ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರ್ಜಿ ಸಲ್ಲಿಸಿ: ಅಂಚೆ-ಕಚೇರಿಯಲ್ಲಿ ಕಾರು ಚಾಲಕರಿಗೆ 63,000 ಸಂಬಳ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 05: ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಸಿಬ್ಬಂದಿಯ ಕಾರು ಚಾಲಕರ ಒಂದು ಹುದ್ದೆಗೆ ಕೇಂದ್ರ ಸಂವಹನ ಸಚಿವಾಲಯವು ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗೆ ಆಯ್ಕೆಯಾದವರಿಗೆ ಎರಡನೇ ಶ್ರೇಣಿಯ ವೇತನವನ್ನು ನೀಡಲಾಗುತ್ತದೆ.

ಸಿಬ್ಬಂದಿಯ ಕಾರು ಚಾಲಕರ ಹುದ್ದೆಯು ಕೇಂದ್ರ ಸೇವೆಯಲ್ಲಿ ಸಾಮಾನ್ಯ ಹಾಗೂ ಗೆಜೆಟೆಡ್ ಅಲ್ಲದ, ಮಂತ್ರಿ-ಅಲ್ಲದ ಮತ್ತು ಗುಂಪು ಸಿ ಉದ್ಯೋಗ ಆಗಿರುತ್ತದೆ. ಭಾರತೀಯ ಅಂಚೆ ಇಲಾಖೆಯ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

DRDO Jobs: 1901 ಖಾಲಿ ಹುದ್ದೆ ನೇಮಕಕ್ಕೆ ಅಧಿಸೂಚನೆDRDO Jobs: 1901 ಖಾಲಿ ಹುದ್ದೆ ನೇಮಕಕ್ಕೆ ಅಧಿಸೂಚನೆ

ಕಳೆದ ಆಗಸ್ಟ್ 18, 2022ರಿಂದಲೇ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಮುಂದಿನ ಸೆಪ್ಟೆಂಬರ್ 26, 2022ರವರೆಗೂ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಏನೆಲ್ಲಾ ಅರ್ಹತೆಗಳನ್ನು ಹೊಂದಿರಬೇಕು?, ಶೈಕ್ಷಣಿಕ ಅರ್ಹತೆಗಳೇನು?, ವೇತನ ಶ್ರೇಣಿ ಹೇಗಿರಲಿದೆ ಎಂಬುದರ ಕುರಿತು ಮಾಹಿತಿಗಾಗಿ ಮುಂದೆ ಓದಿ.

ಕಾರು ಚಾಲಕ ಹುದ್ದೆಗೆ ಗರಿಷ್ಠ 63,000 ಸಂಬಳ

ಕಾರು ಚಾಲಕ ಹುದ್ದೆಗೆ ಗರಿಷ್ಠ 63,000 ಸಂಬಳ

ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಸಿಬ್ಬಂದಿಯ ಕಾರು ಚಾಲಕರ ಒಂದು ಹುದ್ದೆಗೆ ಭರ್ಜರಿ ವೇತನವನ್ನು ನೀಡಲಾಗುತ್ತದೆ. ಎರಡನೇ ಹಂತದ ಉದ್ಯೋಗಿಗೆ 19,900 ರಿಂದ 63200 ರೂಪಾಯಿವರೆಗೂ ವೇತನವನ್ನು ನಿಗದಿಪಡಿಸಲಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವುದಕ್ಕೆ 56 ವರ್ಷ ವಯಸ್ಸು ಮೀರಿರಬಾರದು. 56 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಅದಾಗ್ಯೂ, ಶೈಕ್ಷಣಿಕ ಮತ್ತು ಇತರೆ ಅರ್ಹತೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ಶೈಕ್ಷಣಿಕ ಮತ್ತು ಇತರೆ ಅರ್ಹತೆಗಳೇನು?

ಶೈಕ್ಷಣಿಕ ಮತ್ತು ಇತರೆ ಅರ್ಹತೆಗಳೇನು?

