ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1095 ಹುದ್ದೆಗೆ ಅರ್ಜಿ ಕರೆದ ಐಜಿಐ ಏವಿಯೇಷನ್

|
Google Oneindia Kannada News

ನವದೆಹಲಿ, ಮಾರ್ಚ್ 07; ದೇಶಾದ್ಯಂತ ಸೇವೆ ನೀಡುತ್ತಿರುವ ನವದೆಹಲಿ ಮೂಲದ ಐಜಿಐ ಏವಿಯೇಷನ್ ಸರ್ವೀಸಸ್‌ ವಿವಿಧ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮಾರ್ಚ್ 31ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಒಟ್ಟು 1095 ಏರ್ ಪೋರ್ಟ್ ಸ್ಟಾಫ್‌ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 18 ರಿಂದ 30 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ.

ಎನ್‌ಎಚ್‌ಎಐ ನೇಮಕಾತಿ; 15 ಜನರಲ್ ಮ್ಯಾನೇಜರ್‌ ಹುದ್ದೆಗೆ ಅರ್ಜಿ ಹಾಕಿ ಎನ್‌ಎಚ್‌ಎಐ ನೇಮಕಾತಿ; 15 ಜನರಲ್ ಮ್ಯಾನೇಜರ್‌ ಹುದ್ದೆಗೆ ಅರ್ಜಿ ಹಾಕಿ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10+2 ಮತ್ತು ಇತರ ಉನ್ನತ ವಿದ್ಯಾಭ್ಯಾಸವನ್ನು ಪಡೆದಿರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ 15,000-25,000 ರೂ. ತನಕ ವೇತನ ನಿಗದಿ ಮಾಡಲಾಗಿದೆ.

ಐಡ್ಲ್ಯುಎಸ್‌ಟಿ ನೇಮಕಾತಿ; ಫಾರೆಸ್ಟ್‌ ಗಾರ್ಡ್‌ ಹುದ್ದೆಗಳು ಐಡ್ಲ್ಯುಎಸ್‌ಟಿ ನೇಮಕಾತಿ; ಫಾರೆಸ್ಟ್‌ ಗಾರ್ಡ್‌ ಹುದ್ದೆಗಳು

IGI Aviation Services Invited Applications For Airport Ground Staff Post

ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಯಾವುದೇ ಅನುಭವ ಇಲ್ಲದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ವಿಮಾನಯಾನ, ಏರ್‌ಲೈನ್ಸ್‌ನ ಯಾವುದೇ ಕೋರ್ಸ್‌, ಡಿಪ್ಲೊಮಾ ಪ್ರವೇಶ ಪತ್ರವನ್ನು ಹೊಂದಿರಬೇಕಾದ ಅಗತ್ಯವಿಲ್ಲ.

14 ಜಿಲ್ಲೆಗಳಲ್ಲಿ ಗ್ರಾಮ ಲೆಕ್ಕಿಗರ ನೇಮಕಾತಿ; ಆರ್. ಅಶೋಕ 14 ಜಿಲ್ಲೆಗಳಲ್ಲಿ ಗ್ರಾಮ ಲೆಕ್ಕಿಗರ ನೇಮಕಾತಿ; ಆರ್. ಅಶೋಕ

ಹುದ್ದೆಗಳ ವಿವರ, ವಿದ್ಯಾರ್ಹತೆ, ಪರೀಕ್ಷೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ ಮುಂತಾದ ಮಾಹಿತಿಗಾಗಿ www.igiaviationdelhi.com. ವೆಬ್ ಸೈಟ್‌ಗೆ ಭೇಟಿ ನೀಡಬಹುದಾಗಿದೆ.

ಮಡಿಕೇರಿಯಲ್ಲಿ ಕೆಲಸ ಖಾಲಿ ಇದೆ; ಸೋಮವಾರಪೇಟೆ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ/ ಸಹಾಯಕಿಯರ ಹುದ್ದೆಯನ್ನು ಭರ್ತಿ ಮಾಡಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ದಂಡಿನಪೇಟೆ-1, ಹಾದ್ರೆ ಹೆರೂರು (ಮಿನಿ), ಚೌಡ್ಲು (ಮಿನಿ), ಅಂಗನವಾಡಿ ಸಹಾಯಕಿಯರ ಹುದ್ದೆಗೆ ಇತರೆ ವರ್ಗದ ಅಭ್ಯರ್ಥಿಯಿಂದ ಯಡವಾರೆ, ಮಾದಾಪುರ-ಎ, ಅಬ್ಬೂರುಕಟ್ಟೆ, ಶಿರಂಗಾಲ-3, ಶಾಂತಳ್ಳಿ, ಯಡವನಾಡು, ಅಂಗನವಾಡಿ ಕೇಂದ್ರದಲ್ಲಿ ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಂದ ಮತ್ತು ಲಕ್ಕೇರಿ ಪೈಸಾರಿ ಚಿಕ್ಕಭಂಡಾರ ಅಂಗನವಾಡಿ ಕೇಂದ್ರದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ.

