Karnataka bank recruitment: ಕರ್ನಾಟಕ ಬ್ಯಾಂಕ್ ನೇಮಕಾತಿ, ಹುದ್ದೆ ವೇತನ ವಿವರ

ಬೆಂಗಳೂರು, ಜುಲೈ 10: ಕರ್ನಾಟಕ ಬ್ಯಾಂಕ್ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹರು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಕೆ ಮಾಡಲು ಜುಲೈ 26 ಕೊನೆಯ ದಿನವಾಗಿದೆ.

ಪದವೀಧರರು, ಸ್ನಾತಕೋತ್ತರ ಪದವೀಧರರು ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು. ಕ್ಲೌಡ್ ಸೆಕ್ಯುರಿಟಿ ಇಂಜಿನಿಯರ್, ಡೇಟಾ ಇಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕಿದೆ.

Karnataka Bank Recruitment Know Post And Salary Details

ಡೇಟಾ ಇಂಜಿನಿಯರ್ 11, ಕ್ಲೌಡ್‌ ಇಂಜಿನಿಯರ್ 1, ಅಪ್ಲಿಕೇಶನ್ ಭದ್ರತಾ ಇಂಜಿನಿಯರ್ 1, ಫೈರ್ ವಾಲ್ ನಿರ್ವಾಹಕರು 1 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಡೇಟಾ ಇಂಜನಿಯರ್‌ ಹುದ್ದೆಗೆ ಎಂಸಿಎ, ಎಂಟೆಕ್, ಬಿಸಿಎ, ಬಿಇ/ ಬಿ.ಟೆಕ್ ಪದವಿ ಪಡೆದಿರಬೇಕು.

ಕ್ಲೌಡ್ ಸೆಕ್ಯುರಿಟಿ, ಅಪ್ಲಿಕೇಶನ್ ಇಂಜಿನಿಯರ್, ಫೈರ್‌ವಾಲ್ ನಿರ್ವಾಹಕ ಹುದ್ದೆಗೆ ಬಿಇ, ಬಿಟೆಕ್, ಪದವೀಧರರು, ಎಂಸಿಎ ಪದವಿ ಪಡೆದವರು ಅರ್ಜಿ ಸಲ್ಲಿಕೆ ಮಾಡಬಹುದು.

ವಯೋಮಿತಿ, ವೇತನ ವಿವರ: ಡೇಟಾ ಇಂಜಿನಿಯರ್ ಹುದ್ದೆಗೆ 30, ಕ್ಲೌಡ್ ಸೆಕ್ಯುರಿಟಿ ಇಂಜಿನಿಯರ್ 35, ಅಪ್ಲಿಕೇಶನ್ ಇಂಜಿನಿಯರ್ 35, ಫೈರ್‌ವಾಲ್ ನಿರ್ವಾಹಕ ಹುದ್ದೆಗೆ 35 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ.

ಡೇಟಾ ಇಂಜಿನಿಯರ್ ಹುದ್ದೆಗೆ 30, ಕ್ಲೌಡ್ ಸೆಕ್ಯುರಿಟಿ ಇಂಜಿನಿಯರ್ 35, ಅಪ್ಲಿಕೇಶನ್ ಇಂಜಿನಿಯರ್ 35, ಫೈರ್‌ವಾಲ್ ನಿರ್ವಾಹಕ ಹುದ್ದೆಗೆ 35 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರಿನಲ್ಲಿ ಕೆಲಸ ನಿರ್ವಹಣೆ ಮಾಡಬೇಕಿದೆ.

ಡೇಟಾ ಇಂಜಿನಿಯರ್ ಹುದ್ದೆಗೆ 48,480-85,920 ರೂ., ಕ್ಲೌಡ್ ಸೆಕ್ಯುರಿಟಿ ಇಂಜಿನಿಯರ್ 64,820-93,960 ರೂ., ಅಪ್ಲಿಕೇಶನ್ ಇಂಜಿನಿಯರ್ 64,820-93,960, ಫೈರ್‌ವಾಲ್ ನಿರ್ವಾಹಕ ಹುದ್ದೆಗೆ 64,820-93,960 ರೂ. ವೇತನ ನಿಗದಿ ಮಾಡಲಾಗಿದೆ.

