RRB Recruitment 2025: ಬರೋಬ್ಬರಿ 55,000ಕ್ಕೂ ಅಧಿಕ ಹುದ್ದೆಗಳ ನೇಮಕಾತಿ, ಪೂರ್ಣ ವಿವರ ಇಲ್ಲಿದೆ

ಬೆಂಗಳೂರು, ಜುಲೈ 13: ಭಾರತೀಯ ರೈಲ್ವೆ ಇಲಾಖೆ ವ್ಯಾಪ್ತಿಯಲ್ಲಿ ಯಾರೆಲ್ಲ ಉದ್ಯೋಗ ಪಡೆಯಲು ಇಚ್ಛಿಸುತ್ತೀದಿರಿ, ನಿಮಗೆಲ್ಲ ಖುಷಿ ಸುದ್ದಿಯೊಂದು ಸಿಕ್ಕಿದೆ. ಕೇಂದ್ರ ರೈಲ್ವೆ ಸಚಿವಾಲಯದ ಸೂಚನೆ ಮೇರೆಗೆ ಬೃಹತ್ ನೇಮಕಾತಿ ಆರಂಭವಾಗಿದೆ. ಏಳು ನೇಮಕಾತಿಗಳ ಅಡಿಯಲ್ಲಿ ಒಟ್ಟು 50,000ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಕುರಿತ ಇನ್ನಷ್ಟು ಮಾಹಿತಿ ಇಲ್ಲಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ (2025-26) ಒಟ್ಟು 55,197 ಹುದ್ದೆಗಳ ನೇಮಕಾತಿ ಇದಾಗಿದ್ದು, ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಕೇಂದ್ರ ಸರ್ಕಾರ ನೇಮಕಾತಿ ಆಗಿರುವ 9000ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ನೇಮಕಗೊಂಡ ಆದೇಶ ಪತ್ರ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ನೇಮಕಾತಿ ಆದಂತೆ ಆದೇ ವಿತರಿಸಲು ಪ್ಲಾನ್ ಮಾಡಿಕೊಳ್ಳಲಾಗಿದೆ.

Indian Railways to Recruit Over 50 000 Candidates in 2025-26 RRB Opens Massive Hiring Drive

ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಸುಮಾರು 1.80 ಕೋಟಿ ಗೂ ಅಧಿಕ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಪರೀಕ್ಷೆಗಳನ್ನು ರೈಲ್ವೆ ನೇಮಕಾತಿ ಮಂಡಳಿ (RRB) ನಡೆಸಿದೆ. ಮುಂದೆ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಿ ಪಾಲ್ಗೊಳ್ಳಬಹುದು. ನೇಮಕಾತಿ ವಿವರ ಇಲ್ಲಿದೆ.

ರೈಲ್ವೆ ಇಲಾಖೆ ವ್ಯಾಪ್ತಿಯಲ್ಲಿ ಒಟ್ಟು 1,08,324 ಖಾಲಿ ಹುದ್ದೆಗಳನ್ನು 2027ರ ವರೆಗೆ ಭರ್ತಿ ಮಾಡಿಕೊಳ್ಳಲು ಕೇಂದ್ರ ರೈಲ್ವೆ ಸಚಿವಾಲಯ ನಿರ್ಧರಿಸಿದೆ. ಅದರಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಈ ಮೇಲಿನ 50 ಸಾವಿರಕ್ಕೂ ಅಧಿಕ ಹುದ್ದೆಗಳ ನೇಮಕಾತಿ ನಡೆಯುತ್ತಿದೆ. ಉಳಿದ ನೇಮಕಾತಿಗಳು ಮುಂಬರಲಿರುವ ವರ್ಷಗಳಲ್ಲಿ ನಡೆಯಲಿವೆ.

ತಾಂತ್ರಿಕ ಮತ್ತು ತಾಂತ್ರಿಕೇತರ ಹಾಗೂ ಸಪೋರ್ಟ್ ಸ್ಟಾಪ್ ಹುದ್ದೆಗಳಿಗೆ ಅವಕಾಶ ಇದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ನೋಡುವುದಾದರೆ, ಆಸಕ್ತ ಅಭ್ಯರ್ಥಿಗಳು ಮೊದಲು RRB ಅಧಿಕೃತ ಜಾಲತಾಣ rrbcdg.gov.in ಭೇಟಿ ನೀಡಿ. ಅಲ್ಲಿ ಕೇಳಲಾಗುವ ಅಗತ್ಯ ದಾಖಲೆಗಳ ಸಮೇತ ಅರ್ಜಿ ಸಲ್ಲಿಸಬೇಕು. ವಿವಿಧ ಜಾತಿವಾರು ಆಧಾರದಲ್ಲಿ ಅರ್ಜಿ ಶುಲ್ಕ 500 ರಿಂದ 1000 ರೂಪಾಯಿ ವರೆಗೆ ಇರಲಿದೆ. ಪಾರದರ್ಶಕವಾಗಿ ನೇಮಕಾತಿ ನಡೆಯುತ್ತದೆ. ಯಾವುದೇ ವಂಚನೆಗಳಿಗೆ ಅವಕಾಶ ನೀಡದೇ ನಡೆಸಲಾಗುತ್ತಿದೆ.

ಅರ್ಹ ಅಭ್ಯರ್ಥಿಗಳಿಗೆ ಆರ್‌ಆರ್‌ಬಿ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಪರೀಕ್ಷೆ ನಡೆಸುತ್ತದೆ. ನಂತರ ದಾಖಲಾತಿ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆ ನಡೆಸಿ ಅಂತಿಮವಾಗಿ ಆಯ್ಕೆಗೊಂಡ ಅಭ್ಯರ್ಥಿಗಳನ್ನು ಪ್ರಕಟಿಸುತ್ತದೆ. ಅಧಿಸೂಚನೆ, ಹೆಚ್ಚಿನ ಮಾಹಿತಿಗಾಗಿ RRB ಜಾಲತಾಣಕ್ಕೆ ಭೇಟಿ ನೀಡುವಂತೆ ಪ್ರಕಟಣೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+