ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಾ.ಗಂಗೂಬಾಯಿ ಹಾನಗಲ್ ವಿವಿಯಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

|
Google Oneindia Kannada News

ಮಡಿಕೇರಿ, ನ.15: ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿನ ವಿವಿಧ ಕೋರ್ಸ್‍ಗಳಿಗೆ ಅತಿಥಿ ಉಪನ್ಯಾಸಕರಾಗಲು ಬಯಸುವವರಿಂದ ಅರ್ಜಿ ಆಹ್ವಾನಿಸಲಾಗಿದೆ

ಪ್ರದರ್ಶಕ ಕಲೆಯಲ್ಲಿ ಸ್ನಾತಕೋತ್ತರ, ಸ್ನಾತಕ ಪದವಿ, ಮಾಸ್ಟರ್ ಆಫ್ ಫರ್ಫಾರ್ಮಿಂಗ್ ಆಟ್ಸ್, ಸ್ನಾತಕೋತ್ತರ ಪದವಿ, ಡಿಪ್ಲೊಮೋ ವಿಭಾಗಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ದೂರದರ್ಶನ ಹಾಗೂ ಆಕಾಶವಾಣಿಯ ಸುದ್ದಿ ವಿಭಾಗದಲ್ಲಿ ಕೆಲಸ ಖಾಲಿ ಇದೆದೂರದರ್ಶನ ಹಾಗೂ ಆಕಾಶವಾಣಿಯ ಸುದ್ದಿ ವಿಭಾಗದಲ್ಲಿ ಕೆಲಸ ಖಾಲಿ ಇದೆ

ಯುಜಿಸಿ ನಿಯಮಾವಳಿಗಳ ಅನ್ವಯ ಅರ್ಹತೆ ಹೊಂದಿರುವವರು, ನೃತ್ಯ, ಸಂಗೀತ ಮತ್ತು ನಾಟಕ ವಿಷಯಕ್ಕೆ ಸಂಬಂಧಿಸಿದಂತೆ ನೆಟ್/ಕೆ-ಸೆಟ್ ಉತ್ತೀರ್ಣರಾಗಿರುವವರು ಅಥವಾ ಕೋರ್ಸ್ ವರ್ಕ್ ಜೊತೆಗೆ ಪಿಎಚ್‍ಡಿ., ಪದವಿ ಪಡೆದಿರುವವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

Guest Lecturer recruitment: Apply for post at Dr. Gangubai Hanagal University in Mysuru

ವಿಶ್ವವಿದ್ಯಾನಿಲಯದ ನಿಯಮಾನುಸಾರ ವೇತನ ನೀಡಲಾಗುವುದು. ಅಧಿಸೂಚನೆಯ ದಿನಾಂಕದಿಂದ 10 ದಿನಗಳೊಳಗಾಗಿ ಅರ್ಜಿ ಸಲ್ಲಿಸಬೇಕು. ಈ ಸಂಬಂಧ ಹೆಚ್ಚಿನ ವಿವರಗಳನ್ನು ನಮ್ಮ ವಿಶ್ವವಿದ್ಯಾಲಯದ ಅಧೀಕೃತ ಜಾಲತಾಣ https://musicuniversity.ac.in/ ದಿಂದ ಪಡೆಯಬಹುದು.

ಅರ್ಜಿ ಶುಲ್ಕ:

ಅರ್ಜಿ ಫಾರಂ ಹಾಗೂ ಇನ್ನಿತರ ವಿವರಗಳನ್ನು ವಿಶ್ವವಿದ್ಯಾಲಯದ ವೆಬ್‍ಸೈಟ್ ಮೂಲಕ ಡೌನ್‍ಲೋಡ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ. ಭರ್ತಿ ಮಾಡಿದ ಅರ್ಜಿಗಳೊಂದಿಗೆ ಸಾಮಾನ್ಯ ವರ್ಗ ರೂ.500 ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 (ಪ್ರಮಾಣ ಪತ್ರದೊಂದಿಗೆ) ಅಭ್ಯರ್ಥಿಗಳು ರೂ.250 ಗಳನ್ನು ಡಿಡಿ ಮಾಡಿಸಿ ಸಲ್ಲಿಸಬೇಕು.

ವಿಶ್ವವಿದ್ಯಾಲಯವು ಮೈಸೂರಿನ ಕೃಷ್ಣಮೂರ್ತಿಪುರಂ ಶಾಖೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಹಣಕಾಸು ಅಧಿಕಾರಿ ಇವರ ಹೆಸರಿನಲ್ಲಿ ಹೊಂದಿರುವ ಉಳಿತಾಯ ಖಾತೆ ಸಂಖ್ಯೆ: 64097891316 (ಐಎಫ್ಎಸ್‌ಸಿ ಕೋಡ್: SBIN0040056) ಕ್ಕೆ ಚಲನ್ ಮೂಲಕ ಅಥವಾ ಯಾವುದೇ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಹಣಕಾಸು ಅಧಿಕಾರಿಗಳು, ಕೆಎಸ್‍ಜಿಎಚ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ, ಮೈಸೂರು ಇವರ ಹೆಸರಿನಲ್ಲಿ ಮೇಲಿನ ಬ್ಯಾಂಕ್‌ ಖಾತೆಗೆ ಸಂದಾಯವಾಗುವಂತೆ ಡಿಡಿಯನ್ನು ಪಡೆದು ಲಗತ್ತಿಸಬಹುದು.

ಅಭ್ಯರ್ಥಿಗಳು ತಮ್ಮ ಎಲ್ಲಾ ಶೈಕ್ಷಣಿಕ ಅರ್ಹತೆ, ಅನುಭವದ ವಿವರಗಳು ಮತ್ತು ದೃಢೀಕೃತ ದಾಖಲೆಗಳೊಂದಿಗೆ ನಿಗದಿತ ಅವಧಿಯೊಳಗೆ ಈ ಕೆಳಕಂಡ ವಿಳಾಸಕ್ಕೆ ಸಲ್ಲಿಸಬಹುದು:
ಕುಲಸಚಿವರು,

ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ,

ಮೈಸೂರು 570004

ಎಂದು ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಸಚಿವರು ತಿಳಿಸಿದ್ದಾರೆ.

English summary
Dr. Gangubai Hanagal music University has vacancies for Guest Lecturer, apply now. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X