ಅಭ್ಯರ್ಥಿಗಳು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಕು. ಅರ್ಜಿ ಸಲ್ಲಿಸಲು ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಎಸ್ಎಸ್‌ಎಲ್‌ಸಿ ಉತ್ತೀರ್ಣರಾಗಿರಬೇಕು ಮತ್ತು ಅಂಗನವಾಡಿ ಸಹಾಯಕಿ ಹುದ್ದೆಗೆ 4 ರಿಂದ 9ನೇ ತರಗತಿಯೊಳಗೆ ವ್ಯಾಸಂಗ ಮಾಡಿರಬೇಕು.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 18 ರಿಂದ 35 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ. ಮತ್ತು ವಿಕಲಚೇತನ ಮಹಿಳೆಯರಿಗೆ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಮಾತ್ರ 10 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ ಹಾಗೂ ಅಂಗನವಾಡಿ ಕೇಂದ್ರಕ್ಕೆ ಒಳಪಟ್ಟ ಗ್ರಾಮ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು www.anganwadirecruit.kar.nic.in ವೆಬ್‌ಸೈಟ್‌ ಮೂಲಕ ಅರ್ಜಿ ಸಲ್ಲಿಸಬೇಕು.ಅರ್ಜಿ ಸಲ್ಲಿಸಲು ಮಾರ್ಚ್ 29ರ ತನಕ ಅವಕಾಶವಿದೆ. ಆನ್‌ಲೈನ್ ಹೊರತುಪಡಿಸಿ ಬೇರೆ ಯಾವುದೇ ರೂಪದ ಅರ್ಜಿಗಳನ್ನು ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸೋಮವಾರಪೇಟೆ ಶಿಶು ಅಭಿವೃದ್ಧಿ ಯೋಜನಾ ಕಚೇರಿ ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ. ದೂರವಾಣಿ ಸಂಖ್ಯೆಗಳು 08276-282281.

ಮಾರ್ಚ್ 17ರಂದು ನೇರ ಸಂದರ್ಶನ; ಶಿವಮೊಗ್ಗ ಜಿಲ್ಲೆಯ ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ವೈದ್ಯಕೀಯ ಆಮ್ಲಜನಕ ವ್ಯವಸ್ಥೆಯ ಉನ್ನತೀಕರಣವಾಗಿದ್ದು, ಈ ಸೌಲಭ್ಯದ ವ್ಯವಸ್ಥಿತ ನಿರ್ವಹಣೆ ಮತ್ತು ಮೇಲ್ವಿಚಾರಣೆಗಾಗಿ ತಂತ್ರಜ್ಞರ ಹುದ್ದೆಗೆ ನೇರ ಸಂದರ್ಶನವನ್ನು ಆಯೋಜನೆ ಮಾಡಲಾಗಿದೆ.

ಗುತ್ತಿಗೆ ಆಧಾರದ ಮೇರೆಗೆ ನೇಮಕಾತಿ ನಡೆಯುತ್ತಿದೆ. ಅರ್ಹ ಅಭ್ಯರ್ಥಿಗಳು ಮಾರ್ಚ್ 17ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯ ತನಕ ನಡೆಯಲಿರುವ ನೇರ ಸಂದರ್ಶನಕ್ಕೆ ಸಾಗರದ ಆಡಳಿತ ವೈದ್ಯಾಧಿಕಾರಿಗಳ ಕಚೇರಿಯಲ್ಲಿ ಹಾಜರಾಗಬಹುದಾಗಿದೆ.

Recommended Video

ಯುದ್ಧದ ಭಯದ ನಡುವೆಯೂ ಉಕ್ರೇನ್ ನಲ್ಲಿ ಪಿಯಾನೋ ನುಡಿಸಿ ಎಲ್ಲರ ಮನಗೆದ್ದ ಮಹಿಳೆ | Oneindia Kannada

ಆಸಕ್ತರು ತಮ್ಮ ವಿದ್ಯಾರ್ಹತೆ ಮೂಲ ದಾಖಲಾತಿಗಳು ಮತ್ತು ಪ್ರಮಾಣ ಪತ್ರಗಳೊಂದಿಗೆ ಹಾಗೂ ಒಂದು ಸೆಟ್ ದೃಡೀಕೃತ ಜೆರಾಕ್ಸ್ ಪ್ರತಿಯೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

English summary
New Delhi based IGI aviation services invited applications for 1095 post. Candidates can submit applications till March 31.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X