ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ESICನಲ್ಲಿ ಉದ್ಯೋಗ; ಕನ್ನಡದಲ್ಲಿಯೂ ಪರೀಕ್ಷೆ ಬರೆಯಲು ಅವಕಾಶ

|
Google Oneindia Kannada News

ಬೆಂಗಳೂರು, ಜನವರಿ 20: ಕಾರ್ಮಿಕರ ರಾಜ್ಯ ವಿಮಾ ನಿಗಮದಲ್ಲಿ(ESIC) ಖಾಲಿಯಿರುವ ವಿವಿಧ ಹುದ್ದೆಗಳ ಭರ್ತಿಗೆ ಕೇಂದ್ರ ಸರ್ಕಾರವು ಅಧಿಸೂಚನೆ ಹೊರಡಿಸಿದೆ. ವಿವಿಧ ಪ್ರಾದೇಶಿಕ ಕಚೇರಿಗಳಿಗೆ ಅಪ್ಪರ್ ಡಿವಿಷನ್ ಕ್ಲರ್ಕ್ (ಯುಡಿಸಿ), ಸ್ಟೆನೊಗ್ರಾಫರ್ (ಸ್ಟೆನೊ), ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಎಂಟಿಎಸ್) ಹುದ್ದೆಗಳ ಭರ್ತಿಗೆ ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಹತೆ ಸೇರಿದಂತೆ ಇತರ ವಿವರಗಳು ಹಾಗೂ ಅರ್ಜಿ ಸಲ್ಲಿಸಲು ರಾಜ್ಯ ವಿಮಾ ನಿಗಮದ www.esic.nic.in/recruitments ವೆಬ್​ಸೈಟ್​ ನೋಡಬಹುದು.

ಪ್ರಾಥಮಿಕ ಮತ್ತು ಮುಖ್ಯ ಪರೀಕ್ಷೆಯನ್ನು ಈ ಬಾರಿ ಇಂಗ್ಲಿಷ್ ಮತ್ತು ಇತರ ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಈ ಕುರಿತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದು, "ಕಾರ್ಮಿಕರ ರಾಜ್ಯ ವಿಮಾ ನಿಗಮವು ಕಳೆದ ಡಿಸೆಂಬರ್ 27 ರಂದು ಅಪ್ಪರ್ ಡಿವಿಷನ್ ಕ್ಲರ್ಕ್‌, ಸ್ಟೆನೋಗ್ರಾಫರ್ ಹಾಗೂ ಮಲ್ಟಿ ಟಾಸ್ಕ್ ಸಿಬ್ಬಂದಿಗಳು ಹುದ್ದೆಗಳನ್ನು ಭರ್ತಿ ಮಾಡಲು ನೇಮಕ ಅಧಿಸೂಚನೆ ಪ್ರಕಟಿಸಿತ್ತು. ಈ ಕೆಳಹಂತದ ಹುದ್ದೆಗಳಿಗೆ ಕರ್ನಾಟಕದಲ್ಲಿ ಹಿಂದಿ ಜತೆಗೆ ಕನ್ನಡ, ಕೊಂಕಣಿಯಲ್ಲಿಯೂ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ನಾನು ಕೇಂದ್ರ ಕಾರ್ಮಿಕ ಸಚಿವ ಭೂಪೇಂದ್ರ ಯಾದವ್ ಅವರೊಂದಿಗೆ ಚರ್ಚಿಸಿದ್ದೆ," ಎಂದು ತಿಳಿಸಿದ್ದಾರೆ.

Jobs in ESIC; Opportunity To Write Exam in Kannada Language

"ಇದೀಗ ನಿಗಮವು ತಿದ್ದುಪಡಿ ಅಧಿಸೂಚನೆ ಹೊರಡಿಸಿದೆ. ಇದರಿಂದ ಎಂಟಿಎಸ್ ಹುದ್ದೆಗಳ ಪೂರ್ವಭಾವಿ ಪರೀಕ್ಷೆ ಹಾಗೂ ಮುಖ್ಯ ಪರೀಕ್ಷೆಯಲ್ಲಿ ಭಾಷಾ ಮಾಧ್ಯಮದಲ್ಲಿ ಬದಲಾವಣೆ ಮಾಡಿ ಇತರ ಪ್ರಾದೇಶಿಕ ಭಾಷೆಗಳಿಗೂ ಅವಕಾಶ ನೀಡಲಾಗಿದೆ. ಈ ಸಂದರ್ಭದಲ್ಲಿ ಕೇಂದ್ರದ ಕಾರ್ಮಿಕ ಮತ್ತು ಉದ್ಯೋಗ ಸಚಿವ ಭೂಪೇಂದರ್ ಯಾದವ್ ಅವರಿಗೆ ಧನ್ಯವಾದ ಹೇಳಬಯಸುತ್ತೇನೆ,'' ಎಂದು ಪೋಸ್ಟ್ ಮಾಡಿದ್ದಾರೆ.

ಸಾಮಾನ್ಯ ಬುದ್ಧಿವಂತಿಕೆ ಮತ್ತು ರೀಸನಿಂಗ್, ಸಾಮಾನ್ಯ ಜ್ಞಾನ, ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್, ಇಂಗ್ಲಿಷ್ ಕಾಂಪ್ರಹೆನ್ಷನ್ ವಿಷಯಗಳ ಬಗ್ಗೆ ಪ್ರಾಥಮಿಕ ಹಂತದ ಪರೀಕ್ಷೆ ತಲಾ ಒಂದು ಗಂಟೆ, ಅಂತಿಮ ಹಂತದ ಪರೀಕ್ಷೆ 2 ಗಂಟೆ ಅವಧಿಗೆ ನಡೆಯಲಿದೆ.

