ಬೆಂಗಳೂರಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹಾಗಾದರೆ ಇಲ್ಲಿದೆ ಸುವರ್ಣಾವಕಾಶ!

ಉದ್ಯೋಗ ಹುಡುಕಲು ಪರದಾಡುತ್ತಿರುವ, ಇತ್ತೀಚೆಗೆ ವಿದ್ಯಾಭ್ಯಾಸ ಮುಗಿಸಿ ಬಂದಿರುವವರಿಗು ಉತ್ತಮ ಅವಕಾಶ ಇಲ್ಲಿದೆ. ಅದರಲ್ಲೂ ಬೆಂಗಳೂರಿನಲ್ಲಿ ಕೆಲಸ ಬೇಕು ಅಂತಾ ಎಲ್ಲಾ ಕಡೆ ಅಲೆದಾಡಿದ್ದ ಯುವಕರಿಗೆ ಕರ್ನಾಟಕ ಸರ್ಕಾರವೇ ಗುಡ್ ನ್ಯೂಸ್ ಕೊಟ್ಟಿದೆ. ಹೊಸ ವರ್ಷ ಆರಂಭವಾಗುವ ಜೊತೆಗೆ, ನಿಮಗೆ ಹೊಸ ಕೆಲಸ ಕೂಡ ಸಿಗುವ ಸಾಧ್ಯತೆ ದಟ್ಟವಾಗಿದೆ. ಈ ಮಾತು ನಿಜವಾಗಬೇಕು ಅಂದ್ರೆ ನೀವು ಮೊದಲು ಒಂದು ಕೆಲಸ ಮಾಡಬೇಕು!

ಹೌದು, ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಅಸ್ತಿತ್ವಕ್ಕೆ ಬರುವ ಮೊದಲು ರಾಜ್ಯದಲ್ಲಿ ಉದ್ಯೋಗ ಸೃಷ್ಟಿಯ ಭರವಸೆ ನೀಡಿತ್ತು. ಅದ್ರಲ್ಲೂ ಕೊರೊನಾ ಕಂಟಕದಿಂದ ನರಳಿದ್ದ ಉದ್ಯಮ ವಲಯಕ್ಕೆ ಚೇತರಿಕೆ ಸಿಕ್ಕಿದ್ದು, ಹೊಸ ಹೊಸ ಕೆಲಸಗಳು ಸೃಷ್ಟಿಯಾಗಿ ನವಚೈತನ್ಯ ಮೂಡಿತ್ತು. ಹೀಗಿದ್ದಾಗ ಕನ್ನಡಿಗರಿಗೆ ಉದ್ಯೋಗ ದೊರಕಿಸುವ ಭರವಸೆಯನ್ನ ನೀಡಿದ್ದ ಸಿದ್ದರಾಮಯ್ಯ ಅವರ ಸರ್ಕಾರ ಅದನ್ನ ಈಗ ಜಾರಿಗೆ ತರಲು ಮುಂದಾಗಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

Karnataka Government Is Planning To Organise Job Fair In January 2024

ಕೆಲಸ ಹುಡುಕುತ್ತಿರುವವರಿಗೆ ಗುಡ್ ನ್ಯೂಸ್!

ಅಂದಹಾಗೆ ಕರ್ನಾಟಕದ ರಾಜಧಾನಿ ಬೆಂಗಳೂರಲ್ಲಿ ಉದ್ಯೋಗ ಮೇಳ ಆಯೋಜನೆಯನ್ನು ಮಾಡೋದಕ್ಕೆ, ಇಂದು ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಮಹತ್ವದ ಸಭೆಯನ್ನು ನಡೆಸಲಾಗಿದೆ. ಈ ಸಭೆ ಬಳಿಕ ಮಾಹಿತಿ ಕೂಡ ನೀಡಲಾಗಿದೆ. ಕರ್ನಾಟಕ ಸಿಎಂ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಉದ್ಯೋಗ ಮೇಳದ ಬಗ್ಗೆ ಮಾಹಿತಿ ನೀಡಲಾಗಿದ್ದು ಹೊಸ ವರ್ಷದ ಆರಂಭದಲ್ಲೇ ಕೆಲಸ ಹುಡುಕುತ್ತಿರುವ ಯುವ ಸಮೂಹಕ್ಕೆ ಗುಡ್ ನ್ಯೂಸ್ ಸಿಗುವುದು ಪಕ್ಕಾ ಆಗಿದೆ.

ರಾಜ್ಯಮಟ್ಟದ ಉದ್ಯೋಗ ಮೇಳ ಆಯೋಜಿಸುವ ಕುರಿತಾಗಿ, ಮುಖ್ಯಮಂತ್ರಿ @siddaramaiah ಅವರ ಅಧ್ಯಕ್ಷತೆಯಲ್ಲಿ ಇಂದು ಪೂರ್ವಭಾವಿ ಸಭೆ ನಡೆಸಿ, ಚರ್ಚಿಸಲಾಯಿತು ಎಂದು ಟ್ವೀಟ್ ಮೂಲಕ ಮುಖ್ಯಮಂತ್ರಿಗಳ ಕಚೇರಿ ಮಾಹಿತಿ ನೀಡಿದೆ. ಸಭೆಯಲ್ಲಿ ಉದ್ಯೋಗ ಮೇಳದ ಯಶಸ್ವಿ ಆಯೋಜನೆಗೆ 6 ಸಚಿವರ ಒಳಗೊಂಡ ಸಮಿತಿ ರಚನೆಗೆ ನಿರ್ಧರಿಸಲಾಯಿತು, ಎಂದು ಕೂಡ ತಿಳಿಸಲಾಗಿದೆ.

Karnataka Government Is Planning To Organise Job Fair In January 2024

ಮಹತ್ವದ ಸಭೆಯಲ್ಲಿ ಯಾರೆಲ್ಲಾ ಇದ್ದರು?

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಗೃಹ ಸಚಿವ ಡಾ. ಜಿ. ಪರಮೇಶ್ವರ, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ, ಐಟಿ, ಬಿಟಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಸೇರಿದಂತೆ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್‌, ಯುವ ಸಬಲೀಕರಣ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ. ನಾಗೇಂದ್ರ, ಕಾರ್ಮಿಕ ಸಚಿವ ಸಂತೋಷ್‌ ಲಾಡ್‌, ಸಿಎಂ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಹಾಜರಿದ್ದರು. ಇನ್ನು ಉದ್ಯೋಗ ಮೇಳದ ಯಶಸ್ವಿ ಆಯೋಜನೆಗೆ ಹಲವು ಕ್ರಮ ಕೈಗೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+