ಪಶುಸಂಗೋಪನಾ ಇಲಾಖೆಯಲ್ಲಿ 2,152 ಹುದ್ದೆಗಳಿಗೆ ಅರ್ಜಿ ಆಹ್ವಾನ

ಉದ್ಯೋಗವಕಾಶಗಳು ತೆರೆದುಕೊಳ್ಳುತ್ತಲೇ ಇವೆ. ಇದೀಗ ಕೇಂದ್ರ ಸರ್ಕಾರದ ಪಶುಸಂಗೋಪನಾ ಇಲಾಖೆಯಲ್ಲಿ ಖಾಲಿಯಿರುವ 2,152 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹಾಗಾದ್ರೆ ಅರ್ಜಿ ಸಲ್ಲಿಸಬಯಸುವವರು ಗಮನಿಸಬೇಕಾದ ಪ್ರಮುಖ ಅಂಶಗಳು ಏನು ಹಾಗೂ ಮಾಸಿಕ ವೇತನ ಎಷ್ಟಿರಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಬಿಪಿಎನ್​ಎಲ್‌ನಲ್ಲಿ ಜಾನುವಾರು ಸಾಕಣೆ ಹೂಡಿಕೆ ಅಧಿಕಾರಿ, ಜಾನುವಾರು ಸಾಕಣೆ ಹೂಡಿಕೆ ಸಹಾಯಕ ಹಾಗೂ ಜಾನುವಾರು ಸಾಕಣೆ ಕಾರ್ಯಾಚರಣಾ ಸಹಾಯಕ ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಹುದ್ದೆಗಳಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದ್ದು, ಈಗಾಗಲೇ ಅರ್ಜಿಗಳು ಆರಂಭ ಆಗಿವೆ.

Job Opportunity in Department of Animal Husbandry

ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಅಭಿಯಾನದಲ್ಲಿ 2,000ಕ್ಕೂ ಅಧಿಕ ಉದ್ಯೋಗಗಳಿವೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ ಸಂಬಳ ನಿಗದಿಪಡಿಸಲಾಗಿದೆ. ಆಯ್ಕೆ ಪ್ರಕ್ರಿಯೆಯು ಆನ್‌ಲೈನ್ ಪರೀಕ್ಷೆಯನ್ನು ಒಳಗೊಂಡಿದೆ. ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ. ಬಳಿಕ ದಾಖಲೆ ಪರಿಶೀಲನೆ ಮತ್ತು ಒಂದು ದಿನದ ತರಬೇತಿ ಅವದಿಯನ್ನು ನಡೆಸಲಾಗುತ್ತದೆ ಎಂದು ತಿಳಿಸಲಾಗಿದೆ.

ಜಾನುವಾರು ಸಾಕಣೆ ಹೂಡಿಕೆ ಅಧಿಕಾರಿ 362, ಜಾನುವಾರು ಸಾಕಣೆ ಹೂಡಿಕೆ ಅಂಗಸಂಸ್ಥೆ 1,428, ಜಾನುವಾರು ಸಾಕಣೆ ಕಾರ್ಯಾಚರಣಾ ಸಹಾಯಕ 362 ಸೇರಿದಂತೆ ಒಟ್ಟು 2,152 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ವೇತನದ ವಿಚಾರಕ್ಕೆ ಬಂದರೆ, ಜಾನುವಾರು ಸಾಕಣೆ ಹೂಡಿಕೆ ಅಧಿಕಾರಿ 38,200 ರೂಪಾಯಿ,
ಜಾನುವಾರು ಸಾಕಣೆ ಹೂಡಿಕೆ ಅಂಗಸಂಸ್ಥೆ 30,500 ರೂಪಾಯಿ, ಜಾನುವಾರು ಸಾಕಣೆ ಕಾರ್ಯಾಚರಣಾ ಸಹಾಯಕ ಹುದ್ದೆಗೆ 20,000 ರೂಪಾಯಿ ಇರಲಿದೆ.

ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು, 10ನೇ ತರಗತಿ, ದ್ವಿತೀಯ ಪಿಯುಸಿ ಹಾಗೂ ಪದವಿ ಪಡೆದಿರಬೇಕಾಗುತ್ತದೆ. ಹುದ್ದೆಗೆ ತಕ್ಕಂತೆ ವಿದ್ಯಾರ್ಹತೆ​ ನಿಗದಿ ಮಾಡಲಾಗಿದೆ. ವಯೋಮಿತಿ ವಿಚಾರಕ್ಕೆ ಬಂದರೆ, 18ರಿಂದ 45 ವರ್ಷದ ಒಳಗಿನವರಿಗೆ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಹುದ್ದೆಗೆ ತಕ್ಕಂತೆ ವಯಸ್ಸನ್ನು ನಿಗದಿ ಮಾಡಲಾಗಿದೆ.

ಅರ್ಜಿ ಆರಂಭಗೊಂಡ ದಿನಾಂಕ ಫೆಬ್ರವರಿ 20, 2025ರಂದು ಆರಂಭವಾಗಿದ್ದು, ಕೊನೇ ದಿನಾಂಕ ಮಾರ್ಚ್ 12 ಆಗಿದೆ. ಆನ್​ಲೈನ್ ಪರೀಕ್ಷೆ, ಸಂದರ್ಶನ, ದಾಖಲಾತಿ ಪರಿಶೀಲನೆ, ಒಂದು ದಿನದ ತರಬೇತಿ ಬಳಿಕ ಉದ್ಯೋಗಕ್ಕೆ ಆಯ್ಕೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಸಲು http://www.bharatiyapashupalan.comಗೆ ಭೇಟಿ ನೀಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+