Indian Railways Recruitment 2025: ರೈಲ್ವೆ ನೇಮಕಾತಿ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ
RRB Recruitment 2025: ಭಾರತೀಯ ರೈಲ್ವೆಯು ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ವಿಶೇಷ ರೈಲುಗಳನ್ನು ಬಿಡುತ್ತಲೇ ಇರುತ್ತದೆ. ಅಲ್ಲದೆ ಉದ್ಯೋಗಾವಕಾಶಗಳನ್ನು ಕೂಡ ಒದಗಿಸುತ್ತಿರುತ್ತದೆ. ಹಾಗೆಯೇ ಇತ್ತೀಚೆಗಷ್ಟೇ ಖಾಲಿ ಇರುವ ಹುದ್ದೆಗಳಿಗೆ ಆಹ್ವಾನಿಸಿದ್ದ ಅರ್ಜಿ ಅರ್ಜಿ ಸಲ್ಲಿಕೆ ಕೊನೇ ದಿನಾಂಕವನ್ನು ಮತ್ತೆ ಇದೀಗ ವಿಸ್ತರಣೆ ಮಾಡಿದೆ. ಮಾಹಿತಿ ಇಲ್ಲಿದೆ ಗಮನಿಸಿ.
ಆರ್‌ಆರ್ಬಿ 1,036ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಕೆಗೆ ಕೊನೇ ದಿನಾಂಕವನ್ನು ಫೆಬ್ರವರಿ 16ಕ್ಕೆ ವಿಸ್ತರಣೆ ಮಾಡಿದೆ. ಸ್ನಾತಕೋತ್ತರ ಶಿಕ್ಷಕರು, ವೈಜ್ಞಾನಿಕ ಮೇಲ್ವಿಚಾರಕರು ಮುಂತಾದ ಹಲವು ಹುದ್ದೆಗಳು ಲಭ್ಯವಿವೆ. ಅರ್ಹ ಅಭ್ಯರ್ಥಿಗಳು ಫೆಬ್ರವರಿ 16ರ ರಾತ್ರಿ 11:59ರೊಳಗೆ ಅರ್ಜಿ ಸಲ್ಲಿಕೆ ಮಾಡಬೇಕು. ಶುಲ್ಕ ಪಾವತಿಗೆ ಫೆಬ್ರವರಿ 17, 2025 ಕೊನೇ ದಿನಾಂಕ ಆಗಿದೆ. ಆನ್‌ಲೈನ್ ಪರೀಕ್ಷೆ, ಬೋಧನಾ ಕೌಶಲ್ಯ ಪರೀಕ್ಷೆ ಮುಂತಾದ ಆಯ್ಕೆ ಪ್ರಕ್ರಿಯೆ ಇರುತ್ತದೆ.

ರೈಲ್ವೆಯಲ್ಲಿ ಆರ್‌ಆರ್‌ಬಿ ಮಂತ್ರಿ ಮತ್ತು ಪ್ರತ್ಯೇಕ ವರ್ಗದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಕೊನೇ ದಿನಾಂಕ ಫೆಬ್ರವರಿ 6ಕ್ಕೆ ನಿಗದಿ ಆಗಿತ್ತು. ಈ ಹಿನ್ನೆಲೆ ರೈಲ್ವೆ ನೇಮಕಾತಿ ಮಂಡಳಿ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವನ್ನು ವಿಸ್ತರಿಸುವ ಪ್ರಮುಖ ಪ್ರಕಟಣೆಯನ್ನ ಹೊರಡಿಸಿದೆ. ಅರ್ಜಿ ಸಲ್ಲಿಕೆಗೆ ಅಧಿಕೃತ ವೆಬ್‌ಸೈಟ್ www.rrbapply.gov.inಗೆ ಭೇಟಿ ನೀಡಬಹುದಾಗಿದೆ.
ಈ ಅಧಿಸೂಚನೆಯ ಮೂಲಕ, ಸ್ನಾತಕೋತ್ತರ ಶಿಕ್ಷಕರು, ವೈಜ್ಞಾನಿಕ ಮೇಲ್ವಿಚಾರಕರು, ತರಬೇತಿ ಪಡೆದ ಪದವೀಧರ ಶಿಕ್ಷಕರು, ಮುಖ್ಯ ಕಾನೂನು ಸಹಾಯಕ, ಸಾರ್ವಜನಿಕ ಅಭಿಯೋಜಕ, ದೈಹಿಕ ತರಬೇತಿ ಬೋಧಕ, ಕಿರಿಯ ಅನುವಾದಕ, ಗ್ರಂಥಪಾಲಕ, ಪ್ರಾಥಮಿಕ ರೈಲ್ವೆ ಶಿಕ್ಷಕರು, ಸಹಾಯಕ ಶಿಕ್ಷಕರು ಸೇರಿದಂತೆ ಒಟ್ಟು 1,036 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಅರ್ಹ ಅಭ್ಯರ್ಥಿಗಳು ಫೆಬ್ರವರಿ 16ರ ಒಳಗೆ ಅರ್ಜಿ ಸಲ್ಲಿಸಿ.
