ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 877 ಹುದ್ದೆಗಳ ಭರ್ತಿ

ಬೆಂಗಳೂರು, ಜೂನ್ 04 : ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆ ಒಪ್ಪಿಗೆ ಸಿಕ್ಕಿದೆ. 2019 ರಿಂದ 2022ರ ತನಕ ಒಟ್ಟು 877 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

ಪೊಲೀಸ್ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಗೆ ಆರ್ಥಿಕ ಇಲಾಖೆ ಒಪ್ಪಿಗೆ ಸಿಕ್ಕಿದೆ. ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳನ್ನು ವೃಂದ ಮತ್ತು ನೇಮಕಾತಿ ನಿಯಮಗಳ ಅನ್ವಯ ಭರ್ತಿ ಮಾಡಲಾಗುತ್ತದೆ. 2019-20ನೇ ಸಾಲಿನಲ್ಲಿ 292 ಹುದ್ದೆ ಭರ್ತಿಯಾಗಲಿದೆ.

ಮಂಜೂರಾತಿ ನೀಡಲಾಗಿರುವ ಹುದ್ದೆಗಳನ್ನುಆಯಾ ಸಾಲಿನಲ್ಲಿ ಭರ್ತಿ ಮಾಡಿಕೊಳ್ಳಲು ವೆಚ್ಚವಾಗುವ ಮೊತ್ತ ಹಾಗೂ ಅಗತ್ಯವಿದ್ದರೆ ಕೆಟಿಪಿಪಿ ಅಧಿನಿಯಮದ ಕಲಂ 4ಜಿ ರಡಿ ವಿನಾಯಿತಿ ಪಡೆಯಲು ಸರ್ಕಾರಕ್ಕೆ ಪ್ರತ್ಯೇಕವಾಗಿ ಸೂಕ್ತ ಪ್ರಸ್ತಾವನೆ ಸಲ್ಲಿಸಲು ಸಹ ತಿಳಿಸಲಾಗಿದೆ.

ಪೊಲೀಸ್ ಇಲಾಖೆಯ ನೇಮಕಾತಿ ಕುರಿತು ಆರ್ಥಿಕ ಇಲಾಖೆ ಟಿಪ್ಪಣಿ ಸಂಖ್ಯೆ ಆಇ 228 ವೆಚ್ಚ 11/2018 ದಿನಾಂಕ31/5/2019ರ ಸಹಸಮಿತಿರನ್ವಯ ಹೊರಡಿಸಲಾಗಿದೆ. ಶೀಘ್ರದಲ್ಲೇ ಈ ಕುರಿತು ಅಂತಿಮ ಅಧಿಸೂಚನೆ ಪ್ರಕಟವಾಗುವ ನಿರೀಕ್ಷೆ ಇದೆ.....

ಆರ್ಥಿಕ ಇಲಾಖೆ ಅನುಮೋದನೆ

ಆರ್ಥಿಕ ಇಲಾಖೆ ಅನುಮೋದನೆ

ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳನ್ನು ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ಈ ಕೆಳಕಂಡಂತೆ ಭರ್ತಿ ಮಾಡಲು ಮಂಜೂರಾತಿ ನೀಡಿ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದೆ. 2019-20 ರಿಂದ 2021-22ರ ತನಕ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

ಯಾವ-ಯಾವ ಹುದ್ದೆಗಳು

ಯಾವ-ಯಾವ ಹುದ್ದೆಗಳು

2019-20 ರಿಂದ 20121-22ರ ತನಕ ಒಟ್ಟು 877 ಹುದ್ದೆಗಳನ್ನು ಭರ್ತಿ ಮಾಡಲು ಒಪ್ಪಿಗೆ ಸಿಕ್ಕಿದೆ. ಹುದ್ದೆಗಳ ವಿವರ ಇಲ್ಲಿದೆ...
* ಪಿಎಸ್‌ಐ (ಸಿವಿಲ್) 556
* ಆರ್‌ಎಸ್‌ಐ (ಸಿಎಆರ್/ಡಿಎಆರ್) 120
* ಎಸ್‌ಪಿಎಲ್. ಆರ್‌ಎಸ್‌ಐ (ಕೆಎಸ್‌ಆರ್‌ಪಿ) 120
* ಪಿಎಸ್‌ಐ (ವೈರ್‌ಲೆಸ್) 51
* ಪಿಎಸ್‌ಐ (ಕೆಎಸ್‌ಐಎಸ್‌ಎಫ್) 51
* ಪಿಎಸ್‌ಐ (ಸಿಐಡಿ) 4

2019-20ನೇ ಸಾಲಿನ ಹುದ್ದೆ

2019-20ನೇ ಸಾಲಿನ ಹುದ್ದೆ

2019-20ನೇ ಸಾಲಿನಲ್ಲಿ ಒಟ್ಟು 292 ಹುದ್ದೆಗಳನ್ನು ಪೊಲೀಸ್ ಇಲಾಖೆ ಭರ್ತಿ ಮಾಡಲಿದೆ. ಹುದ್ದೆಗಳ ವಿವರ ಇಲ್ಲಿದೆ....
* ಪಿಎಸ್‌ಐ (ಸಿವಿಲ್) 200
* ಆರ್‌ಎಸ್‌ಐ (ಸಿಎಆರ್/ಡಿಎಆರ್) 40
* ಎಸ್‌ಪಿಎಲ್. ಆರ್‌ಎಸ್‌ಐ (ಕೆಎಸ್‌ಆರ್‌ಪಿ) 40
* ಪಿಎಸ್‌ಐ (ವೈರ್‌ಲೆಸ್) 5
* ಪಿಎಸ್‌ಐ (ಕೆಎಸ್‌ಐಎಸ್‌ಎಫ್) 5
* ಪಿಎಸ್‌ಐ (ಸಿಐಡಿ) 2

ಶೀಘ್ರದಲ್ಲೇ ಅಧಿಸೂಚನೆ ಪ್ರಕಟ

ಶೀಘ್ರದಲ್ಲೇ ಅಧಿಸೂಚನೆ ಪ್ರಕಟ

292 ಹುದ್ದೆಗಳ ಭರ್ತಿಗೆ ಕರ್ನಾಟಕ ಪೊಲೀಸ್ ಶೀಘ್ರದಲ್ಲಿಯೇ ಅಧಿಸೂಚನೆ ಹೊರಡಿಸಲಿದೆ. ಅಭ್ಯರ್ಥಿಗಳಿಗೆ ವಿದ್ಯಾರ್ಹತೆ, ವೇತನ ಮುಂತಾ ವಿವರಗಳು ನೇಮಕಾತಿ ಆದೇಶದಲ್ಲಿ ಪ್ರಕಟವಾಗಲಿದೆ. ಆಸಕ್ತರು ಅರ್ಜಿ ಹಾಕಲು ಸಿದ್ಧರಾಗಿರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+