ಹಾಸನ: ಬೋಧಕ ಮತ್ತು ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ
ಹಾಸನ, ನವೆಂಬರ್ 2: ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಖಾಲಿ ಇರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲು ನ.17ರಂದು 9.30ರಿಂದ 5.30ರವರೆಗೆ ನೇರ ಸಂದರ್ಶನ ನಿಗದಿಪಡಿಸಿದ್ದು, ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ಸಂಬಂಧಿಸಿದ ಎಲ್ಲಾ ದಾಖಲಾತಿಗಳೊಂದಿಗೆ ನೇಮಕಾತಿ ಪ್ರಾಧಿಕಾರಕ್ಕೆ ನವೆಂಬರ್ 15ರೊಳಗೆ ಸಲ್ಲಿಸಲು ತಿಳಿಸಿದೆ.
ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳು ಅಪೂರ್ಣವಾಗಿದ್ದರೆ, ಅಂತಹ ಅರ್ಜಿಗಳನ್ನು ರದ್ದುಗೊಳಿಸಲಾಗುವುದು. ಅಭ್ಯರ್ಥಿಗಳು ಸಂಬಂಧಪಟ್ಟ ದಾಖಲಾತಿಗಳನ್ನು ಸ್ವಯಂ ದೃಢೀಕರಣದೊಂದಿಗೆ ಎರಡು ಪ್ರತಿಗಳಲ್ಲಿ ಸಲ್ಲಿಸುವಂತೆ ಸೂಚಿಸಿದೆ ಹಾಗೂ ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ನೇರ ಸಂದರ್ಶನದ ದಿನದಂದು ಹಾಜರಾಗುವಂತೆ ತಿಳಿಸಿದೆ.
ಬೋಧಕ ಹುದ್ದೆಗಳು:
1)Department: Pathology No of Post Asst. Professor: 01
2)Department: General Medicine No of Post vacant Asst. Professor: 07
3)Dermatology: No of Post vacant Professor: 01 Asso.
4)General Surgery No of Post vacant Professor: 02
5)Paediatrics No of Post vacant Asst. Professor: 01.
6)Orthopedics No of Post vacant Asst. Professor: 04
7)Anaesthesia: No of Post vacant Asst. Professor: 04
9)Radiology No of Post vacantProfessor: 01 Asso. Professor: 01 Asst. Professor: 01
10)Radiotherapy No of Post vacant Professor: 01
ಬೋಧಕೇತರ ಹುದ್ದೆಗಳು:
1)Department: Community medicine Post: LMO-2CMO-1 Reservation: LC-1 RPC-2
2)Clinical sychologist Post: Clinical Psychologist 1 Reservation: Since it is sing post no VR/HR Selection purely on merit
3)Microbiology (VRDL) Post: Research Scientist-1 (Medical) Reservation: (Contract basis)
ಈ ಕೆಳಗಿನ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಈ ಹುದ್ದೆಗಳು ಸಂಪೂರ್ಣವಾಗಿ ಒಪ್ಪಂದದ ಆಧಾರದ ಮೇಲೆ ಮತ್ತು ಸರ್ಕಾರದ ಆರೋಗ್ಯ ಸಂಶೋಧನಾ ಇಲಾಖೆಯ ನಿಯಮಗಳಿಗೆ ಬದ್ಧವಾಗಿದೆ. ಭಾರತ ಅರ್ಹತೆ ಮಾನದಂಡಗಳು, ವಯಸ್ಸಿನ ಮಿತಿ, ರೋಸ್ಟರ್, ಆಯ್ಕೆಯ ವಿಧಾನ ಮತ್ತು ಅರ್ಜಿ ನಮೂನೆಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು.
ವೇತನ ವಿವರ
1) Post Research Scientist-11 (Scientist 'C') No of Posts: 01 Monthly consolidated remuneration: Rs. 67,000+HRA
2) Post: Research Scientist-I(Scientist 'B') No of Posts: 01 Monthly consolidated remuneration: Rs. 56,000+HRA
3) Post: Lab technician No of Posts: 02 Monthly Consolidated remuneration: Rs.20,000+HRA
4) post: Data Entry Operator/Lab Assistant (Grade 'A') No of Posts: 01 Monthly consolidated remuneration: Rs.20,000/
ಷರತ್ತು ಮತ್ತು ನಿಬಂಧನೆಗಳು:
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳಿಗೆ ಅನ್ವಯವಾಗುವ ಮೀಸಲಾತಿಯನ್ನು ಅಳವಡಿಸಲಾಗಿದೆ. ವಯೋಮಿತಿ ಸಂಸ್ಥೆಯ ವೃಂದ ಮತ್ತು ನೇಮಕಾತಿ ನಿಯಮದಂತೆ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಲು ನ.17 ರಂದು ಬೆಳಿಗ್ಗೆ 9.30 ಗಂಟೆಯ ಒಳಗೆ ನೋಂದಣಿ ಮಾಡಿಸಬೇಕು.
