ಧಾರವಾಡ, ದಾವಣಗೆರೆಯಲ್ಲಿ ಕೆಲಸ ಖಾಲಿ ಇದೆ, ವಿವರಗಳು

ಧಾರವಾಡ, ಜನವರಿ 18: ಉದ್ಯೋಗ ಹುಡುಕುತ್ತಿರುವವರಿಗೆ ಸಿಹಿಸುದ್ದಿ. ದಾವಣಗೆರೆ ಮತ್ತು ಧಾರವಾಡದಲ್ಲಿ ಕೆಲಸ ಖಾಲಿ ಇದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಕೆ ಮಾಡಬಹುದಾಗಿದೆ.

ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕೃಷಿ ಅರಣ್ಯ ವಿಭಾಗದಲ್ಲಿ ಜೈವಿಕ ಇಂಧನ ಉದ್ಯಾನವನ ಯೋಜನೆಯಡಿ ಖಾಲಿ ಇರುವ ವೈಜ್ಞಾನಿಕ ಸಹಾಯಕ, ಕ್ಷೇತ್ರ ಸಹಾಯಕ ಮತ್ತು ಸಹಾಯಕ ಈ ಮೂರು ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ಭರ್ತಿ ಮಾಡಲಾಗುತ್ತಿದೆ.

Jobs In Davanagere And Dharwad Post And Details

ಫೀಲ್ಡ್‌ ಇನವೆಸ್ಟಿಗೆಟರ್ (ಕ್ಷೇತ್ರ ಸಹಾಯಕ), ಹೆಲ್ಪರ್ (ಸಹಾಯಕ) ಹುದ್ದೆಗಳಿಗೆ ಜನವರಿ 20ರಂದು ಪ್ರಾಯೋಗಿಕ ಪರೀಕ್ಷೆ ಮತ್ತು ಸಂದರ್ಶನವನ್ನು ಸಂಶೋಧನಾ ನಿರ್ದೇಶಕರ ಕಾರ್ಯಲಯದಲ್ಲಿ ಆಯೋಜಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾಲಯದ ವೆಬ್‌ಸೈಟ್‌ www.uasd.inಗೆ ಸಂಪರ್ಕಿಸಬಹುದು ಎಂದು ಕೃಷಿ ಅರಣ್ಯ ವಿಭಾಗದ ಮುಖ್ಯಸ್ಥರು ತಿಳಿಸಿದ್ದಾರೆ.

ದಾವಣಗೆರೆಯಲ್ಲಿ ಕೆಲಸ ಖಾಲಿ ಇದೆ; ದಾವಣಗೆರೆಯ ಹರಿಹರದ ಸರ್ಕಾರಿ ಉಪಕರಣ ಮತ್ತು ತರಬೇತಿ ಕೇಂದ್ರದಲ್ಲಿ ಟೂಲ್ & ಡೈ ಮೇಕಿಂಗ್ ಹಾಗೂ ಡಿಪ್ಲೋಮಾ ಇನ್ ಆಟೋಮೆಷನ್ ಮತ್ತು ರೊಬೋಟಿಕ್ಸ್ ವಿಭಾಗದಲ್ಲಿ ಖಾಲಿ ಇರುವ ಅರೆಕಾಲಿಕ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಕರೆಯಲಾಗಿದೆ.

ಬೋಧನೆಯಲ್ಲಿ ಕನಿಷ್ಠ ಒಂದು ವರ್ಷ ಅನುಭವವಿರುವ ಎಂ.ಎಸ್ಸಿ (ಭೌತಶಾಸ್ತ್ರ)ದಲ್ಲಿ ಸ್ನಾತಕೋತ್ತರ ಪದವಿ ಹೊಂದಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಕೆ ಮಾಡಲು ಅರ್ಹರು. ಜನವರಿ 25ಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು ಹೆಚ್ಚಿನ ಮಾಹಿತಿಗೆ ಕಾಲೇಜು ಸಂಪರ್ಕಿಸಲು ಅಥವಾ ಮೊಬೈಲ್ ಸಂಖ್ಯೆ 8711913947ಗೆ ಕರೆ ಮಾಡಬಹುದು.

ಜೇನು ಸಾಕಾಣಿಕೆ ಕುರಿತು ಪ್ರಾಯೋಗಿಕ ತರಬೇತಿ; ಧಾರವಾಡ ಕೃಷಿ ತಂತ್ರಜ್ಞರ ಸಂಸ್ಥೆ, ಕೃಷಿ ಇಲಾಖೆ ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಜನವರಿ 19 ಮತ್ತು 20ರಂದು ಎರಡು ದಿನಗಳ ಅವಧಿಗೆ ಜೇನು ಸಾಕಾಣಿಕೆ ಕುರಿತು ಪ್ರಾಯೋಗಿಕ ತರಬೇತಿ ಕಾರ್ಯಕ್ರಮವನ್ನು ಸುಮನ ಸಂಗಮ (ಕಾಡು ತೋಟ), ದಡ್ಡಿ ಕಮಲಾಪುರದಲ್ಲಿ ಆಯೋಜಿಸಲಾಗಿದೆ.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ 6360494057 ದೂರವಾಣಿ ಸಂಖ್ಯೆಗೆ ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಕೃಷಿ ತಂತ್ರಜ್ಞರ ಸಂಸ್ಥೆಯ ಅಧ್ಯಕ್ಷರು ಹಾಗೂ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+