ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲ್ಯಾಣ-ಕರ್ನಾಟಕ ಭಾಗದ ನೇರ ನೇಮಕಾತಿ, ಸುತ್ತೋಲೆ

ಕಲ್ಯಾಣ-ಕರ್ನಾಟಕ ಪ್ರದೇಶದ ಸ್ಥಳೀಯ ವ್ಯಕ್ತಿಗಳಿಗೆ ಮೀಸಲಿರಿಸಿರುವ ನೇರ ನೇಮಕಾತಿ ಹುದ್ದೆಗಳನ್ನು ಭರ್ತಿ ಮಾಡುವಾಗ ವಿವಿಧ ನೇಮಕಾತಿ ಪ್ರಾಧಿಕಾರಗಳು ಈ ನಿಯಮ ಪಾಲಿಸಬೇಕು ಎಂದು ಸುತ್ತೋಲೆ ಹೊರಡಿಸಲಾಗಿದೆ.

|
Google Oneindia Kannada News

ಬೆಂಗಳೂರು, ಫೆಬ್ರವರಿ 03; ಕರ್ನಾಟಕ ಸರ್ಕಾರ ಕಲ್ಯಾಣ-ಕರ್ನಾಟಕ ಪ್ರದೇಶದ ಸ್ಥಳೀಯ ವ್ಯಕ್ತಿಗಳಿಗೆ ಮೀಸಲಿರಿಸಿರುವ ನೇರ ನೇಮಕಾತಿ ಹುದ್ದೆಗಳನ್ನು ಭರ್ತಿ ಮಾಡುವಾಗ ವಿವಿಧ ನೇಮಕಾತಿ ಪ್ರಾಧಿಕಾರಗಳು ಪಾಲಿಸಬೇಕಾದ ವಿಧಿ-ವಿಧಾನಗಳ ಬಗ್ಗೆ ಸುತ್ತೋಲೆ ಹೊರಡಿಸಿದೆ.

ಸರ್ಕಾರದ ಅಧೀನ ಕಾರ್ಯದರ್ಶಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವಾ ನಿಯಮಗಳು-1) ವೀರಭದ್ರ ಈ ಸುತ್ತೋಲೆ ಹೊರಡಿಸಿದ್ದಾರೆ. ನೇಮಕಾತಿಗಳ ಬಗ್ಗೆ ಸ್ಪಷ್ಟನೆಗಳನ್ನು ನೀಡಿದ್ದಾರೆ.

Kalyana Karnataka Utsav 2023 : ಫೆಬ್ರವರಿ 24 ರಿಂದ ಮೂರು ದಿನ ಕಲ್ಯಾಣ ಕರ್ನಾಟಕ ಉತ್ಸವ 2023Kalyana Karnataka Utsav 2023 : ಫೆಬ್ರವರಿ 24 ರಿಂದ ಮೂರು ದಿನ ಕಲ್ಯಾಣ ಕರ್ನಾಟಕ ಉತ್ಸವ 2023

ದಿನಾಂಕ 15/6/2022ರ ಸುತ್ತೋಲೆಯಲ್ಲಿ ದಿನಾಂಕ 6/6/2020ರ ಸುತ್ತೋಲೆಯನ್ನು ಹಿಂಪಡೆದು, ವಿವಿಧ ನೇಮಕಾತಿ ಪ್ರಾಧಿಕಾರಗಳು ಇನ್ನು ಮುಂದೆ ಮಿಕ್ಕುಳಿದ ವೃಂದ ಹಾಗೂ ಸ್ಥಳೀಯ ವೃಂದದಲ್ಲಿ ಲಭ್ಯವಿರುವ ನೇರ ನೇಮಕಾತಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸುವ ಅಧಿಸೂಚನೆಯನ್ನು ಪ್ರತ್ಯೇಕವಾಗಿ ಹೊರಡಿಸಿ, ಪ್ರತ್ಯೇಕವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಿ, ಪ್ರತ್ಯೇಕವಾಗಿ ಆಯ್ಕೆ ಪ್ರಕ್ರಿಯೆ ಕೈಗೊಂಡು ಆಯ್ಕೆಯನ್ನು ಅಂತಿಮಗೊಳಿಸುವಂತೆ ಸೂಚಿಸಲಾಗಿರುತ್ತದೆ.

