ಕರ್ನಾಟಕ ಬ್ಯಾಂಕ್‌ನಲ್ಲಿ ಕೆಲಸ ಖಾಲಿ ಇದೆ; ವೇತನ 87 ಸಾವಿರ

ಬೆಂಗಳೂರು, ಜನವರಿ 23 : ಕರ್ನಾಟಕ ಬ್ಯಾಂಕ್ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಅರ್ಜಿಗಳನ್ನು ಸಲ್ಲಿಸಲು ಫೆಬ್ರವರಿ 7, 2020 ಕೊನೆಯ ದಿನವಾಗಿದೆ.

ಕರ್ನಾಟಕ ಬ್ಯಾಂಕ್ ವಿವಿಧ Law officer ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಯ್ಕೆಯಾದ ಅಭ್ಯರ್ಥಿಗಳು ದೇಶದ ಯಾವುದೇ ನಗರದಲ್ಲಿ ಕೆಲಸ ಮಾಡಬೇಕಿದೆ. ಅಭ್ಯರ್ಥಿಗಳಿಗೆ 87,600 ರೂ. ವೇತನ ನಿಗದಿ ಮಾಡಲಾಗಿದೆ.

ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಾನೂನು ವಿಷಯದಲ್ಲಿ ಪದವಿ ಪಡೆದಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವನ್ನು ನಿಗದಿ ಮಾಡಿಲ್ಲ.

Karnataka Bank Recruitment 2020 Law Officer Post

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 1 ಜನವರಿ 1ಕ್ಕೆ ಅನ್ವಯವಾಗುವಂತೆ 32 ವರ್ಷವನ್ನು ಮೀರಬಾರದು. ಎಸ್‌ಸಿ ಮತ್ತು ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷದ ವಯೋಮಿತಿ ಸಡಿಲಿಕೆ ಇರುತ್ತದೆ.

ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ, ಬಳಿಕ ಅದರ ಪ್ರಿಂಟ್‌ ಔಟ್ ತೆಗೆದು ಅಗತ್ಯ ದಾಖಲೆಗಳ ಸಮೇತ ಅಂಚೆ ಮೂಲಕ ಸಲ್ಲಿಸಬೇಕು. ಅರ್ಜಿ ಭರ್ತಿ ಮಾಡುವಾಗ ಸಂಪರ್ಕಕ್ಕೆ ಸಿಗುವ ಮೊಬೈಲ್ ನಂಬರ್ ಮತ್ತು ಸರಿಯಾದ ಇ-ಮೇಲ್ ಇಡಿಯನ್ನು ನಮೂದಿಸಬೇಕು.

ಅರ್ಜಿಗಳನ್ನು ಭರ್ತಿ ಮಾಡಿದ ಬಳಿಕ ಸ್ಪೀಡ್ ಅಥವ ರಿಜಿಸ್ಟರ್ ಪೋಸ್ಟ್ ಮೂಲಕ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 7.

ಅರ್ಜಿಗಳನ್ನು ಸಲ್ಲಿಸಲು ವಿಳಾಸ

The Deputy General Manager (HR & IR)
Karnataka Bank Ltd.
Head Office, Post Box No.599
Mahaveera Circle, Kankanady
Mangaluru-575002

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+