Intel jobs cuts: ಇಂಟೆಲ್‌ನಲ್ಲಿ ಶೇಕಡ 20ರಷ್ಟು ಉದ್ಯೋಗಿಗಳ ವಜಾ..
ಇಂಟೆಲ್ ಕಾರ್ಪೊರೇಷನ್ ಸಿಇಒ ಲಿಪ್-ಬು ಟ್ಯಾನ್ ನೇತೃತ್ವದಲ್ಲಿ, ಶೇಕಡ 20ರಷ್ಟು ಉದ್ಯೋಗಿಗಗಳನ್ನು ವಜಾಗೊಳಿಸುವುದಾಗಿ ಘೋಷಣೆ ಮಾಡಿದೆ. ಈ ಪಟ್ಟಿಯಲ್ಲಿ ಸಿಪಿಯು, ಜಿಪಿಯು ಡೆವೆಲಪ್‌ಮೆಂಟ್ ತಂಡಗಳ ಇಂಜಿನಿಯರ್‌ಳು ಮತ್ತು ಹಿರಿಯ ಮ್ಯಾನೇಜರ್‌ಗಳು ಸಹ ಇದ್ದಾರೆ. ಹಾಗಾದ್ರೆ ಎಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಹೊಸದಾಗಿ ನೇಮಕಗೊಂಡ ಸಿಇಒ ಲಿಪ್-ಬು ಟಾನ್ ಅವರ ನೃತೃತ್ವದಲ್ಲಿ ವೆಚ್ಚ ಕಡಿತ ಮತ್ತು ಪುನರಚನೆಯ ದೃಷ್ಟಿಯಿಂದ ಇಂಟೆಲ್ ಕ್ಯಾಲಿಫೋರ್ನಿಯಾದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಲು ಪ್ರಾರಂಭಿಸಿದೆ. ಸಾಂತಾ ಕ್ಲಾರಾ ಪ್ರಧಾನ ಕಚೇರಿಯಲ್ಲಿನ ತನ್ನ 107 ಉದ್ಯೋಗಿಗಳನ್ನು ವಜಾಗೊಳಿಸಲಾಗಿತ್ತು. ಇದರ ಬೆನ್ನಲ್ಲೇ ಇಂಟೆಲ್ ಈ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ.

ಉದ್ಯೋಗ ಕಡಿತವು ಜುಲೈ 15ರಿಂದ ಪ್ರಾರಂಭ ಆಗಲಿದ್ದು, ಈ ಬಗ್ಗೆ ಕ್ಯಾಲಿಫೋರ್ನಿಯಾದ ವಾರ್ನ್ (WARN) ಕಾಯ್ದೆಯಡಿಯಲ್ಲಿ ಸಲ್ಲಿಸಲಾದ ನೋಟಿಸ್‌ನಲ್ಲಿ ತಿಳಿಸಲಾಗಿದೆ. ಇಂಟೆಲ್ ತನ್ನ ಕೋರ್ ಚಿಪ್ ವಿನ್ಯಾಸ ಮತ್ತು ಉತ್ಪಾದನೆಗೆ ಸಂಬಂಧಿಸಿದ ವ್ಯವಹಾರಗಳನ್ನು ರದ್ದುಪಡಿಸಲಿದೆ. ಇದರಲ್ಲಿ 22 ಫಿಸಿಕಲ್ ಡಿಸೈನ್ ಇಂಜಿನಿಯರ್‌ಗಳು, ಕ್ಲೌಡ್ ಸಾಫ್ಟ್ವೇರ್ ಡೆವಲಪರ್ಗಳು, ಸಿಸ್ಟಮ್-ಆನ್-ಚಿಪ್ ಡಿಸೈನರ್‌ಗಳಿಳು, ವೈಸ್ ಪ್ರೆಸಿಡೆಂಟ್ ಆಫ್ ಐಟಿ, ಇಂಜಿನಿಯರಿಂಗ್ ಪ್ರಾಜೆಕ್ಟ್ ಮ್ಯಾನೇಜರ್‌ಗಳು ಮತ್ತು ಸ್ಟ್ರಾಟಜಿ ಹೆಟ್‌ಳು ಸೇರಿದ್ದಾರೆ.