ಕಲ್ಯಾಣ ಕರ್ನಾಟಕದ ರೈತರಿಗೆ ಸಿಹಿಸುದ್ದಿ: ಶೀಘ್ರದಲ್ಲಿ 68 ಸಂಚಾರಿ ಪಶು ಚಿಕಿತ್ಸಾಲಯಗಳು ಆರಂಭಕಲ್ಯಾಣ ಕರ್ನಾಟಕದ ರೈತರಿಗೆ ಸಿಹಿಸುದ್ದಿ: ಶೀಘ್ರದಲ್ಲಿ 68 ಸಂಚಾರಿ ಪಶು ಚಿಕಿತ್ಸಾಲಯಗಳು ಆರಂಭ

 Kalyana Karnataka Region Recruitment Govt Circular

ಮುಂದುವರೆದು, ಸದರಿ ಸುತ್ತೋಲೆಯ ಕೊನೆಯ ಕಂಡಿಕೆಯಲ್ಲಿ ಸದರಿ ಸುತ್ತೋಲೆಯು ಜಾರಿಗೆ ಬಂದ ದಿನಾಂಕಕ್ಕಿಂತ ಮೊದಲು ಈಗಾಗಲೇ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳನ್ನು ಹೊರತುಪಡಿಸಿ ಒಂದೇ ಅಧಿಸೂಚನೆ ಹೊರಡಿಸಿ ನೇಮಕಾತಿ ಪ್ರಕ್ರಿಯೆ ಜಾರಿಯಲ್ಲಿರುವ ಪುಕರಣಗಳಿಗೆ ಸೀಮಿತವಾಗುವಂತೆ ಮಾತ್ರ ದಿನಾಂಕ 6/6/2020ರ ಸುತ್ತೋಲೆಯಲ್ಲಿ ನೀಡಲಾಗಿರುವ ನಿರ್ದೇಶನಗಳನ್ವಯ ಆಯ್ಕೆ ಪ್ರಕ್ರಿಯೆಯನ್ನು ಅಂತಿಮಗೊಳಿಸುಂತೆ ಸೂಚಿಸಲಾಗಿದೆ.

ಕಲ್ಯಾಣ ಕರ್ನಾಟಕದಲ್ಲಿ 60 ಸೀಟು ಸಹಿತ ಬಿಎಸ್ಸಿ ಕೋರ್ಸ್ ಆರಂಭ: ಸರ್ಕಾರ ಆದೇಶ ಕಲ್ಯಾಣ ಕರ್ನಾಟಕದಲ್ಲಿ 60 ಸೀಟು ಸಹಿತ ಬಿಎಸ್ಸಿ ಕೋರ್ಸ್ ಆರಂಭ: ಸರ್ಕಾರ ಆದೇಶ

ದಿನಾಂಕ 15/6/2022ರ ಸುತ್ತೋಲೆಯ ಕೊನೆಯ ಕಂಡಿಕೆಯಲ್ಲಿ ತಿಳಿಸಲಾಗಿರುವ ಅಂಶಗಳಿಗೆ ಕಲ್ಯಾಣ ಕರ್ನಾಟಕ ಭಾಗದ ಸ್ಥಳೀಯ ಅಭ್ಯರ್ಥಿಗಳಿಂದ ಹಾಗೂ ಜನಪ್ರತಿನಿಧಿಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಸದರಿ ವಿಷಯವನ್ನು ದಿನಾಂಕ 29/12/2022 ರಂದು ನಡೆದ ಸಚಿವ ಸಂಪುಟ ಉಪ ಸಮಿತಿಯ ಸಭೆಯಲ್ಲಿ ಮಂಡಿಸಿ ಸಮಿತಿಯ ನಿರ್ಣಯದಂತೆ 15/6/2022ರ ಸುತ್ತೋಲೆಯ ಕೊನೆಯ ಕಂಡಿಕೆಯಲ್ಲಿ ತಿಳಿಸಲಾಗಿರುವ ಅಂಶಗಳನ್ನು ಮಾತ್ರ ಹಿಂಪಡೆಯಲಾಗಿದೆ.

