ಶಿವಮೊಗ್ಗ : ಜು. 17 ರಿಂದ 22ರ ತನಕ ವಾಯುಪಡೆ ನೇಮಕಾತಿ
ಶಿವಮೊಗ್ಗ, ಜೂನ್ 16 : ಭಾರತೀಯ ವಾಯುಪಡೆಯಲ್ಲಿ ಖಾಲಿಯಿರುವ ಗ್ರೂಪ್ 'ವೈ' ಹುದ್ದೆಗಳ ನೇಮಕಾತಿ ಶಿವಮೊಗ್ಗದಲ್ಲಿ ನಡೆಯಲಿದೆ. ಜುಲೈ 17 ರಿಂದ 22ರ ತನಕ ಶಿವಮೊಗ್ಗದ ನೆಹರು ಸ್ಟೇಡಿಯಂನಲ್ಲಿ ನೇಮಕಾತಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಗ್ರೂಪ್ 'ವೈ' ಹುದ್ದೆಗಳ (ಮೆಡ್ ಅಸಿಸ್ಟೆಂಟ್, ಐಎಎಫ್/ಪಿ ಮತ್ತು ಆಟೋ ಟೆಕ್ ಟ್ರೇಡ್ಸ್) ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ನಡೆಯಲಿದೆ. ಆಸಕ್ತರು ನೇಮಕಾತಿಯಲ್ಲಿ ಪಾಲ್ಗೊಳ್ಳಬಹುದು.
ಪಿಯುಸಿ ಅಥವಾ 12ನೇ ತರಗತಿಗೆ ಸಮನಾಂತರವಾದ ಶಿಕ್ಷಣದಲ್ಲಿ ಶೇಕಡ 50% ಅಂಕಗಳನ್ನು ಪಡೆದು ತೇರ್ಗಡೆ ಹೊಂದಿದ ಅಭ್ಯರ್ಥಿಗಳು ನೇಮಕಾತಿಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಇಂಗ್ಲೀಷ್ ವಿಷಯದಲ್ಲಿ ಶೇಕಡಾ 50% ಅಂಕಗಳನ್ನು ಪಡೆದು ತೇರ್ಗಡೆ ಹೊಂದಿರಬೇಕು.

ಅಭ್ಯರ್ಥಿಗಳು 19/07/1999 ಮತ್ತು 01/07/2003 ರ ಅವಧಿಯಲ್ಲಿ ಜನಿಸಿರಬೇಕು. ಎತ್ತರ ಕನಿಷ್ಟ 152.5 ಸೆ.ಮಿ (ಮೆಡ್ ಅಸಿಸ್ಟೆಂಟ್) 175 ಸೆ.ಮೀ (ಐಎಎಫ್/ಪಿ ಮತ್ತು ಆಟೋ ಟೆಕ್ ಟ್ರೇಡ್ಸ್) ಹೊಂದಿರಬೇಕು. ಯಾವುದೇ ಅರ್ಜಿಯನ್ನು ಸಲ್ಲಿಸುವ ಅಗತ್ಯ ಇರುವುದಿಲ್ಲ.
ನೇಮಕಾತಿಯ ದಿನ ತಮ್ಮ ಪ್ರಮಾಣ ಪತ್ರದ 4 ಸೆಟ್ ಜೆರಾಕ್ಸ್ ಪ್ರತಿಗಳನ್ನು ಹಾಗೂ 30 ಪಾಸ್‍ಪೋರ್ಟ್ ಸೈಜಿನ ಪೋಟೋಗಳನ್ನು ಹಾಗೂ ಹೆಚ್.ಬಿ ಪೆನ್ಸಿಲ್, ಪೆನ್, ಅಳಿಸುವ ರಬ್ಬರು, ಆಧಾರ್ ಕಾರ್ಡ್ (ಇದ್ದಲ್ಲಿ) ನೊಂದಿಗೆ ಎರಡು ಸ್ವವಿಳಾಸವಿರುವ 24x10 ಸೆ.ಮೀ ಅಳತೆಯ ಕವರ್ ಗಳನ್ನು ತೆಗೆದುಕೊಂಡು ಬರಬೇಕು.
ಹೆಚ್ಚಿನ ಮಾಹಿತಿಗಾಗಿ ದೂರವಾಣೆ ಸಂಖ್ಯೆ 080-25592199 ನ್ನು ಸಂಪರ್ಕಿಸಲು ಕೋರಲಾಗಿದೆ. ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಸನ ಇವರನ್ನು ಖುದ್ದಾಗಿ ಭೇಟಿ ಮಾಡಬಹುದು.












Click it and Unblock the Notifications