Government Jobs: 1000 ಗ್ರಾಮ ಲೆಕ್ಕಿಗರ ನೇಮಕಕ್ಕೆ ಅಧಿಸೂಚನೆ, ಯಾವ ಜಿಲ್ಲೆಯಲ್ಲಿ ಎಷ್ಟು ಪೋಸ್ಟ್?
ಬೆಂಗಳೂರು, ಫೆಬ್ರವರಿ.22: ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳ ನೇಮಕಾತಿಗೆ ಅರ್ಹತೆ ಪಡೆಯಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಬೇಕು.
ಖಾಸಗಿ ಕಂಪನಿಗಳು ಎಷ್ಟು ಸಂಬಳ ಕೊಟ್ಟರೂ ಸರ್ಕಾರಿ ಉದ್ಯೋಗಿ ಆಗಬೇಖು ಎಂದು ಕನಸು ಕಾಣುವ ಸಾವಿರ ಮಂದಿ ಉದ್ಯೋಗಾಕಾಂಕ್ಷಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿಈ ಅವಕಾಶವನ್ನು ಬಳಸಿಕೊಳ್ಳಬಹುದು. ಒಟ್ಟು 1000 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ.

ಈ ಹಿಂದೆ ಅಧಿವೇಶನದಲ್ಲಿ ನೇಮಕಾತಿ ಬಗ್ಗೆ ಕಂದಾಯ ಸಚಿವ ಕೃಷ್ಣ ಭೈರೆಗೌಡ ಮಾಹಿತಿ ನೀಡಿದ್ದರು. "ಬೇರೆ ಇಲಾಖೆಗಳಿಗೆ ಹೋಲಿಸಿದರೆ ಕಂದಾಯ ಇಲಾಖೆಯಲ್ಲಿ ನೌಕರರ ಸಂಖ್ಯೆ ಅಧಿಕವಿದೆ. ಅಲ್ಲದೆ, ಸಾರ್ವಜನಿಕರಿಗೆ ಶೀಘ್ರ ಸೇವೆ ನೀಡುವ ಉದ್ದೇಶಿದಿಂದ ಶೀಘ್ರದಲ್ಲೇ 1000 ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿಗೆ ಹಸಿರು ನಿಶಾನೆ ಕೊಟ್ಟಿದ್ದಾರೆ" ಎಂದು ಮಾಹಿತಿ ನೀಡಿದ್ದರು.
ಕರ್ನಾಟಕ ಕಂದಾಯ ಇಲಾಖೆ ಹುದ್ದೆಯ ಅಧಿಸೂಚನೆ
ಸಂಸ್ಥೆಯ ಹೆಸರು: ಕರ್ನಾಟಕ ಕಂದಾಯ ಇಲಾಖೆ
ಹುದ್ದೆಗಳ ಸಂಖ್ಯೆ: 1000
ಉದ್ಯೋಗ ಸ್ಥಳ: ಕರ್ನಾಟಕ
ಹುದ್ದೆಯ ಹೆಸರು: ಗ್ರಾಮ ಲೆಕ್ಕಾಧಿಕಾರಿ (ವಿಎ)
ವೇತನ: ಕರ್ನಾಟಕ ಕಂದಾಯ ಇಲಾಖೆಯ ನಿಯಮಗಳ ಪ್ರಕಾರ
ಯಾವ ಜಿಲ್ಲೆಯಲ್ಲಿ ಎಷ್ಟು ಪೋಸ್ಟ್ ?
ಬೆಂಗಳೂರು ನಗರ- 32
ಬೆಂಗಳೂರು ಗ್ರಾಮಾಂತರ - 34
ಚಿತ್ರದುರ್ಗ - 32
ಕೋಲಾರ - 45
ತುಮಕೂರು - 73
ರಾಮನಗರ - 51
ಚಿಕ್ಕಬಳ್ಳಾಪುರ - 42
ಶಿವಮೊಗ್ಗ - 31
ಮೈಸೂರು - 66
ಚಾಮರಾಜನಗರ - 55
ಮಂಡ್ಯ - 60
ಹಾಸನ - 54
ಚಿಕ್ಕಮಗಳೂರು - 23
ಕೊಡಗು - 6
ಉಡುಪಿ - 22
ದಕ್ಷಿಣ ಕನ್ನಡ - 50
ಬೆಳಗಾವಿ - 64
ವಿಜಯಪುರ - 7
ಬಾಗಲಕೋಟೆ - 22
ಧಾರವಾಡ - 12
ಗದಗ - 30
ಹಾವೇರಿ - 34
ಉತ್ತರ ಕನ್ನಡ - 2
ಕಲಬುರಗಿ - 67
ರಾಯಚೂರು- 4
ಕೊಪ್ಪಳ - 19
ಬಳ್ಳಾರಿ - 17
ಬೀದರ್ - 24
ಯಾದಗಿರಿ - 9
ವಿಜಯನಗರ -3

ವಿದ್ಯಾರ್ಹತೆ
ಗ್ರಾಮ ಆಡಳಿತ ಅಧಿಕಾರಿ : ದ್ವಿತೀಯ ಪಿಯುಸಿ ಅಥವಾ ತತ್ಸಮಾನ
* ಸಿಬಿಎಸ್‌ಸಿ ಮತ್ತು ಐಸಿಎಸ್‌ಸಿ ಮಂಡಳಿಯು ನಡೆಸುವ ಕ್ಲಾಸ್ 12 ಪರೀಕ್ಷೆ
*ಇತರೆ ರಾಜ್ಯ ಸರ್ಕಾರದ ಪರೀಕ್ಷಾ ಮಂಡಳಿಗಳಿಂದ ನಡೆಸುವ ಕ್ಲಾಸ್ 12 ಪರೀಕ್ಷೆ.
* ಮೂರು ವರ್ಷಗಳ ಡಿಪ್ಲೋಮಾ ಅಥವಾ ಎರಡು ವರ್ಷಗಳ ಐಟಿಐ ಕೋರ್ಸ್ ಅಥವಾ ಎರಡು ವರ್ಷಗಳ ವೃತ್ತಿ ಶಿಕ್ಷಣ ಡಿಪ್ಲೋಮಾ (ಜೆ.ಓ.ಸಿ/ಜೆ.ಓ.ಡಿ.ಸಿ/ಜೆ.ಎಲ್.ಡಿ.ಸಿ)
ವಯೋಮಿತಿ
*ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ ಒಂದಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 40 ವರ್ಷಗಳು
* 2ಎ, 2ಬಿ, 3ಎ, 3ಬಿ ವರ್ಗಗಳಿಗೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 38 ವರ್ಷಗಳು
* ಸಾಮಾನ್ಯ ವರ್ಗಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷಗಳು












Click it and Unblock the Notifications