ವಿವಿಧ ನೇಮಕಾತಿ ಪ್ರಾಧಿಕಾರಗಳು ದಿನಾಂಕ 15/6/2022ರ ಸುತ್ತೋಲೆಯು ಜಾರಿಗೆ ಬರುವುದಕ್ಕೆ ಮೊದಲು ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳನ್ನು ಹೊರತುಪಡಿಸಿ, ಬೇರೆ ಎಲ್ಲಾ ಹುದ್ದೆಗಳ ನೇಮಕಾತಿಗಾಗಿ ದಿನಾಂಕ 6/6/2020ರ ಸುತ್ತೋಲೆಯನ್ವಯ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿ, ಅಂತಿಮ ಆಯ್ಕೆಪಟ್ಟಿ ಪ್ರಕಟಿಸದೇ ಇದ್ದಲ್ಲಿ, ಅಂತಹ ನೇಮಕಾತಿ ಪ್ರಕ್ರಿಯೆಗಳಿಗೆ ಸೀಮಿತವಾಗಿ ಮಾತ್ರ ಅರ್ಜಿ ಸಲ್ಲಿಸುವ ಸಮಯದಲ್ಲಿ ಸ್ಥಳೀಯ ಅಭ್ಯರ್ಥಿಗಳಿಂದ ಪಡೆಯಲಾಗಿರುವ ಆಯ್ಕೆಯನ್ನು ಪರಿಗಣಿಸದೇ, ಮೆರಿಟ್ ಪಟ್ಟಿಯಿಂದ ಆಯ್ಕೆ ಪಟ್ಟಿ ತಯಾರಿಸುವಲ್ಲಿ ಸ್ಥಳೀಯ ಅಭ್ಯರ್ಥಿಗಳನ್ನು ಮೊದಲಿಗೆ ಮಿಕ್ಕುಳಿದ ವೃಂದದಲ್ಲಿ ಲಭ್ಯವಿರುವ ಹುದ್ದೆಗಳಿಗೆದುರಾಗಿ ಪರಿಗಣಿಸಿ ಆಯ್ಕೆ ಪಟ್ಟಿ ತಯಾರಿಸುವುದು.

ನಂತರ ಸ್ಥಳೀಯ ವೃಂದದಲ್ಲಿ ಲಭ್ಯವಿರುವ ಹುದ್ದೆಗಳಿಗೆ ಪರಿಗಣಿಸಿ ಆಯ್ಕೆ ಪಟ್ಟಿ ತಯಾರಿಸುವಂತೆ ಸೂಚಿಸಿದೆ. ದಿನಾಂಕ 15/6/2022ರ ಸುತ್ತೋಲೆಯ ಕೊನೆಯ ಕಂಡಿಕೆಯನ್ನು ಮಾತ್ರ ಹಿಂಪಡೆಯಲಾಗಿದ್ದು, ಇನ್ನುಳಿದ ಎಲ್ಲಾ ಅಂಶಗಳು ಯಥಾವತ್ತಾಗಿ ಜಾರಿಯಲ್ಲಿರುತ್ತವೆ ಎಂದು ಸ್ಪಷ್ಟಪಡಿಲಾಗಿದೆ.

English summary
Karnataka government circular on Kalyana Karnataka region recruitment from various departments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X