ಕರ್ನಾಟಕ ಹೈಕೋರ್ಟಿನಲ್ಲಿ 30 ಹುದ್ದೆಗಳಿವೆ, ಅರ್ಜಿ ಸಲ್ಲಿಸಿ
ಬೆಂಗಳೂರು, ಸೆ. 24: ಕರ್ನಾಟಕ ಹೈಕೋರ್ಟಿನಲ್ಲಿ2020ನೇ ಸಾಲಿನ ನೇಮಕಾತಿ ಮುಂದುವರೆಸಲಾಗಿದೆ. ಜಿಲ್ಲಾ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಈ ಕುರಿತಂತೆ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಿಸಲಾಗಿದೆ. 30 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅರ್ಹ, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅಕ್ಟೋಬರ್ 21 ಕೊನೆ ದಿನಾಂಕವಾಗಿದೆ.
ಸಂಸ್ಥೆ ಹೆಸರು: ಕರ್ನಾಟಕ ಹೈಕೋರ್ಟ್
ಹುದ್ದೆ: District Judge
ಉದ್ಯೋಗ ಸ್ಥಳ: ಬೆಂಗಳೂರು-ಕರ್ನಾಟಕ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಅಕ್ಟೋಬರ್ 21,2020
ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಕಾನೂನು ವಿಷಯದಲ್ಲಿ ಪದವಿ

ವಯೋಮಿತಿ : 45 ವರ್ಷ, ಅಕ್ಟೋಬರ್ 21,2020ರಂತೆ
ಎಸ್ ಸಿ/ ಎಸ್ಟಿ/ ಹಿಂದುಳಿದ ವರ್ಗದ ಕೆಟಗೆರಿ -1 ಅಭ್ಯರ್ಥಿಗಳಿಗೆ: 3 ವರ್ಷ ವಿನಾಯಿತಿ
ನೇಮಕಾತಿ ಪ್ರಕ್ರಿಯೆ: ಅಭ್ಯರ್ಥಿಗಳ ಆಯ್ಕೆಯನ್ನು ಮೌಖಿಕ ಪರೀಕ್ಷೆ, ಲಿಖಿತಾ ಪರೀಕ್ಷೆ, ವೈಯಕ್ತಿಕ ಸಂದರ್ಶನ.
ಅರ್ಜಿ ಶುಲ್ಕ : ಕರ್ನಾಟಕ ಹೈಕೋರ್ಟ್ ಹೆಸರಿನಲ್ಲಿ ಅರ್ಜಿ ಶುಲ್ಕವನ್ನು ಡೆಬಿಟ್/ಕ್ರೆಡಿಟ್ ಕಾರ್ಡ್/ ನೆಟ್ ಬ್ಯಾಕಿಂಗ್/ ಅಥವಾ ಇ ಚಲನ್ ಮೂಲಕ ಪಾವತಿಸಬಹುದು
ಪೂರ್ವಭಾವಿ ಪರೀಕ್ಷೆ ಶುಲ್ಕ
* ಎಸ್ ಸಿ/ ಎಸ್ಟಿ/ಕೆಟಗೆರಿ 1: 250ರು
* ಇತರೆ ಎಲ್ಲಾ ಅಭ್ಯರ್ಥಿಗಳು: 500ರು
ಮುಖ್ಯ ಪರೀಕ್ಷೆ ಶುಲ್ಕ
* ಎಸ್ ಸಿ/ ಎಸ್ಟಿ/ಕೆಟಗೆರಿ 1: 750ರು
* ಇತರೆ ಎಲ್ಲಾ ಅಭ್ಯರ್ಥಿಗಳು: 1000ರು
ಪ್ರಮುಖ ದಿನಾಂಕ:
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 21/09/2020
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಕೆ ಕೊನೆ ದಿನಾಂಕ: 21/10/2020
ಅರ್ಜಿ ಸಲ್ಲಿಸುವ ದಿನಾಂಕ, ಮುಂತಾದ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ












Click it and Unblock the Notifications