ಕರ್ನಾಟಕದಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಕನ್ನಡ, ಕೊಂಕಣಿ, ಹಿಂದಿ ಮತ್ತು ಇಂಗ್ಲಿಷ್​ನಲ್ಲಿ ಬರೆಯಬಹುದು. ಉಳಿದಂತೆ ಇತರ ರಾಜ್ಯಗಳಿಗೆ ಪ್ರಾದೇಶಿಕವಾಗಿ ಆಯಾ ಪ್ರಾದೇಶಿಕ ಭಾಷೆಗಳನ್ನು ಬಳಸಲು ಅವಕಾಶ ನೀಡಲಾಗಿದೆ.

ಹುದ್ದೆ ಮತ್ತು ವೇತನ ವಿವರ
ಒಟ್ಟು 3882 ಹುದ್ದೆಗಳಿದ್ದು, ಜನವರಿ 15ರಿಂದ ಫೆಬ್ರವರಿ 15ರವರೆಗೆ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಪರೀಕ್ಷೆಗಳು ಮಾರ್ಚ್ 19, 20, 26ರಂದು ನಡೆಯಲಿದೆ. ಯುಡಿಸಿ ಮತ್ತು ಸ್ಟೆನೊ ಹುದ್ದೆಗೆ 25,500 ರೂ.ನಿಂದ 81,100 ರೂ. ಹಾಗೂ ಮಲ್ಟಿ ಟಾಸ್ಕ್​ ಸಿಬ್ಬಂದಿಗೆ 18,000 ರೂ.ನಿಂದ 56,900 ರೂ.ಗಳವರೆಗೆ ವೇತನವಿದೆ.

Jobs in ESIC; Opportunity To Write Exam in Kannada Language

ವಿದ್ಯಾರ್ಹತೆ
* ಯುಡಿಸಿ ಹುದ್ದೆಗೆ ಅರ್ಜಿ ಸಲ್ಲಿಸುವವರು ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಮೈಕ್ರೊಸಾಫ್ಟ್ ಆಫೀಸ್ ಮತ್ತು ಡೇಟಾಬೇಸ್ ನಿರ್ವಹಣೆಯನ್ನು ತಿಳಿದುಕೊಂಡಿರಬೇಕು.

* ಸ್ಟೆನೊಗ್ರಾಫರ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಪಿಯುಸಿ (12ನೇ ತರಗತಿ) ಪಾಸಾಗಿರಬೇಕು. ಒಂದು ನಿಮಿಷಕ್ಕೆ 80 ಪದಗಳಂತೆ 10 ನಿಮಿಷದ ಅವಧಿಗೆ ಟಿಕ್ಟೇಶನ್ ತೆಗೆದುಕೊಳ್ಳಬೇಕು. ಕಂಪ್ಯೂಟರ್​ನಲ್ಲಿ ಟ್ರಾಕ್ಸ್​ಕ್ರಿಪ್ಷನ್ ಪರೀಕ್ಷೆಯೂ ಇರುತ್ತದೆ.

* ಮಲ್ಟಿಟಾಸ್ಕಿಂಗ್​ ಹುದ್ದಗೆ ಅರ್ಜಿ ಸಲ್ಲಿಸುವವರು 10ನೇ ತರಗತಿ ಪಾಸ್ ಆಗಿರಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನದ ಒಳಗೆ ಅರ್ಹತೆಯ ದಾಖಲೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗದವರು ಅರ್ಜಿ ಸಲ್ಲಿಸುವಂತಿಲ್ಲ.

ವಯೋಮಿತಿ
* ಯುಡಿಸಿ ಮತ್ತು ಸ್ಟೆನೊ ಹುದ್ದೆಗೆ 18ರಿಂದ 27 ವರ್ಷ,

* ಮಲ್ಟಿಟಾಸ್ಕಿಂಗ್ ಹುದ್ದೆಗೆ 18ರಿಂದ 25 ವರ್ಷ. 15ನೇ ಫೆಬ್ರುವರಿ 2022ರ ದಿನಾಂಕದಂದು ಆಗಿರುವ ವಯಸ್ಸನ್ನು ಲೆಕ್ಕ ಹಾಕಲಾಗುವುದು.

* ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರ ಹಿಂದುಳಿದ ವರ್ಗ, ನಿವೃತ್ತ ಸೈನಿಕರು ಮತ್ತು ಇತರ ವರ್ಗದವರಿಗೆ ಕೇಂದ್ರ ಸರ್ಕಾರದ ನಿಯಮಗಳ ಅನ್ವಯ ವಿನಾಯಿತಿ ಇರುತ್ತದೆ.

ಅರ್ಜಿ ಶುಲ್ಕ
ಪರಿಶಿಷ್ಟ ಜಾತಿ, ವರ್ಗ, ಮಹಿಳೆಯರು ಮತ್ತು ನಿವೃತ್ತ ಸೈನಿಕರಿಗೆ 250 ರೂ. ಸಾಮಾನ್ಯ ಅಭ್ಯರ್ಥಿಗಳಿಗೆ 500 ರೂ. ಇರುತ್ತದೆ.

English summary
The Central Government has issued a notification for various vacancies in the Employee State Insurance Corporation (ESIC).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X