ಕೊಪ್ಪಳ, ಧಾರವಾಡದಲ್ಲಿ ಕೆಲಸ ಖಾಲಿ ಇದೆ, ವಿವರ
ಕೊಪ್ಪಳ, ಜನವರಿ 23; ಕೊಪ್ಪಳ ಮತ್ತು ಧಾರವಾಡದಲ್ಲಿ ವಿವಿಧ ಹುದ್ದೆಗಳಿಗೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಗಳು ಸೇರಿದಂತೆ ವಿವರಗಳು ಇಲ್ಲಿವೆ.
ಧಾರವಾಡ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಜಿಲ್ಲಾ ಮಹಿಳಾ ಸಬಲೀಕರಣ ಘಟಕಕ್ಕೆ 'ಮಿಷನ್ ಶಕ್ತಿ' ಯೋಜನೆಯಡಿಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಮಂಜೂರಾಗಿರುವ ಜಿಲ್ಲಾ ಮಿಷನ್ ಸಂಯೋಜಕರು, ಪ್ರಧಾನ ಮಂತ್ರಿ ಮಾತೃವಂದನ ಜಿಲ್ಲಾ ಸಂಯೋಜಕರು ಮತ್ತು ಸ್ಪೆಷಲಿಸ್ಟ್ ಇನ್ ಫೈನಾನ್ಶಿಯಲ್ ಲಿಟರಸಿ ಮತ್ತು ಅಕೌಂಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಧಾರವಾಡ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರ ಕಛೇರಿಯಲ್ಲಿ ಅರ್ಜಿ ಪಡೆದು ಫೆಬ್ರವರಿ 5ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0836-2447850 ಸಂಪರ್ಕಿಸಬಹುದು.
ಕೊಪ್ಪಳದಲ್ಲಿ ಕೆಲಸ ಖಾಲಿ ಇದೆ; ಜಿಟಿಟಿಸಿ ಕೇಂದ್ರ ಕಚೇರಿಯ ನಿರ್ದೇಶನದಂತೆ ಕೊಪ್ಪಳ ತಾಲ್ಲೂಕಿನ ದದೇಗಲ್‌ನಲ್ಲಿಯ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಡಿಪ್ಲೋಮಾ ಇನ್ ಮೆಕಟ್ರಾನಿಕ್ಸ್ ವಿಭಾಗದಲ್ಲಿ ಖಾಲಿ ಇರುವ ಅತಿಥಿ ಉಪನ್ಯಾಸಕರ ಹುದ್ದೆಗೆ ಸಂದರ್ಶನವನ್ನು ಜನವರಿ 24 ಮತ್ತು 25ರಂದು ಆಯೋಜನೆ ಮಾಡಲಾಗಿದೆ.
ಕನಿಷ್ಠ ಒಂದು ವರ್ಷ ಬೋಧನೆಯಲ್ಲಿ ಅನುಭವವುಳ್ಳ ಪ್ರಥಮ ದರ್ಜೆಯಲ್ಲಿ ಬಿಇ/ ಎಂ.ಟೆಕ್ ಇನ್ ಇ&ಸಿ ಮತ್ತು ಇ&ಇ ಪದವಿ ಹೊಂದಿದ ಆಸಕ್ತ ಆಕಾಂಕ್ಷಿಗಳು ಈ ಸಂದರ್ಶನದಲ್ಲಿ ಭಾಗವಹಿಸಬಹುದು.
ಯಾವುದೇ ರೀತಿಯ ದಿನ ಭತ್ಯೆ ಮತ್ತು ಪ್ರಯಾಣ ಭತ್ಯೆ ನೀಡಲಾಗುವುದಿಲ್ಲ ಮತ್ತು ಒಂದು ವೇಳೆ ಈ ವಿಷಯವಾಗಿ ಜಿಟಿಟಿಸಿ ಕೇಂದ್ರ ಕಚೇರಿಯ ನಿರ್ದೇಶನದಲ್ಲಿ ಬದಲಾವಣೆ ಆಗಿದ್ದಲ್ಲಿ ನೇಮಕಾತಿಯನ್ನು ರದ್ದುಗೊಳಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಜಿಟಿಟಿಸಿ ಕಾರ್ಯಾಲಯ ಅಥವಾ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಗದಗ ರೋಡ್-ದದೇಗಲ್ ಕೊಪ್ಪಳ, ವಿಭಾಗದ ಮುಖ್ಯಸ್ಥರಾದ ಮೌನೇಶ್ ಅವರನ್ನು ಮೊಬೈಲ್ ಸಂಖ್ಯೆ 7507094445ಗೆ ಸಂಪರ್ಕಿಸಬಹುದಾಗಿದೆ.












Click it and Unblock the Notifications