ವಿದ್ಯಾರ್ಹತೆ ಬೋಧಾನಾನುಭವ ಮತ್ತು ಸಂಶೋಧನಾ ಪ್ರಕಟಣೆಗಳು
ಎನ್.ಎಂ.ಸಿ/ ಎಂ.ಸಿ.ಎ ನಿಯಮಗಳ ಪ್ರಕಾರ ಹಾಗೂ ಸಂಸ್ಥೆಯ ವೃಂದ ಮತ್ತು ನೇಮಕಾತಿ ನಿಯಮಗಳ ಅನುಸಾರ ಕಡ್ಡಾಯವಾಗಿ ಇರತಕ್ಕದ್ದು. ವಿದ್ಯಾರ್ಹತೆ, ಬೋಧನಾ ಅನುಭವ, ಸಂಶೋಧನಾ ಪ್ರತಿ ಹಾಗೂ ಇತರೆ ಸಂಬಂಧಪಟ್ಟ ಮೂಲ ದಾಖಲಾತಿಗಳನ್ನು ಸಂದರ್ಶನದ ವೇಳೆ ಹಾಜರುಪಡಿಸತಕ್ಕದ್ದು ಹಾಗೂ ಎರಡು ಪಾಸ್‍ಪೋರ್ಟ್ ಸೈಜ್ ಭಾವಚಿತ್ರವನ್ನು ಒದಗಿಸುವುದು.
ಸರ್ಕಾರಿ ಸೇವೆಯಲ್ಲಿ ಸರ್ಕಾರದ ಸ್ವಾಯತ್ತ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರುಗಳು ನಿರಾಪೇಕ್ಷಣಾ ಪತ್ರವನ್ನು ಕಡ್ಡಾಯವಾಗಿ ಒದಗಿಸುವುದು. ನಿಗದಿತ ಅರ್ಜಿ ನಮೂನೆಯೊಂದಿಗೆ ರೂ.2500.00 ಮೊತ್ತದ ಡಿ.ಡಿಯನ್ನು The Director, HIMS, Hassan ಇವರ ಹೆಸರಿನಲ್ಲಿ ಪಡೆದು ನಕಲು ದಾಖಲಾತಿಗಳೊಂದಿಗೆ ಲಗತ್ತಿಸಿ ಸ್ವಯಂ ದೃಢೀಕರಣದೊಂದಿಗೆ ಮುಖ್ಯ ಆಡಳಿತಾಧಿಕಾರಿಗಳು ಹಾಸನ ರವರ ಕಚೇರಿಗೆ ಸಂಜೆ 5 ಗಂಟೆಯೊಳಗೆ ಖುದ್ದಾಗಿ ಅಥವಾ ಅಂಚೆ ಮೂಲಕ ತಲುಪಿಸಬೇಕು.
ಹುದ್ದೆಗಳ ಸಂಖ್ಯೆಯು ನೇಮಕಾತಿ ಸಮಿತಿಯ ನಿರ್ಧಾರದಂತೆ ಬದಲಾಗಬಹುದು. ಸರ್ಕಾರದ ಆದೇಶ ಸಂಖ್ಯೆ: ಆಕುಕ 19 ಪಸ್ವೀರ 2016, ದಿನಾಂಕ: 04.05.2018ರ ಪ್ರಕಾರ ಸ್ಥಳೀಯ ವೃಂದದ ಹೈದ್ರಾಬಾದ್ ಕರ್ನಾಟಕ ಮೀಸಲಾತಿ ಹುದ್ದೆಗಳ ಅಭ್ಯರ್ಥಿಗಳು ಹಾಜರಾಗದಿದ್ದಲ್ಲಿ 371ಜೆ ಅಡಿ ಗುರುತಿಸಿರುವ ಹುದ್ದೆಗಳ ಪೈಕಿ ಎರಡನೇ ಬಾರಿಯು ಸಂದರ್ಶನದಲ್ಲಿ ಅಭ್ಯರ್ಥಿಗಳು ಲಭ್ಯವಾಗದಿದ್ದಲ್ಲಿ ಮೀಸಲಾತಿಯಿಂದ ಮುಕ್ತ ಮಾಡಿ ಆಯಾ ಕೆಟಗರಿಯ ಅಭ್ಯರ್ಥಿಗಳ ಮೂಲಕ ಭರ್ತಿ ಮಾಡಲಾಗುವುದು.
ನೇರ ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳಿಗೆ ಯಾವುದೇ ಭತ್ಯೆ ನೀಡಲಾಗುವುದಿಲ್ಲ. ಅರ್ಜಿ ನಮೂನೆ, ಮೀಸಲಾತಿ, ವೃಂದ ಮತ್ತು ನೇಮಕಾತಿ ನಿಯಮಗಳು ಹಾಗೂ ಇತರೆ ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಅಂತರ್ಜಾಲ www.himshassan.karnataka.gov.in ಇಲ್ಲಿ ಸಂಪರ್ಕಿಸಬಹುದಾಗಿದೆ.