ಅಭ್ಯರ್ಥಿಗಳು ಅರ್ಜಿಯ ನಮೂನೆ ಮತ್ತು ಅಗತ್ಯ ದಾಖಲೆಗಳ ಜೊತೆ ಅರ್ಜಿಗಳನ್ನು [email protected] ಇ-ಮೇಲ್‌ ವಿಳಾಸಕ್ಕೆ ಕಳಿಸಬೇಕು. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ https://karnatakabank.com/ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಉಚಿತ ಕೌಶಲ್ಯಾಭಿವೃದ್ದಿ ಕೋರ್ಸ್‌ಗೆ ಅರ್ಜಿ ಹಾಕಿ: ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯವರು ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ಶಿವಮೊಗ್ಗ ಇಲ್ಲಿ ಎಐಟಿಟಿ- ಎಸ್‍ಸಿಪಿ/ ಟಿಎಸ್‍ಪಿ ಯೋಜನೆಯಡಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ನಿರುದ್ಯೋಗ ಯುವಕ/ ಯುವತಿಯರಿಗೆ ಉಚಿತವಾಗಿ ಕೌಶಲ್ಯಾಭಿವೃದ್ದಿ ತರಬೇತಿ ನೀಡಲು ಅರ್ಜಿ ಆಹ್ವಾನಿಸಿದ್ಧಾರೆ.

ಐಟಿಐ ಆದವರಿಗೆ ಸಿಎನ್‍ಸಿ ಆಪರೇಟರ್-ವರ್ಟಿಕಲ್ ಮಷಿನ್ನಿಂಗ್ ಸೆಂಟರ್ 4 ತಿಂಗಳ ತರಬೇತಿ, ಡಿಪ್ಲೊಮಾ/ ಬಿಇ ಆದವರಿಗೆ ಸಿಎನ್‍ಸಿ ಪ್ರೊಗ್ರಾಮರ್/ ಪ್ರೊ-ಇ/ ಆಟೋಕ್ಯಾಡ್ 4 ತಿಂಗಳ ತರಬೇತಿ, ಎಸ್‍ಎಸ್‍ಎಲ್‍ಸಿ ಆದವರಿಗೆ 4 ತಿಂಗಳ ಮಿಲ್ಲರ್/ ಟರ್ನರ್ ಮತ್ತು 12 ತಿಂಗಳ ಅವಧಿಯ ಟೂಲ್ ರೂಂ ಮಷಿನಿಸ್ಟ್ ತರಬೇತಿಯನ್ನು ನೀಡಲಾಗುತ್ತದೆ.

ತರಬೇತಿ ಅವಧಿಯಲ್ಲಿ ರೂ. 2500 ಪ್ರತಿ ತಿಂಗಳು ಶಿಷ್ಯವೇತನ ನೀಡಲಾಗುವುದು. ಆಸಕ್ತ ಅರ್ಹ ಅಭ್ಯರ್ಥಿಗಳು ತಮ್ಮ ವಯಸ್ಸು, ವಿದ್ಯಾರ್ಹತೆ ದಾಖಲಾತಿಗಳು ಹಾಗೂ ವೈಯಕ್ತಿಕ ವಿವರಗಳೊಮದಿಗೆ ಜುಲೈ 27 ರೊಳಗೆ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಪ್ಲಾಟ್ ನಂ ಸಿಎ-38, ನಿದಿಗೆ ಇಂಡಸ್ಟ್ರಿಯಲ್ ಏರಿಯಾ, ಮಾಚೇನಹಳ್ಳಿ, ಶಿವಮೊಗ್ಗ ಇಲ್ಲಿಗೆ ಅರ್ಜಿ ಸಲ್ಲಿಸಬಹುದು.

ಆಸಕ್ತರು ಹೆಚ್ಚಿನ ಮಾಹಿತಿಗೆ 08182-246054, 9448307027, 9449286543 ಸಂಖ್ಯೆಗೆ ಕರೆ ಮಾಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+