ಹುದ್ದೆಗಳ ವಿವರ
* ಸ್ನಾತಕೋತ್ತರ ಶಿಕ್ಷಕರ ಹುದ್ದೆಗಳ ಸಂಖ್ಯೆ - 187
* ವೈಜ್ಞಾನಿಕ ಮೇಲ್ವಿಚಾರಕ ಹುದ್ದೆಗಳ ಸಂಖ್ಯೆ - 03
* ತರಬೇತಿ ಪಡೆದ ಪದವೀಧರ ಶಿಕ್ಷಕರ ಹುದ್ದೆಗಳ ಸಂಖ್ಯೆ - 338
* ಮುಖ್ಯ ಕಾನೂನು ಸಹಾಯಕ ಹುದ್ದೆಗಳ ಸಂಖ್ಯೆ - 54
* ಪಬ್ಲಿಕ್ ಪ್ರಾಸಿಕ್ಯೂಟರ್ ಹುದ್ದೆಗಳ ಸಂಖ್ಯೆ - 20
* ದೈಹಿಕ ತರಬೇತಿ ಬೋಧಕರ ಹುದ್ದೆಗಳ ಸಂಖ್ಯೆ - 18
* ವೈಜ್ಞಾನಿಕ ಸಹಾಯಕ/ತರಬೇತಿ ಹುದ್ದೆಗಳ ಸಂಖ್ಯೆ - 02
* ಜೂನಿಯರ್ ಟ್ರಾನ್ಸ್‌ಲೇಟರ್ ಹುದ್ದೆಗಳ ಸಂಖ್ಯೆ - 130
* ಹಿರಿಯ ಪ್ರಚಾರ ನಿರೀಕ್ಷಕರ ಹುದ್ದೆಗಳ ಸಂಖ್ಯೆ - 03
* ಸಿಬ್ಬಂದಿ ಮತ್ತು ಕಲ್ಯಾಣ ನಿರೀಕ್ಷಕರ ಹುದ್ದೆಗಳು- 59
* ಸಂಗೀತ ಶಿಕ್ಷಕರ ಹುದ್ದೆಗಳಿ - 10
* ಪ್ರಾಥಮಿಕ ರೈಲ್ವೆ ಶಿಕ್ಷಕರ ಹುದ್ದೆಗಳ ಸಂಖ್ಯೆ - 03
* ಗ್ರಂಥಪಾಲಕ ಹುದ್ದೆಗಳ ಸಂಖ್ಯೆ - 188
* ಸಹಾಯಕ ಶಿಕ್ಷಕರ ಹುದ್ದೆಗಳು - 02
* ಪ್ರಯೋಗಾಲಯ ಸಹಾಯಕ/ಶಾಲಾ ಹುದ್ದೆಗಳು - 7
* ಪ್ರಯೋಗಾಲಯ ಸಹಾಯಕ ಗ್ರೇಡ್-3 ಹುದ್ದೆಗಳ ಸಂಖ್ಯೆ - 12
ಅರ್ಜಿ ಸಲ್ಲಿಸಬಯಸುವವರು, ಡಿಪ್ಲೊಮಾ, ಪದವಿ, ಪಿಜಿ, ಪಿಜಿ ಡಿಪ್ಲೊಮಾ, ಎಂಬಿಎ ಜೊತೆಗೆ ಟಿಇಟಿ ಉತ್ತೀರ್ಣರಾಗಿರಬೇಕು. ಅಭ್ಯರ್ಥಿಗಳ ವಯಸ್ಸಿನ ಮಿತಿ ಜನವರಿ 01, 2025ಕ್ಕೆ 18 ವರ್ಷ ಆಗಿರಬೇಕಾಗುತ್ತದೆ. ಇನ್ನು ಸಾಮಾನ್ಯ ಅಭ್ಯರ್ಥಿಗಳು 500 ರೂಪಾಯಿ, ಎಸ್‌ಸಿ, ಎಸ್‌ಟಿ, ಪಿಡಬ್ಲ್ಯೂಬಿಡಿ, ಮಾಜಿ ಸೈನಿಕರು, ಇಬಿಸಿ ಮತ್ತು ಅಲ್ಪಸಂಖ್ಯಾತ ಅಭ್ಯರ್ಥಿಗಳು 250 ರೂಪಾಯಿ ಅರ್ಜಿ ಶುಲ್ಕ ಪಾವತಿಸಬೇಕಾಗುತ್ತದೆ. ಫೆಬ್ರವರಿ 19ರಿಂದ 28 ರವರೆಗೆ ಅರ್ಜಿಗಳನ್ನು ಪರಿಷ್ಕರಣೆಗೆ ಅವಕಾಶ ಕಲ್ಪಿಸಲಾಗಿದೆ. ಅಭ್ಯರ್ಥಿಗಳನ್ನು ಆನ್‌ಲೈನ್ ಲಿಖಿತ ಪರೀಕ್ಷೆ, ಬೋಧನಾ ಕೌಶಲ್ಯ ಪರೀಕ್ಷೆ, ಅನುವಾದ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ.












Click it and Unblock the Notifications