ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

Written By: Ramesh
Subscribe to Oneindia Kannada

ಬೆಂಗಳೂರು, ಜನವರಿ. 10 : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಪೊಲೀಸ್ ಸಬ್ ಇನ್ಸ್ ಪೆಕ್ಟರ್ (ಡಿಎಸ್ ಐ) ಹುದ್ದೆಗಳ ನೇಮಕಾತಿಗಾಗಿ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ದಿನಾಂಕ 25 ಜನವರಿ 2017ರೊಳಗೆ ಸಲ್ಲಿಸಬೇಕು.

ಹುದ್ದೆ: ಡಿಟೆಕ್ಟಿವ್ ಸಬ್ ಇನ್ಸ್ ಪೆಕ್ಟರ್(DSI)(ಮಹಿಳಾ ಮತ್ತು ಪುರುಷ)
ಹುದ್ದೆ ಸ್ಥಳ: ಕರ್ನಾಟಕ
ಒಟ್ಟು ಹುದ್ದೆಗಳು: 12
ವೇತನ: 21600 ರಿಂದ 40050(ತಿಂಗಳಿಗೆ)

Karnataka Police Recruitment 2017 For Sub Inspector Posts

ವಯೋಮಿತಿ: ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಲು ಮಹಿಳಾ ಹಾಗೂ ಪುರುಷ ಅಭ್ಯರ್ಥಿಗಳು ಕನಿಷ್ಠ 21, ಗರಿಷ್ಠ 28 ವಯೋಮಿತಿ ಉಳ್ಳವರಾಗಿರಬೇಕು.

ವಿದ್ಯಾರ್ಹತೆ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿದರರಾಗಿರಬೇಕು. ಇಂಜಿನಿಯರಿಂಗ್, ಕಾನೂನು, ತಂತ್ರಜ್ಞಾನ, ಮಾಸ್ಟರ್ ಡಿಗ್ರಿ ಇನ್ ಕಂಪ್ಯೂಟರ್ ಸೈನ್ಸ್ ನಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಅಭ್ಯರ್ಥಿಗಳ ವಯಕ್ತಿಕ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಕೆ ಹೇಗೆ? ಮತ್ತು ಅರ್ಜಿ ಶುಲ್ಕ ಎಷ್ಟು? ಎಂಬುವುದನ್ನು ತಿಳಿಯಲು ಇಲ್ಲಿ ಕ್ಲಿಕ್ಕಿಸಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Karnataka Police invites application for the position of 12 Detective Sub Inspector (DSI) men and women vacancies. Apply online before 25th January 2017.
Please Wait while comments are loading...