IBM Job Cut: ಐಬಿಎಂ 8,000 ಉದ್ಯೋಗಿಗಳ ವಜಾ
IBM Layoffs: ಅಮೆರಿಕ ಮೂಲದ ತಂತ್ರಜ್ಞಾನ ದೈತ್ಯ ಸಂಸ್ಥೆಯಾಗಿರುವ ಐಬಿಎಂ (IBM Layoffs) ಕಂಪನಿಯು ತನ್ನಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 8,000 ನೌಕರರನ್ನು ಉದ್ಯೋಗದಿಂದ ವಜಾಗೊಳಿಸಿದೆ. ಆರ್ಟಿಫಿಸಿಯಲ್ ಇಂಟಲಿಜೆನ್ಸ್ (AI) ತಂತ್ರಜ್ಞಾನವನ್ನು ಕಚೇರಿ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದೆ. ಹೀಗಾಗಿ ಸಾವಿರಾರು ನೌಕರರು ಕೆಲಸ ಕಳೆದುಕೊಂಡಿದ್ದಾರೆ ಎಂದು ವರದಿ ಆಗಿದೆ.
ಐಬಿಎಂನ ತೆಗೆದು ಹಾಕಿದ ಈ 8,000 ಉದ್ಯೋಗಿಗಳಲ್ಲಿ ಬಹುತೇಕ ಮಂದಿ ಮಾನವ ಸಂಪನ್ಮೂಲ (ಎಚ್‌ಆರ್) ವಿಭಾಗದಲ್ಲಿ ಕೆಲಸ ಮಾಡಿದವರೇ ಆಗಿದ್ದಾರೆ. ಬ್ಯಾಕ್-ಆಫೀಸ್ ವ್ಯವಸ್ಥೆಯಲ್ಲಿ ಸಂಸ್ಥೆಯು ಕೃತಕ ಬುದ್ಧಿಮತ್ತೆ (AI) ಎಂಬ ಅತ್ಯಾಧುನಿಕ ತಂತ್ರಜ್ಞಾನ ಸಂಯೋಜಿಸಿದೆ. ಇದರ ಭಾಗವಾಗಿಯೇ ಇಷ್ಟು ಪ್ರಮಾಣದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಿದೆ.

ಇದೇ ಮೇ ತಿಂಗಳ ಆರಂಭದಲ್ಲಿ ಐಬಿಎಂ ಕಂಪನಿಯು ಮಾನವ ಸಂಪನ್ಮೂಲ ವಿಭಾಗದ 200 ಉದ್ಯೋಗಿಗಳಿಗೆ ಉದ್ಯೋಗ ವಜಾ ಕುರಿತು ಪ್ರತಿಕ್ರಿಯಿಸಿತ್ತು ಎನ್ನಲಾಗಿದೆ. ಈ ವೇಳೆ ಅವರ ಕೆಲಸಗಳಾದ ದಾಖಲೆ ಮತ್ತು ಮಾನವ ಸಂಪನ್ಮೂಲ ದತ್ತಾಂಶವನ್ನು ಸಂಘಟಿಸುವಂತಹ ಹಾಗೂ ಪುನರಾವರ್ತಿತ ಕಾರ್ಯ ಮಾಡುವ ಎಐ ತಂತ್ರಜ್ಞಾನವನ್ನು ಸಂಯೋಜಿಸಿಕೊಂಡಿತು.
ಇಡೀ ಎಚ್‌ಆರ್ ವಿಭಾಗವೇ ಕೃತಕ ಬುದ್ಧಿಮತ್ತೆ ರೂಪದಲ್ಲಿ ಬದಲಾಯಿತು. ಅಲ್ಲಿ ಕೆಲಕ್ಕಿದ್ದವರು ಮನೆಗೆ ಕಳುಹಿಸಲಾಯಿತು. ಏಕೆಂದರೆ ಈ ಸಾಫ್ಟ್‌ವೇರ್-ಚಾಲಿತ ಎಐ ಹತ್ತಾರು ಜನರು ಮಾಡುವ ಕೆಲಸವನ್ನು ಮಾಡುತ್ತದೆ. ಮಾನವ ಮೇಲ್ವಿಚಾರಣೆಯಲ್ಲಿ ಕಾರ್ಯ ಮಾಡುತ್ತದೆ. ಅತೀ ಕಡಿಮೆ ವೆಚ್ಚದಲ್ಲಿ ದಕ್ಷತೆ ಇರುವ ತಂತ್ರಜ್ಞಾನ ವಿನ್ಯಾಸಗೊಳಿಸಲಾಗಿದೆ. ಅದರ ಲಾಭ ಕಂಪನಿ ಪಡೆದುಕೊಳ್ಳುತ್ತಿದ್ದಂತೆ ಸಾವಿರಾರು ನೌಕರರಿಗೆ ಗೇಟ್ ಪಾಸ್ ನೀಡಿದೆ.
ಉದ್ಯೋಗಿಗಳ ವಜಾದಿಂದ ಕಂಪನಿಯು ತನ್ನ ಕೆಲಸ ಕಾರ್ಯ ಹೇಗೆ ಮಾಡುತ್ತದೆ ಎಂಬದರ ಮೇಲೆ ಕುತೂಹಲವು ಹೆಚ್ಚಾಗಿದೆ. ಇದೆಲ್ಲವು ಕಂಪನಿಯು ನಿಯಮಿತ ಬದಲಾವಣೆಗಳಲ್ಲಿ ಒಂದು ಎಂದಿರುವ ಐಬಿಎಂ ಸಿಇಒ ಅರವಿಂದ್ ಕೃಷ್ಣ ಅವರು, ಯಾಂತ್ರೀಕೃತ ಜಗತ್ತಿನಲ್ಲಿ ಬದಲಾವಣೆಗೆ ಒಗ್ಗಿಕೊಳ್ಳಬೇಕಿದೆ. ಕೆಲಸದ ಹರಿವು ಸುಗಮಗೊಳಿಸಲು ಎಐ ಬಳಕೆ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಸಾಫ್ಟ್‌ವೇರ್ ಅಭಿವೃದ್ಧಿ, ಮಾರ್ಕೆಟಿಂಗ್ ಮತ್ತು ಮಾರಾಟದಂತಹ ಇತರ ಕಾರ್ಯಗಳಿಗೂ ಬಳಸಲಾಗುತ್ತಿದೆ. ಉದ್ಯಮ ವಿಭಾಗಗಳಲ್ಲಿ AI ಮತ್ತು ಇತರ ಯಂತ್ರೋಪಕರಣಗಳ ಬಳಕೆ ಆಗುತ್ತಿದ್ದರು ಸಹಿತ ದೊಡ್ಡ ಪ್ರಮಾಣದ ಉದ್ಯೋಗಿಗಳ ಸಂಖ್ಯೆಯನ್ನು ಐಬಿಎಂ ಹೊಂದಿದೆ. ನಮ್ಮ ಒಟ್ಟು ಉದ್ಯೋಗವು ವಾಸ್ತವವಾಗಿ ಹೆಚ್ಚಾಗಿದೆ. ಎಐ ಹೂಡಿಕೆ ಬಳಿಕ ಇತರ ವಲಯಗಳ ಮೇಲೆ ಹೂಡಿಕೆ ಹೆಚ್ಚಾಗುವ ಸಾಧ್ಯತೆ ಇದೆ ಎಂದರು.












Click it and Unblock the Notifications