ISRO Recruitment: ಇಸ್ರೋದಲ್ಲಿ ಭರ್ಜರಿ ಉದ್ಯೋಗ ಅವಕಾಶ, ಗರಿಷ್ಠ ₹1,42,400 ವೇತನ
ಬೆಂಗಳೂರು, ಆಗಸ್ಟ್ 24: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ದಲ್ಲಿ ಉದ್ಯೋಗ ಬಯಸುವ ಅಭ್ಯರ್ಥಿಗಳಿಗೆ ಇಲ್ಲೊಂದು ಖುಷಿ ಸುದ್ದಿ ಇದೆ. ಇಸ್ರೋ ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಈ ಸಂಬಂಧ ಅಧಿಸೂಚನೆ ಹೊರಡಿಸಿದೆ. ಹಾಗಾದ್ರೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಹೇಗೆ? ಕೊನೆ ದಿನಾಂಕ, ಮಾಸಿಕ ವೇತನ, ವಿವರ ಇಲ್ಲಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯಲ್ಲಿ 2025ರ ಸಾಲಿನ ಉದ್ಯೋಗ ನೇಮಕಾತಿ ನಡೆಯಲಿದೆ. ಉದ್ಯೋಗ ಪ್ರಕಟಣೆಯನ್ನು ತನ್ನ ಅಧಿಕೃತ ವೆಬ್‌ಸೈಟ್ isro.gov.in ಮೂಲಕ ಬಿಡುಗಡೆ ಮಾಡಿದೆ. ಹತ್ತಾರು ಉದ್ಯೋಗಗಳು ಖಾಲಿ ಇವೆ. ಉದ್ಯೋಗಾಕಾಂಕ್ಷಿಗಳು ಕೂಡಲೇ ಸೂಕ್ತ ದಾಖಲಾತಿಗಳ ಸಮೇತ ಅರ್ಜಿ ಸಲ್ಲಿಸಬೇಕಿದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್‌ಗೆ isro.gov.in ಭೇಟಿ ನೀಡಬೇಕು.

ನೇಮಕಾತಿ ಪೂರ್ಣ ವಿವರ
ನೇಮಕಾತಿ ಸಂಸ್ಥೆ: ಇಸ್ರೋ
ಹುದ್ದೆಗಳು : 21ಕ್ಕೂ ಅಧಿಕ
ಗರಿಷ್ಠ ವಯೋಮಿತಿ : 35 ವರ್ಷ
ಅರ್ಜಿ ಶುಲ್ಕ: .750
ಅರ್ಜಿ ಸಲ್ಲಿಕೆ ಕೊನೆ ದಿನ: ಆಗಸ್ಟ್ 26
ಮಾಸಿಕ ವೇತನ: ರೂ. 44,900 ರಿಂದ 1,42,400 ರೂಪಾಯಿ.
ಹುದ್ದೆಗಳ ಇತರ ವಿವರ
* ತಾಂತ್ರಿಕ ಸಹಾಯಕ ಹುದ್ದೆಗಳು - 12
* ಉಪ ಹುದ್ದೆಗಳು - 1
* ತಂತ್ರಜ್ಞಾನ-ಬಿ ಹುದ್ದೆಗಳು -6
* ಹೆವಿ ವೆಹಿಕಲ್ ಡ್ರೈವರ್-ಎ ಹುದ್ದೆಗಳು- 2
* ಲಘು ವಾಹನ ಚಾಲಕ-ಎ ಹುದ್ದೆಗಳು ಖಾಲಿ ಇವೆ.
ವಯಸ್ಸಿನ ಮಿತಿ
ಇಸ್ರೋ ನೇಮಕಾತಿಯಲ್ಲಿ ನೀಡಿರುವ ಮಾಹಿತಿ ಪ್ರಕಾರ, ಅರ್ಜಿ ಸಲ್ಲಿಸುವ ಅರ್ಹ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷ ವಯಸ್ಸಾಗಿರಬೇಕು. ಜಾತಿ ಮೀಸಲಾತಿಗೆ ಅನುಗುಣವಾಗಿ ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 05 ವರ್ಷ, ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಸಿಗಲಿದೆ.
ಅರ್ಜಿ ಶುಲ್ಕ, ಮಾಸಿಕ ವೇತನ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಲ್ಲಿ ಮಹಿಳಾ/ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಬಿಡಿ/ಮಾಜಿ ಸೈನಿಕರ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇಲ್ಲ. ಉಳಿದಂತೆ ಎಲ್ಲಾ ಅಭ್ಯರ್ಥಿಗಳು: ರೂ.750 ರೂಪಾಯಿ ಶುಲ್ಕ ನಿಗದಿ ಮಾಡಲಾಗಿದೆ. ಆಯ್ಕೆ ಆಗುವವರಿಗೆ 7 ಪೇ ಮ್ಯಾಟ್ರಿಕ್ ಸಂಬಳಕ್ಕೆ ಅನುಗುಣವಾಗಿ 44,900 ರಿಂದ 1,42,400 ರೂಪಾಯಿ ವೇತನ ನೀಡಲಾಗುವುದು.
ವಿದ್ಯಾರ್ಹತೆ ಏನಿರಬೇಕು
ಇಸ್ರೋ ಸಂಸ್ಥೆ ಪ್ರಕಾರ, ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಹಾಗೂ ಶೈಕ್ಷಣಿಕ ಮಂಡಳಿಯಲ್ಲಿ 10 ನೇ, ಐಟಿಐ,ಡಿಪ್ಲೋಮಾ, ಬಿ ಎಸ್ಸಿ ಪದವಿ ಪಡೆದಿರುವುದು ಕಡ್ಡಾಯವೆಂದು ತಿಳಿಸಲಾಗಿದೆ. ಇದರೊಂದಿಗೆ ಭಾರತೀಯ ನಾಗರಿಕರಾದವರು ಅರ್ಜಿ ಸಲ್ಲಿಸಬೇಕು. ISRO ನಿಯಮ ಪಾಲನೆ ಕಡ್ಡಾಯವಾಗಿರುತ್ತದೆ. ತಪ್ಪು ಮಾಹಿತಿ ನೀಡಿದಲ್ಲಿ ಅಂತಹ ಅರ್ಜಿ ಸ್ವೀಕರಿಸಲಾಗುವುದಿಲ್ಲ.
ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅಧಿಕೃತ https://www.isro.gov.in/LPSCRecruitment12.html ಜಾಲತಾಣದಲ್ಲಿ ಅರ್ಜಿ ನಮೂನೆ ಭರ್ತಿ ಮಾಡಿ, ಸೂಕ್ತ ದಾಖಲೆ, ಫೋಟೋ ಸಮೇತ ಅರ್ಜಿ ಸಲ್ಲಿಸಬೇಕು. ಆಗಸ್ಟ್ 26ರೊಳಗೆ ಅರ್ಜಿ ಸಲ್ಲಿಸುವಂತೆ ಇಸ್ರೋ ತಿಳಿಸಿದೆ.












Click it and Unblock the Notifications