* ಮೋಟಾರು ಕಾರುಗಳಿಗೆ ಮಾನ್ಯ ಚಾಲನಾ ಪರವಾನಗಿಯನ್ನು ಹೊಂದಿರಬೇಕು

* ಮೋಟಾರು ಕಾರ್ಯವಿಧಾನದ ಜ್ಞಾನವಿರಬೇಕು

* ಕನಿಷ್ಠ 3 ವರ್ಷಗಳ ಕಾಲ ಮೋಟಾರ್ ಕಾರನ್ನು ಓಡಿಸಿದ ಅನುಭವ ಹೊಂದಿರಬೇಕು

* ಕನಿಷ್ಠ 10 ನೇ ತರಗತಿ ಉತ್ತೀರ್ಣರಾಗಿರಬೇಕು

* ಹೋಮ್ ಗಾರ್ಡ್ ಅಥವಾ ಸಿವಿಲ್ ಸ್ವಯಂಸೇವಕರಾಗಿ 3 ವರ್ಷಗಳ ಸೇವೆ ಸಲ್ಲಿಸಿರಬೇಕು ಎಂದು ಅಪೇಕ್ಷಿಸಲಾಗುತ್ತದೆ

ಈ ಹುದ್ದೆ ನೇಮಕಾತಿ ಪ್ರಕ್ರಿಯೆ ಹೇಗೆ?

ಈ ಹುದ್ದೆ ನೇಮಕಾತಿ ಪ್ರಕ್ರಿಯೆ ಹೇಗೆ?

ಮೋಟಾರು ಕಾರುಗಳನ್ನು ಓಡಿಸುವ ಸಾಮರ್ಥ್ಯವನ್ನು ನಿರ್ಣಯಿಸಲು ಚಾಲನಾ ಪರೀಕ್ಷೆಯ ಆಧಾರದ ಮೇಲೆ ಮೋಟಾರು ಕಾರುಗಳಿಗೆ ಮಾನ್ಯ ಚಾಲನಾ ಪರವಾನಗಿ ಹೊಂದಿರುವವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ನಿಯಮಿತ ಡೆಸ್ಪ್ಯಾಚ್ ರೈಡರ್ (ಗ್ರೂಪ್ ಸಿ) ಮತ್ತು ಗ್ರೂಪ್ ಸಿ ಉದ್ಯೋಗಿಗಳಿಂದ ಪೇ ಮ್ಯಾಟ್ರಿಕ್ಸ್ ಹುದ್ದೆಗಳ ವಿಭಾಗದಲ್ಲಿ ಅಂಥವರ ಮೋಟಾರು ಕಾರುಗಳ ಓಡಿಸುವ ಸಾಮರ್ಥ್ಯವನ್ನು ನಿರ್ಣಯಿಸುತ್ತಾರೆ. ಸಶಸ್ತ್ರ ಪಡೆಗಳ ಸಿಬ್ಬಂದಿ ನಿವೃತ್ತಿಯಿಂದಾಗಿ ಅಥವಾ ಒಂದು ವರ್ಷದ ಅವಧಿಯನ್ನು ಕಾಯ್ದಿರಿಸಲು ಅವಕಾಶವಿದೆ. ಈ ಹುದ್ದೆಗೆ ಸಂಬಂಧಿಸಿದ ಅಗತ್ಯ ಅನುಭವ ಮತ್ತು ಅರ್ಹತೆಗಳನ್ನು ನಿಗದಿಪಡಿಸುವುದನ್ನು ಸಹ ಇಲ್ಲಿ ಪರಿಗಣಿಸಲಾಗುವುದು.

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಸಲ್ಲಿಸುವುದು ಹೇಗೆ?

ಕೇಂದ್ರ ಸರ್ಕಾರದ ಹುದ್ದೆಗಳು ಮತ್ತು ಇತರ ಸಚಿವಾಲಯಗಳು ಅಥವಾ ಇಲಾಖೆಗಳ ಅರ್ಹ ಮತ್ತು ಆಸಕ್ತ ಅಧಿಕಾರಿಗಳ ವಿಳಾಸಕ್ಕೆ ನಿಗದಿತ ಪ್ರೊಫಾರ್ಮಾ (Annexure-II)ನಲ್ಲಿ ಅರ್ಜಿಯನ್ನು ಸಲ್ಲಿಸಬೇಕು. ಸೆಪ್ಟೆಂಬರ್ 26ರೊಳಗೆ ಅರ್ಜಿಯನ್ನು ಕಳುಹಿಸುವ ಮುನ್ನ ಜಾಗರೂಕತೆಯನ್ನು ವಹಿಸಬೇಕು. ಅರ್ಜಿದಾರರು ತಾವು ಸಲ್ಲಿಸಬೇಕಾದ ದಾಖಲೆಗಳು ಸರಿಯಾಗಿವೆಯೇ ಎಂಬ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಏಕೆಂದರೆ ಕೊನೆಯ ದಿನಾಂಕದ ನಂತರ ಸ್ವೀಕರಿಸಿದ ಅರ್ಜಿಯನ್ನು ಅಥವಾ ಯಾವುದೇ ವಿಷಯದಲ್ಲಿ ಅಪೂರ್ಣವಾದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

English summary
Indian Post Office Recruitment 2022 for car drivers: Know about Salary, Eligibility, Qualification and other details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X