ಕಂಪನಿಯು ಉದ್ಯೋಗಿಗಳಿಗೆ 60 ದಿನಗಳ ನೋಟಿಸ್ ಅಥವಾ ನಾಲ್ಕು ವಾರಗಳ ಅವಧಿಯ ನೋಟಿಸ್ ಜೊತೆಗೆ ಒಂಬತ್ತು ವಾರಗಳ ಸಂಬಳ ಮತ್ತು ಭತ್ಯೆಯನ್ನು ಪಡೆಯುವುದಾಗಿ ತಿಳಿಸಿದೆ. ಈ ವಜಾಗೊಳಿಸುವಿಕೆಯು ಜುಲೈ ಮಧ್ಯದಲ್ಲಿ ಶೇಕಡ 20ರಷ್ಟು ಉದ್ಯೋಗಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಇಂಟೆಲ್‌ನ ಕಾರ್ಯಾಚರಣೆಯನ್ನು ಸುಗಮಗೊಳಿಸುವ ದೃಷ್ಟಿಯಿಂದ ಶೇಕಡ 15ರಿಂದ 20ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗುವುದು ಎಂದು ಟಾನ್ ಈ ಹಿಂದೆ ಘೋಷಿಸಿದ್ದರು. ಅದರಂತೆಯೇ ಇದೀಗ ಉದ್ಯೋಗ ವಜಾಗೊಳಿಸುವ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.
ಉದ್ಯೋಗ ಕಡಿತದಿಂದ ಇಂಟೆಲ್‌ನ ಹಲವಾರು ಇಂಜಿನಿಯರಿಂಗ್ ಉದ್ಯೋಗಿಗಳ ಮೇಲೆ ಪರಿಣಾಮ ಬೀರುತ್ತದೆ. ಕಂಪನಿಯನ್ನು ಹೆಚ್ಚು ಲಾಭದಾಯಕ ಹಾಗೂ ದೊಡ್ಡ ಮಟ್ಟದಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದ ಎಂದು ಸಿಇಒ ಲಿಪ್-ಬು ಟ್ಯಾನ್ ಸ್ಪಷ್ಟವಾಗಿ ಹೇಳಿದ್ದಾರೆ.
ಅಲ್ಲದೆ, ಕಂಪನಿಯು ಹೆಚ್ಚಿನ ಕಾರ್ಯಕ್ಷಮತೆಯ ತಂಡಗಳನ್ನು ಸಬಲೀಕರಣಗೊಳಿಸುವತ್ತ ಗಮನಹರಿಸಬೇಕಾಗಿದೆ. ಉದ್ಯೋಗ ಕಡಿತದ ವೇಳೆ ಕೆಸಲವನ್ನು ಹೇಗೆ ನಿಭಾಯಿಸುವುದು ಎಂಬುದನ್ನು ನಾಯಕತ್ವವು ನಿರ್ಧರಿಸುತ್ತದೆ ಎಂದು ಅಂತಲೂ ಹೇಳಿದ್ದಾರೆ.
ಉದ್ಯೋಗಿಗಳ ವಜಾಗೊಳಿಸುವುದರ ಜೊತೆಗೆ, ಇಂಟೆಲ್ ತನ್ನ ಮಾರ್ಕೆಟಿಂಗ್ ಕಾರ್ಯಾಚರಣೆಗಳ ಭಾಗಗಳನ್ನು ಅಕ್ಸೆಂಚರ್‌ಗೆ ಹೊರಗುತ್ತಿಗೆ ನೀಡಲು ಯೋಜಿಸಿದೆ. ಇದು ಗ್ರಾಹಕ ಸಂವಹನ ಕಾರ್ಯಗಳನ್ನು ನಿರ್ವಹಿಸಲು AI ಪರಿಕರಗಳನ್ನು ಬಳಸುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ.
ಈಗಾಗಲೇ 2024ರಲ್ಲಿ ಕಂಪನಿಯು 15,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿತ್ತು. ಇದರ ಬೆನ್ನಲ್ಲೇ ಇದೀಗ ಇಂಟೆಲ್‌ನ ಮತ್ತೆ ವಜಾಗೊಳಿಸುವ ಕಾರ್ಯಕ್ಕೆ ಕೈಹಾಕಿದೆ. ಶೀಘ್ರದಲ್ಲೇ ಮತ್ತಷ್ಟು ಉದ್ಯೋಗಗಳು ಕಡಿತ ಆಗಲಿದ್ದು, ಈ ಮೂಲಕ ಕಂಪನಿಯೂ ಮಹತ್ವದ ಬದಲಾವಣೆಗಳಿಗೆ ಸಿದ್ಧತೆ ನಡೆಸುತ್ತಿದೆ.
ಮೂಲಗಳ ಪ್ರಕಾರ, 2025ರಲ್ಲಿ ಮಾತ್ರ 62,000ಕ್ಕೂ ಹೆಚ್ಚು ತಂತ್ರಜ್ಞಾನ ಕಾರ್ಮಿಕರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ಮೈಕ್ರೋಸಾಫ್ಟ್, ಗೂಗಲ್, ಅಮೆಜಾನ್‌ನಂತರ ಪ್ರಮುಖ ಕಂಪನಿಗಳು ಉದ್ಯೋಗ ಕಡಿತ ಮಾಡುತ್ತಲೇ ಇವೆ.












Click it and Unblock the Notifications