ದಾವಣಗೆರೆ; ಜಗಳೂರಿನಲ್ಲಿ ಜನವರಿ 22ರಂದು ಉದ್ಯೋಗ ಮೇಳ

ದಾವಣಗೆರೆ, ಜನವರಿ 16 : ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಜನವರಿ 22ರಂದು ಉದ್ಯೋಗ ಮೇಳವನ್ನು ಆಯೋಜನೆ ಮಾಡಲಾಗಿದೆ. ವಿವಿಧ ಕಂಪನಿಗಳು ಮೇಳದಲ್ಲಿ ಪಾಲ್ಗೊಳ್ಳುತ್ತಿದ್ದು, ಯುವಕ/ಯುವತಿಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ.

ದಾವಣಗೆರೆಯ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಹೋ.ಚಿ. ಬೋರಯ್ಯ ಪ್ರಥಮ ದರ್ಜೆ ಕಾಲೇಜು, ಜಗಳೂರು ಜಂಟಿಯಾಗಿ ಉದ್ಯೋಗ ಮೇಳವನ್ನು ಆಯೋಜಿಸಿವೆ. ಜ.22 ರಂದು ಬೆಳಗ್ಗೆ 10 ಗಂಟೆಗೆ ಚಳ್ಳಕೆರೆ ರಸ್ತೆಯಲ್ಲಿರುವ ಹೋ.ಚಿ. ಬೋರಯ್ಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಯೋಗ ಮೇಳ ನಡೆಯಲಿದೆ.

ಈ ಉದ್ಯೋಗ ಮೇಳದಲ್ಲಿ ವಿವಿಧ ಖಾಸಗಿ ಕಂಪನಿಗಳು ಭಾಗವಹಿಸುತ್ತಿವೆ. ಪಿಯುಸಿ, ಐ.ಟಿ.ಐ. ಡಿಪ್ಲೊಮಾ, ಬಿಎ, ಬಿಎಸ್‍ಸಿ, ಬಿಸಿಎ, ಬಿಬಿಎಂ, ಬಿಬಿಎ, ಬಿಕಾಂ, ಬಿಎಸ್‍ಸಿ (ನರ್ಸಿಂಗ್), ಎಂಬಿಎ ಹಾಗೂ ಎಂಕಾಂ ಪದವಿ ಪಡೆದವರು ಮೇಳದಲ್ಲಿ ಪಾಲ್ಗೊಳ್ಳಬಹುದು.

jobs

ಕಂಪನಿಗಳು ವಿವಿಧ ಹುದ್ದೆಗಳಿಗೆ ನೇರ ನೇಮಕಾತಿಯನ್ನು ಮಾಡಿಕೊಳ್ಳಲಿವೆ. ಆಸಕ್ತ ಅಭ್ಯರ್ಥಿಗಳು ಅಂದು ಕನಿಷ್ಠ 15 ಬಯೋಡಾಟಾ, ಆಧಾರ್ ಕಾರ್ಡ್‍ನೊಂದಿಗೆ ಹಾಜರಾಗಬೇಕು ಎಂದು ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.

ಉದ್ಯೋಗ ಮೇಳ ನಡೆಯುವ ಸ್ಥಳ : ಹೋ.ಚಿ. ಬೋರಯ್ಯ ಪ್ರಥಮ ದರ್ಜೆ ಕಾಲೇಜು, ಜಗಳೂರು. ಚಳ್ಳಕೆರೆ ರಸ್ತೆ, ಜಗಳೂರು.

ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವವರು ಹೆಚ್ಚಿನ ಮಾಹಿತಿಗಾಗಿ 08192-259446 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+