Railway Recruitment: ಭರ್ಜರಿ 32,438 ಹುದ್ದೆಗಳ ನೇಮಕಾತಿ, ಅರ್ಜಿ ಆಹ್ವಾನಿಸಿದ RRB
ಬೆಂಗಳೂರು, ಡಿಸೆಂಬರ್ 24: ಭಾರತೀಯ ರೈಲ್ವೆ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳಿಗೆ ರೈಲ್ವೆ ನೇಮಕಾತಿ ಮಂಡಳಿಯು (RRB) ಸಿಹಿ ಸುದ್ದಿ ನೀಡಿದೆ. ಗ್ರೂಪ್ ಡಿ ಹುದ್ದೆಗಳ ನೇಮಕಾತಿ 2025ಕ್ಕೆ ಸಂಬಂಧಿಸಿದಂತೆ ಹೊಸ ಅಧಿಸೂಚನೆ ಬಿಡುಗಡೆ ಮಾಡಿದೆ. ಅಜಿ ಸಲ್ಲಿಕೆಯು ಜನವರಿ 23ರಿಂದ ಆರಂಭವಾಗಲಿದೆ. ಸರ್ಕಾರಿ ಉದ್ಯೋಗ ಬಯಸುವ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶವಾಗಿದೆ.
ರೈಲ್ವೇ ನೇಮಕಾತಿ ಮಂಡಳಿ (RRB) ಗ್ರೂಪ್ ಡಿ ನೇಮಕಾತಿ ಪ್ರಕ್ರಿಯೆ ಗೆ ಸಂಬಂಧಿಸಿದಂತೆ ಒಟ್ಟು 32,438 ಹುದ್ದೆಗಳಿಗೆ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಕೂಡಲೇ ಅಧಿಕೃತ ವೆಬ್‌ಸೈಟ್ rrbcdg.gov.in ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬೇಕು. ಫೆಬ್ರವರಿ 22 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ.

ಅರ್ಜಿ ಸಲ್ಲಿಕೆಗೂ ಮೊದಲು ವೇತನ, ಹುದ್ದೆಗಳು ವಿಭಾಗವಾರು ಮಾಹಿತಿ, ಶೈಕಣಿಕ ಅರ್ಹತೆ, ಅರ್ಜಿ ಸಲ್ಲಿಕೆ ವಿಧಾನ, ಮಾಸಿಕ ವೇತನ ಇನ್ನಿತರ ನೇಮಕಾತಿ ಮಾಹಿತಿ ತಿಳಿದು ಅರ್ಜಿ ಸಲ್ಲಿಸಿ.
ನೇಮಕಾತಿ ಪೂರ್ಣ ಮಾಹಿತಿ
ನೇಮಕಾತಿ ಸಂಸ್ಥೆ: ಆರ್‌ಆರ್‌ಬಿ
ಅರ್ಜಿ ಸಲ್ಲಿಕೆ: ಆನ್‌ನೈಲ್
ಮಾಸಿಕ ವೇತನ: ನಿಯಮಾನುಸಾರ
ಅರ್ಜಿ ಸಲ್ಲಿಕೆ ಆರಂಭ: ಜನವರಿ 23
ಅರ್ಜಿ ಸಲ್ಲಿಕೆ ಕೊನೆ ದಿನ: ಫೆಬ್ರವರಿ 22
ಒಟ್ಟು ಹುದ್ದೆಗಳು: 32,438 ಹುದ್ದೆಗಳು
ಹುದ್ದೆಗಳ ಪೂರ್ತಿ ಮಾಹಿತಿ, ಪಟ್ಟಿ
ಟ್ರ್ಯಾಕ್ ಮೇಂಟೇನರ್: 13,187 ಹುದ್ದೆಗಳು
ಪಾಯಿಂಟ್ಸ್‌ಮನ್: 5058 ಹುದ್ದೆಗಳು
ಸಹಾಯಕ (ವಿವಿಧ): ಒಟ್ಟು 3,077 ಹುದ್ದೆಗಳು
ಇಂಜಿನಿಯರಿಂಗ್ ಸಹಾಯಕ (ಟ್ರ್ಯಾಕ್ ಮೆಷಿನ್) 799
ಸಹಾಯಕ (ಸೇತುವೆ): 301
ಸಹಾಯಕ ಪಿ-ವೇ: 247
ಮೆಕ್ಯಾನಿಕಲ್ ಸಹಾಯಕ : 2587
ಸಹಾಯಕ ಲೋಕೋ ಶೆಡ್ (ಡೀಸೆಲ್): 420
ಸಹಾಯಕ (ಕಾರ್ಯಾಗಾರ): 3077
ಎಸ್‌ಆಂಡ್ ಟಿ ಸಹಾಯಕ: 2012
ಎಲೆಕ್ಟ್ರಿಕಲ್ ಸಹಾಯಕ (ಆರ್‌ಟಿ): 1381
ಸಹಾಯಕ ಲೋಕೋ ಶೆಡ್ (ಎಲೆಕ್ಟ್ರಿಕಲ್): 950
ಸಹಾಯಕ ಕಾರ್ಯಾಚರಣೆಗಳು (ವಿದ್ಯುತ್): 744
ಸಹಾಯಕ ಟಿಎಲ್ ಆಂಡ್ ಎಸಿ: 1041
ಸಹಾಯಕ ಟಿಎಲ್ ಆಂಡ್ ಎಸಿ: (ವರ್ಕ್‌ಶಾಪ್) 624

