿಂದ ಸಮಸ್ಯೆ ಆಗದಿದ್ದರೇ ಇದೇ ದಿನಾಂಕದಂದೇ ಪರೀಕ್ಷೆ ನಡೆಸಲಾಗುತ್ತದೆ. 2023-24ರಲ್ಲಿ ಕರ್ನಾಟಕ ಸರ್ಕಾರದಡಿ ಇರುವ ಹುದ್ದೆಗಳಿಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಿದ್ದರೇ ಕೆಪಿಎಸ್‌ಸಿ ವೆಬ್ಸೈಟ್ಗೆ ಭೇಟಿ ನೀಡಿ ಪರಿಶೀಲಿಸಬಹುದಾಗಿದೆ.
2025ರ ಫೆಬ್ರುವರಿ, ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಕೆಪಿಎಸ್ಸಿಯಿಂದ ಹೆಚ್ಚಿನ ಪರೀಕ್ಷೆಗಳು ನಡೆಯುವ ಸಾಧ್ಯತೆಯಿದೆ. ಈಗಾಗಲೇ 384 ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ಪೂರ್ವಭಾವಿ ಪರೀಕ್ಷೆಯ ಕೀ ಉತ್ತರಗಳನ್ನು ಜನವರಿ 30ರಂದು ಅಂತಿಮ ಕೀ ಆನ್ಸರ್ಗಳನ್ನು ಬಿಡುಗಡೆ ಮಾಡಲಾಗಿದೆ. ಸದ್ಯದಲ್ಲೇ ಕೆಎಎಸ್ ಮೇನ್ ಎಕ್ಸಾಂ ಅಧಿಸೂಚನೆ ಹೊರ ಬೀಳಲಿದ್ದು, ಪೂರ್ವಭಾವಿಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಮತ್ತೊಮ್ಮೆ ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ.
ಪರೀಕ್ಷೆ ವೇಳಾಪಟ್ಟಿ
* 384 ಗೆಜೆಟೆಡ್ ಪ್ರೊಬೇಷನರ್ (ಗ್ರೂಪ್-ಎ & ಬಿ)
* 28 ಮಾರ್ಚ್ 2025
* 29 ಮಾರ್ಚ್ 2025
* 01 ಏಪ್ರಿಲ್ 2025
* 02 ಏಪ್ರಿಲ್ 2025
ಕೆಪಿಎಸ್‌ಸಿ ಕೆಎಎಸ್ ಪೂರ್ವಭಾವಿ ಮರುಪರೀಕ್ಷೆಯನ್ನು ಕಳೆದ 2024 ಡಿಸೆಂಬರ್ 29 ರಂದು ನಡೆಸಿ, ತಾತ್ಕಾಲಿಕ ಕೀ ಉತ್ತರಗಳನ್ನು 2025 ಜನವರಿ 15 ರಂದು ಪ್ರಕಟಿಸಿ, ಆಕ್ಷೇಪಣೆ ಆಹ್ವಾನಿಸಿತ್ತು. ಸದರಿ ಆಕ್ಷೇಪಣೆಗಳನ್ನು ಪರಿಶೀಲಿಸಿದ್ದು, ಜನವರಿ 30 ರಂದು ಅಂತಿಮ ಕೀ ಉತ್ತರಗಳನ್ನು ಬಿಡುಗಡೆ ಮಾಡಿದೆ.
ಮುಖ್ಯ ಪರೀಕ್ಷೆ ಪತ್ರಿಕೆಗಳು ಮತ್ತು ಅಂಕಗಳ ವಿವರ
1. ಕನ್ನಡ : 150 ಅಂಕಗಳು (ಪರೀಕ್ಷೆ ಅವಧಿ 2 ಗಂಟೆ )
2. ಇಂಗ್ಲಿಷ್ : 150 ಅಂಕಗಳು (ಪರೀಕ್ಷೆ ಅವಧಿ 2 ಗಂಟೆ)
ಮುಖ್ಯ ಪರೀಕ್ಷೆ ಇತರೆ ಪತ್ರಿಕೆಗಳು
* ಪತ್ರಿಕೆ-1: ಪ್ರಬಂಧಗಳು - 250 ಅಂಕ
* ಪತ್ರಿಕೆ-2: ಸಾಮಾನ್ಯ ಅಧ್ಯಯನ-1 (250 ಅಂಕಗಳು)
* ಪತ್ರಿಕೆ-3: ಸಾಮಾನ್ಯ ಅಧ್ಯಯನ-2 (250 ಅಂಕಗಳು)
* ಪತ್ರಿಕೆ-4: ಸಾಮಾನ್ಯ ಅಧ್ಯಯನ-3 (250 ಅಂಕಗಳು)
* ಪತ್ರಿಕೆ-5: ಸಾಮಾನ್ಯ ಅಧ್ಯಯನ-4 (250 ಅಂಕಗಳು)












Click it and Unblock the Notifications