ಇಸ್ರೋದಲ್ಲಿ 106 ಹುದ್ದೆಗಳು ಖಾಲಿ ಇವೆ
ಬೆಂಗಳೂರು, ಫೆಬ್ರವರಿ 08 : ಇಸ್ರೋ 106 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಅಭ್ಯರ್ಥಿಗಳು ಫೆಬ್ರವರಿ 20, 2018ರೊಳಗೆ ಅರ್ಜಿಗಳನ್ನು ಸಲ್ಲಿಸಬೇಕಾಗಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಅಧಿಸೂಚನೆಯನ್ನು ಹೊರಡಿಸಿದೆ. ಒಟ್ಟು 106 ಸಂಶೋಧಕ/ಇಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಇ/ಬಿಟಿಕ್ ಅಥವ ತತ್ಸಮಾನ ಕೋರ್ಸ್‌ಗಳಲ್ಲಿ ಶೇ 65ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. 2017-18ನೇ ಸಾಲಿನಲ್ಲಿ ಈ ಕೋರ್ಸ್ ಮುಕ್ತಾಯಗೊಳಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. 31/8/2018ರೊಳಗೆ ಪದವಿ ಪಡೆಯುವಂತಿರಬೇಕು.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 35 ವರ್ಷಗಳ ವಯೋಮಿತಿ ನಿಗದಿ ಮಾಡಲಾಗಿದೆ. 20/2/2018ಕ್ಕೆ ಅನ್ವಯವಾಗುವಂತೆ. ಕೆಲಸದ ಸ್ಥಳ ಬೆಂಗಳೂರು, ವೇತನ 56100 ರೂ.ಗಳಾಗಿದೆ.
ಪ್ರಮುಖ ಮಾಹಿತಿಗಳು
ಒಟ್ಟು ಹುದ್ದೆಗಳು : 106
ಹುದ್ದೆ : ಸಂಶೋಧಕ/ಇಂಜಿನಿಯರ್
ಕೆಲಸದ ಸ್ಥಳ : ಬೆಂಗಳೂರು
ಕೊನೆ ದಿನಾಂಕ : 20/8/2018
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ












Click it and Unblock the Notifications