ಶೈಕ್ಷಣಿಕ ವಿದ್ಯಾರ್ಹತೆ
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು 10ನೇ ತರಗತಿ ಪಾಸಾಗಿರಬೇಕು. ಅಥವಾ ಎನ್‌ಸಿವಿಟಿ ಅಥವಾ ಐಟಿಐಯಿಂದ ಎನ್‌ಇಸಿ ಪ್ರಮಾಣಪತ್ರ ಪಡೆದಿರುವುದು ಕಡ್ಡಾಯ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅಭ್ಯರ್ಥಿಗಳ ವಯೋಮಿತಿ
ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಬಯಸುವ ಅರ್ಜಿದಾರರಿಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 36 ವರ್ಷ ವಯಸ್ಸಾಗಿರಬೇಕು.
ಅರ್ಜಿಯ ಇತರ ಮಾಹಿತಿ
ರೈಲ್ವೆ ನೇಮಕಾತಿ ಮಂಡಳಿಯು ಈ ಮೇಲಿನ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಈ ನೇಮಕಾತಿ ಪ್ರಕ್ರಿಯೆ ಮುಂದಿನ ವರ್ಷ 2025ರ ಜನವರಿ 23ರಿಂದ ಆರಂಭವಾಗಲಿದೆ. ಅರ್ಜಿ ಸಲ್ಲಿಸುವಾಗ ಅರ್ಜಿದಾರರು ವಿದ್ಯಾರ್ಹತೆಗಳು ಮತ್ತು ನೇಮಕಾತಿ ಪ್ರಕ್ರಿಯೆಗೆ ಸೂಕ್ತ ದಾಖಲಾತಿಗಳ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.
ಹೆಚ್ಚುವರಿ ನೇಮಕಾತಿ ಸುದ್ದಿ
ನೇಮಕಾತಿಯ ಇತರ ಮಾಹಿತಿ
ಆರ್‌ಆರ್‌ಬಿ ಅಧಿಸೂಚನೆ ಪ್ರಕಾರ, ರೈಲ್ವೆ ವ್ಯಾಪ್ತಿಯ 1,036 ಹುದ್ದೆಗಳ ನೇಮಕಾತಿ ಪ್ರಕಟಿಸಿದೆ. ಸ್ನಾತಕೋತ್ತರ ಶಿಕ್ಷಕರ ಮುಖ್ಯ ಕಾನೂನು ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಜೂನಿಯರ್ ಟ್ರಾನ್ಸ್‌ಲೇಟರ್ (ಹಿಂದಿ) ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಇದರ ನೇಮಕಾತಿ ಪ್ರಕ್ರಿಯೆ 2025 ರ ಜನವರಿ 7ರಿಂದ ಶುರುವಾಗಲಿದೆ. ಅಧಿಸೂಚನೆ ಶೀಘ್ರದಲ್ಲೇ ಬಿಡುಗಡೆಗೊಳ್ಳಲಿದೆ.
ರೈಲ್ವೆ ಇಲಾಖೆ, ಆರ್‌ಆರ್‌ಬಿ ನೇಮಕಾತಿಗೆ ಸಂಬಂಧಿಸಿದ ಉದ್ಯೋಗ ಮಾಹಿತಿಗೆ ನೀವು ಕೂಡಲೇ ಅಧಿಕೃತ ವೆಬ್‌ಸೈಟ್‌ಗೆ https://www.rrbcdg.gov.in/ ಭೇಟಿ ನೀಡಬೇಕು. ಸೂಕ್ತ ಮಾಹಿತಿ ತಿಳಿದು ಅರ್ಜಿ ಸಲ್ಲಿಸಬೇಕು..












Click it and Unblock the Notifications