ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾವಣಗೆರೆ, ವಿಜಯನಗರ, ಬಳ್ಳಾರಿಯಲ್ಲಿ ಕೆಲಸ ಖಾಲಿ ಇದೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 09: ಬಳ್ಳಾರಿಯಲ್ಲಿ ಸೆಪ್ಟೆಂಬರ್ 14ರಂದು ನೇರ ಸಂದರ್ಶನ ಆಯೋಜನೆ ಮಾಡಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಬೆಳಗ್ಗೆ 10.30ರಿಂದ ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ.

ಬಳ್ಳಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಜಿಲ್ಲೆಯ ಸಿ. ಪಿ. ಹೆಚ್. ಸಿ-ಯು. ಹೆಚ್. ಸಿ, ಎನ್. ಪಿ. ಸಿ. ಡಿ. ಸಿ. ಎಸ್ ಮತ್ತು ಐ. ಡಿ. ಎಸ್. ಪಿ ಕಾರ್ಯಕ್ರಮದಡಿ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ.

ಕೆಪಿಎಸ್‌ಸಿ ನೇಮಕಾತಿ; ಸಹಾಯಕ ಕಾರ್ಯಪಾಲಕ ಇಂಜಿನಿಯರ್ 18 ಹುದ್ದೆಗಳು ಕೆಪಿಎಸ್‌ಸಿ ನೇಮಕಾತಿ; ಸಹಾಯಕ ಕಾರ್ಯಪಾಲಕ ಇಂಜಿನಿಯರ್ 18 ಹುದ್ದೆಗಳು

ಬಳ್ಳಾರಿ ಜಿಲ್ಲೆಯ ಸರ್ವೇಕ್ಷಣಾ ಘಟಕದಲ್ಲಿ ಕಾರ್ಯನಿರ್ವಹಿಸಲು ವಿವಿಧ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿಗಾಗಿ ನೇರ ಸಂದರ್ಶನ ನಡೆಸಲಾಗುತ್ತದೆ. ಡಿಸ್ಟ್ರಿಕ್‌ ಹೆಲ್ತ್‌ ಅಂಡ್ ವೆಲ್‌ನೆಸ್ ಸೆಂಟರ್ ಕೋ ಆರ್ಡಿನೆಟರ್ 1, ಎಪಿಡಿಮೋಲಾಜಿಸ್ಟ್ 1, 6 ವೈದ್ಯಾಧಿಕಾರಿಗಳು ಹಾಗೂ 2 ಶುಶ್ರೂಷಣಾಧಿಕಾರಿ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

KPSC recruitment; ಸಹಾಯಕ ನಿರ್ದೇಶಕರ 10 ಹುದ್ದೆಗಳ ಭರ್ತಿ, ವಿವರKPSC recruitment; ಸಹಾಯಕ ನಿರ್ದೇಶಕರ 10 ಹುದ್ದೆಗಳ ಭರ್ತಿ, ವಿವರ

Jobs In Davanagere Ballari Vijayanagara

ಜಿಲ್ಲಾ ಆಸ್ಪತ್ರೆ ಆವರಣದ ಜಿಲ್ಲಾ ಸರ್ವೇಕ್ಷಣಾ ಘಟಕದಲ್ಲಿ ಬೆಳಗ್ಗೆ 10.30ರಿಂದ ಸಂಜೆ 05ರವರೆಗೆ ನೇರ ಸಂದರ್ಶನ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08392-274031 ಅಥವಾ [email protected]. ವಿಳಾಸಕ್ಕೆ ಸಂಪರ್ಕಿಸಬಹುದಾಗಿದೆ.

ಅತಿಥಿ ಬೋಧಕರ ಹುದ್ದೆ, ಇತರ ಉದ್ಯೋಗ ಮಾಹಿತಿ ಅತಿಥಿ ಬೋಧಕರ ಹುದ್ದೆ, ಇತರ ಉದ್ಯೋಗ ಮಾಹಿತಿ

ವಿಜಯನಗರದಲ್ಲಿ ಕೆಲಸ ಖಾಲಿ ಇದೆ; ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ 5 ಅಂಗನವಾಡಿ ಕಾರ್ಯಕರ್ತೆ ಮತ್ತು 13 ಸಹಾಯಕಿಯರ ಹುದ್ದೆಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹರಪನಹಳ್ಳಿಯ ಶಿಶು ಯೋಜನಾಭಿವೃದ್ಧಿ ಅಧಿಕಾರಿಗಳು ಪ್ರಕಟಣೆಯಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ. ಆಸಕ್ತ ಮತ್ತು ಅರ್ಹ ಮಹಿಳಾ ಅಭ್ಯರ್ಥಿಗಳು ಅಕ್ಟೋಬರ್ 6ರೊಳಗಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿಗಳನ್ನು www.anganwadirecruit.kar.nic.in ವೆಬ್ ಸೈಟ್‌ ಮೂಲಕ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಹರಪನಹಳ್ಳಿ ಇವರನ್ನು ಸಂಪರ್ಕಿಸಬಹುದು.

ಪಶುಸಂಗೋಪನಾ ತರಬೇತಿ; ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ದಾವಣಗೆರೆ ಪಿ. ಬಿ. ರಸ್ತೆಯ ಅರುಣ ಚಿತ್ರ ಮಂದಿರದ ಎದುರಿನ ಪಶು ಆಸ್ಪತ್ರೆ ಅವರಣದಲ್ಲಿರುವ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ತರಬೇತಿ ಆಯೋಜನೆ ಮಾಡಲಾಗಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ರೈತರಿಗೆ ಪಶುಸಂಗೋಪನಾ ಚಟುವಟಿಕೆ ಕುರಿತು ತರಬೇತಿ ಹಮ್ಮಿಕೊಳ್ಳಲಾಗಿದೆ.
ಸೆಪ್ಟೆಂಬರ್ 12 ಮತ್ತು 13 ರಂದು ಕೋಳಿ ಸಾಕಾಣಿಕೆ ಬಗ್ಗೆ ತರಬೇತಿ ಕಾರ್ಯಕ್ರಮದಲ್ಲಿ ತಲಾ 25 ಜನರಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ.

ತರಬೇತಿಗೆ ಹಾಜರಾಗುವ ರೈತರು ಆಧಾರ್ ಕಾರ್ಡ್ ಜೆರಾಕ್ಸ್, ಎರಡು ಪಾಸ್‍ಪೋರ್ಟ್‌ ಸೈಜ್ ಭಾವಚಿತ್ರ ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರು ಜಾತಿ ಪ್ರಮಾಣ ಪತ್ರ ತರಬೇಕು. ಹೆಚ್ಚಿನ ಮಾಹಿತಿಗಾಗಿ ಪಶುವೈದ್ಯಕೀಯ ಸಹಾಯಕರ ತರಬೇತಿ ಕೇಂದ್ರ ದಾವಣಗೆರೆ ಇವರನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 08192-233787.

English summary
Job news; Apply for various post at Davanagere, Ballari and Vijayanagara. Here are the updates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X