ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಿ ಉದ್ಯೋಗದ ಪೂರ್ಣ ಮಾಹಿತಿ ಇಲ್ಲಿ ಲಭ್ಯ

|
Google Oneindia Kannada News

ಬೆಂಗಳೂರು, ಆಗಸ್ಟ್ 6 : ಪ್ರತಿವರ್ಷ ವಿದ್ಯಾಭ್ಯಾಸ ಮುಗಿಸಿ ಕಾಲೇಜಿನಿಂದ ಹೊರಗೆ ಕಾಲಿಡುವ ಕೋಟ್ಯಾಂತರ ವಿದ್ಯಾರ್ಥಿಗಳು ಉದ್ಯೋಗ ಎಲ್ಲಿ ಸಿಗುತ್ತದೆ? ಎಂದು ಹುಡುಕಾಟ ಆರಂಭಿಸುತ್ತಾರೆ. ಖಾಸಗಿ ಕಂಪನಿಗಳು ಕಾಲೇಜಿಗೆ ಹೋಗಿ ಕೆಲವರನ್ನು ನೇಮಕ ಮಾಡಿಕೊಳ್ಳುತ್ತವೆ. ಆದರೆ, ಸರ್ಕಾರಿ ಉದ್ಯೋಗ ಪಡೆಯುವುದು ಹೇಗೆ?, ಉದ್ಯೋಗದ ಮಾಹಿತಿ ಎಲ್ಲಿ ಸಿಗುತ್ತದೆ ಎನ್ನುವುದು ದೊಡ್ಡ ಪ್ರಶ್ನೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಆದೇಶಗಳು ಪ್ರಕಟಗೊಳ್ಳುತ್ತಿರುತ್ತವೆ. ಅವುಗಳನ್ನು ಕಷ್ಟಪಟ್ಟು ಹುಡುಕಿ, ಅರ್ಜಿ ಸಲ್ಲಿಸಿ ಉದ್ಯೋಗ ಪಡೆಯುವುದು ದೊಡ್ಡ ಸಾಹಸದ ಕೆಲಸವಾಗಿದೆ. [ಫೇಸ್ ಬುಕ್ ವಿಳಾಸ]

jobs

ಕೈ ತುಂಬಾ ಸಂಬಳ ಕೊಡುವ ಖಾಸಗಿ ಕಂಪನಿಗಳು ಉದ್ಯಮದಲ್ಲಿ ನಷ್ಟ ಉಂಟಾಗುತ್ತಿದೆ ಎಂದು ಉದ್ಯೋಗ ಕಡಿತಗೊಳಿಸುವುದು ಸಾಮಾನ್ಯ. ಆದ್ದರಿಂದ, ಎಲ್ಲರ ಮೊದಲ ಆದ್ಯತೆ ಸರ್ಕಾರಿ ಉದ್ಯೋಗವಾಗಿರುತ್ತದೆ. ಕೇಂದ್ರ ಮತ್ತು ವಿವಿಧ ರಾಜ್ಯ ಸರ್ಕಾರಗಳು ಪ್ರಕಟಿಸುವ ಅಧಿಸೂಚನೆಗಳು ಸುಲಭವಾಗಿ ಲಭ್ಯವಾಗುವುದಿಲ್ಲ.

ಉದ್ಯೋಗದ ಮಾಹಿತಿ ಇಲ್ಲಿ ಲಭ್ಯ : ಪತ್ರಿಕೆ, ವೆಬ್‌ಸೈಟ್‌ಗಳು, ಸಾಮಾಜಿಕ ಜಾಲ ತಾಣಗಳು ಹೀಗೆ ವಿವಿಧ ಕಡೆ ಉದ್ಯೋಗದ ಮಾಹಿತಿಗಳು ಹರಿದಾಡುತ್ತಿರುತ್ತವೆ. ಒನ್ ಇಂಡಿಯಾ ಸಹ ಸರ್ಕಾರಿ ಉದ್ಯೋಗದ ಮಾಹಿತಿಗಳನ್ನು ವಿವರವಾಗಿ ಓದುಗರಿಗೆ ನೀಡುತ್ತಿದೆ. [ವೆಬ್ ಸೈಟ್ ವಿಳಾಸ]

ಕೇಂದ್ರ ಮತ್ತು ರಾಜ್ಯದ ಯಾವ ಇಲಾಖೆಯಲ್ಲಿ ಕೆಲಸ ಖಾಲಿ ಇದೆ, ಅರ್ಜಿ ಸಲ್ಲಿಸುವ ವಿಳಾಸ, ಅರ್ಹತೆ, ಕೊನೆಯ ದಿನಾಂಕ, ಅರ್ಜಿ ಶುಲ್ಕ ಹೀಗೆ ವಿವಿಧ ಮಾಹಿತಿಗಳು ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಸರ್ಕಾರ ಹೊರಡಿಸಿರುವ ನೇಮಕಾತಿ ಆದೇಶವನ್ನು ಜೊತೆಗೆ ನೀಡಲಾಗುತ್ತದೆ.

ಇಂದಿನ ದಿನಮಾನದಲ್ಲಿ ಎಲ್ಲಾ ಉದ್ಯೋಗಗಳಿಗೂ 'ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು' ಎಂಬ ಷರತ್ತು ವಿಧಿಸಲಾಗುತ್ತದೆ. ಇಂತಹ ಸಮಯದಲ್ಲಿ ಈ ವೆಬ್‌ಸೈಟ್ ಓದುಗರಿಗೆ ಎಲ್ಲಾ ಮಾಹಿತಿ ನೀಡಲಿದ್ದು, ಬೆರಳ ತುದಿಯಲ್ಲಿ ಉದ್ಯೋಗ ಮಾಹಿತಿ ಲಭ್ಯವಿರುತ್ತದೆ.

ಬಿಎಸ್ಎನ್‌ಎಲ್, ಅಂಚೆ ಇಲಾಖೆ, ಎಚ್‌ಎಎಲ್, ವಿವಿಧ ವಿಶ್ವವಿದ್ಯಾಲಯಗಳ ನೇಮಕಾತಿ, ವಿವಿಧ ರಾಜ್ಯಗಳು ಹೊರಡಿಸಿರುವ ನೇಮಕಾತಿ ಅಧಿಸೂಚನೆ ಹೀಗೆ ವಿವಿಧ ಸರ್ಕಾರಿ ಉದ್ಯೋಗ ಮಾಹಿತಿಗಳು ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ವೆಬ್‌ಸೈಟ್‌ಗೆ ಭೇಟಿ ನೀಡಿ ಮಾಹಿತಿ ಪಡೆಯಿರಿ.

English summary
Now find upcoming government vacancies and notification online by visiting http://bangalore.click.in website. Website will give full details about central and state government jobs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X