ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲಬುರಗಿ; ನವೆಂಬರ್ 3ರಂದು ಉದ್ಯೋಗ ಮೇಳ

|
Google Oneindia Kannada News

ಕಲಬುರಗಿ, ನವೆಂಬರ್ 02; ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ನವೆಂಬರ್ 3ರಂದು ಉದ್ಯೋಗ ಮೇಳ ಆಯೋಜನೆ ಮಾಡಿದೆ. 18 ರಿಂದ 35 ವರ್ಷದೊಳಗಿನ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಪಾಲ್ಗೊಳ್ಳಬಹುದಾಗಿದೆ.

ರಾಷ್ಟ್ರೀಯ ವೃತ್ತಿ ಸೇವೆ ಯೋಜನೆಯಡಿ ಕಲಬುರಗಿ ಸರ್ಕಾರಿ ಐಟಿಐ ಕಾಲೇಜು ಹಿಂದುಗಡೆಯಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಬೆಳಗ್ಗೆ 10.30ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಉದ್ಯೋಗ ಮೇಳ ನಡೆಯಲಿದೆ.

ಈ ಉದ್ಯೋಗ ಮೇಳದಲ್ಲಿ ಕಲಬುರಗಿಯ ಫ್ಲಿಪ್‌ಕಾರ್ಟ್‌, ಐಸಿಐಸಿಐ ಬ್ಯಾಂಕ್, ಎರೋಗ್ಲೋಬಲ್ ಟೆಕ್ನೋಲೊಜಿ, ಭಾರತ ಫೈನಾನ್ಸಿಯಲ್ ಇನ್‍ಕ್ಲೂಜನ್, ಎಸ್. ಬಿ. ಐ. ಲೈಫ್ ಇನ್ಸೂರನ್ಸ್, ಮಠ ಮಲ್ಟಿ ಮೈಂಡ, ಮೆಡ್‍ಪ್ಲಸ್, ರೇ-ನ್ಯೂಸ್, ಕೃಷಿ ಬಂಧು ಹಾಗೂ ಮೋತಿಲಾಲ ಓಸ್ವಾಲ್ ಕಂಪನಿಗಳು ಭಾಗವಹಿಸಲಿವೆ.

Job Fair In Kalaburagi On November 3rd

ಉದ್ಯೋಗ ಮೇಳದಲ್ಲಿ ಎಸ್. ಎಸ್. ಎಲ್. ಸಿ., ಪಿಯುಸಿ, ಐಟಿಐ, ಡಿಪ್ಲೋಮಾ, ಡಿ-ಫಾರ್ಮಸಿ, ಬಿ-ಫಾರ್ಮಸಿ, ಬಿಎ, ಬಿಕಾಂ., ಬಿಎಸ್ಸಿ., ಬಿಬಿಎ, ಇಂಜಿನಿಯರಿಂಗ್ (ಬಿ.ಇ.), ಎಂ.ಟೆಕ್., ಎಂ.ಬಿ.ಎ., ಎಂ.ಕಾಂ., ಎಂ.ಎಸ್ಸಿ., ಎಂ.ಎ. (ಕನ್ನಡ/ ಪತ್ರಿಕೊದ್ಯಮ) ವಿದ್ಯಾರ್ಹತೆ ಹೊಂದಿರುವವರು ಪಾಲ್ಗೊಳ್ಳಬಹುದಾಗಿದೆ.

ಅಭ್ಯರ್ಥಿಗಳು ತಮ್ಮ (ರೆಸ್ಯೂಮ್) ಬಯೋಡಾಟಾ, ವಿದ್ಯಾರ್ಹತೆಯ ಪ್ರಮಾಣ ಪತ್ರಗಳು ಹಾಗೂ ಆಧಾರ್ ಕಾರ್ಡ್ ಜೊತೆಗೆ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ.

ಮೇಳದಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆಯನ್ನು ನೀಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 08472-274846.

ತರಬೇತಿಗೆ ಅರ್ಜಿ ಆಹ್ವಾನ; ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಜನ ಆರೋಗ್ಯ ಸಂಸ್ಥೆ, ಎಪಿಡೀಮಿಯಾಲಜಿ ವಿಭಾಗ, ನಿಮಾನ್ಸ್, ಬೆಂಗಳೂರು ಇವರಿಂದ ಅನುಷ್ಠಾನಗೊಳ್ಳುತ್ತಿರುವ ಯುವ ಸ್ಪಂದನ ಕಾರ್ಯಕ್ರಮದಡಿಯಲ್ಲಿ 4 ಯುವ ಪರಿವರ್ತಕರ ತರಬೇತಿಗಾಗಿ ಅರ್ಹ ಯುವಕ/ ಯುವತಿಯರಿಂದ ಅರ್ಜಿ ಕರೆಯಲಾಗಿದೆ.

ಅರ್ಜಿ ಹಾಕುವ ಅಭ್ಯರ್ಥಿಗಳು ಯಾವುದೇ ಪದವಿ ಹಾಗೂ ಮೇಲ್ಪಟ್ಟ ವಿದ್ಯಾರ್ಹತೆ ಹೊಂದಿರಬೇಕು. 21 ರಿಂದ 35 ವರ್ಷದೊಳಗಿನವರಾಗಿರಬೇಕು. ಸ್ಥಳೀಯ ಭಾಷೆ ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುವುದು ಅವಶ್ಯಕ. ಸಮುದಾಯದಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರಬೇಕು.

ಸಮುದಾಯದಲ್ಲಿ ಯುವಜನರಿಗೆ ತರಬೇತಿಯಂತಹ ಕಾರ್ಯಕ್ರಮಗಳನ್ನು ನಡೆಸುವುದು ಅವಶ್ಯವಿರುತ್ತದೆ. ಕೊಪ್ಪಳ ಜಿಲ್ಲೆಯಲ್ಲಿ ವಾಸಿಸುತ್ತಿರುವ ಖಾಯಂ ನಿವಾಸಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು. ಅಭ್ಯರ್ಥಿಗಳು ತಮ್ಮ ಭಾವಚಿತ್ರ ಸ್ವ ವಿವರದೊಂದಿಗೆ ಖುದ್ದಾಗಿ ನವೆಂಬರ್ 7ರ ಸಂಜೆ 5 ಗಂಟೆಯೊಳಗಾಗಿ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಕೆಗೆ ವಿಳಾಸ; ಸಹಾಯಕ ನಿರ್ದೇಶಕರ ಕಛೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಪ್ಪಳ. ಅರ್ಜಿ ಸಲ್ಲಿಸಿದ ಬಳಿಕ ನವೆಂಬರ್ 9 ರಂದು ಬೆಳಗ್ಗೆ 10 ಗಂಟೆಗೆ ನೇರ ಸಂದರ್ಶನಕ್ಕೆ ಜಿಲ್ಲಾ ಕ್ರೀಡಾಂಗಣದ ಕಚೇರಿ ಸಭಾಂಗಣದಲ್ಲಿ ಹಾಜರಾಗಬೇಕು.

ಆಸಕ್ತರು ಹೆಚ್ಚಿನ ವಿವರಗಳಿಗೆ ಕರೆ ಮಾಡಲು ಸಂಖ್ಯೆ 9845858494. 8088488688.

English summary
Kalaburagi district employment exchange office organized job fair on November 3rd at Kalaburagi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X