Govt Job Alert: ಕೋಟೆನಾಡಿನಲ್ಲಿ ಸರ್ಕಾರಿ ಕೆಲಸಕ್ಕಾಗಿ ಕೂಡಲೇ ಅರ್ಜಿ ಹಾಕಿ, ವಿವರ ನೋಡಿ

ಬೆಂಗಳೂರು, ಜಲೈ 02: ಸರ್ಕಾರಿ ಉದ್ಯೋಗ ಹುಡುಕುತ್ತಿರುವವರಿಗೆ ಕೋಟೆನಾಡು ಚಿತ್ರದುರ್ಗದ ಉದ್ಯೋಗವಕಾಶಗಳು ಇವೆ. ವೈದ್ಯಕೀಯ ರಂಗದ ಅಭ್ಯರ್ಥಿಗಳು ಚಿತ್ರದುರ್ಗ ಜಿಲ್ಲಾ ಸರ್ವೇಯರ್‌ಗಳ ಕಚೇರಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಚಿತ್ರದುರ್ಗ ಜಿಲ್ಲಾ ಸರ್ವೇಯರ್‌ಗಳ ಕಚೇರಿ ತನ್ನಲ್ಲಿ ಖಾಲಿ ಇರುವ ನರ್ಸ್​ಗಳು, ಸ್ಪೆಷಲಿಸ್ಟ್ ವೈದ್ಯರ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಇದೇ ತಿಂಗಳು ಜುಲೈ 17ರೊಳಗೆ ಆಸಕ್ತ ಅಭ್ಯರ್ಥಿಗಳು ಒಟ್ಟು 11 ಹುದ್ದೆಗಳಿಗೆ ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕು. ನೇಮಕಾತಿ ಹೇಗೆ ನಡೆಯಲಿದೆ, ಅರ್ಹತೆ, ವಯೋಮಿತಿ ಏನಿರಬೇಕು, ವೇತನ ಎಷ್ಟು ಎಂಬೆಲ್ಲ ಮಾಹಿತಿ ಇಲ್ಲಿ ತಿಳಿಯಬಹುದು.

Government Jobs: Chitradurga District Surveyor Office Invites Application For 11 Posts

ಹುದ್ದೆಗಳ ಪೂರ್ಣ ವಿವರ

ಒಟ್ಟು ಹುದ್ದೆ - 11

ಹುದ್ದೆ ಹೆಸರು - ನರ್ಸ್​ಗಳು, ಸ್ಪೆಷಲಿಸ್ಟ್ ವೈದ್ಯರು

ನರ್ಸ್​ಗಳು 8 ಹುದ್ದೆಗಳು

ತಜ್ಞ ವೈದ್ಯರು 2 ಹುದ್ದೆಗಳು

ಸಲಹೆಗಾರ ವೈದ್ಯ 1 ಹುದ್ದೆ

ಉದ್ಯೋಗ ಸ್ಥಳ ಚಿತ್ರದುರ್ಗ

ಮಾಸಿಕ ವೇತನ - 14000 ರೂ.ನಿಂದ 1,10,000 ರೂ.

ಅರ್ಜಿ ಸಲ್ಲಿಕೆ ಕೊನೆ ದಿನ - ಜುಲೈ 17

ಶೈಕ್ಷಣಿಕ ಅರ್ಹತೆ ಮಾಹಿತಿ

ಅಧಿಸೂಚನೆ ಪ್ರಕಾರ, ತಜ್ಞ ವೈದ್ಯರ ಹುದ್ದೆಗೆ ಅಭ್ಯರ್ಥಿಗಳು ಡಿಪ್ಲೊಮಾ, ಎಂಬಿಬಿಎಸ್, ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು. ಜೊತೆಗೆ ಅವರಿಗೆ ಒಂದು ವರ್ಷ ಕಾರ್ಯಾನುಭವ ಹೊಂದಿರಬೇಕು.

ನರ್ಸ್​ ಹುದ್ದೆಗಳಿಗೆ ಜಿಎನ್‌ಎಂ ಮಾಡಿರುವುದರ ಜೊತೆಗೆ ಒಂದು ವರ್ಷದ ಅನುಭವ ಇರಬೇಕು. ಇನ್ನೂ ಸಲಹೆಗಾರ ವೈದ್ಯರ ಹುದ್ದೆಗೆ ಎಂಬಿಬಿಎಸ್, ಎಂಡಿ ಕಡ್ಡಾಯವಾಗಿ ಮಾಡಿರಬೇಕು, ಅವರಿಗೆ ಮೂರು ವರ್ಷಗಳ ಕಾರ್ಯಾನುಭವ ಕಡ್ಡಾಯ ಎಂದು ತಿಳಿಸಲಾಗಿದೆ.

Government Jobs: Chitradurga District Surveyor Office Invites Application For 11 Posts

ವಯಸ್ಸಿನ ಮಿತಿ ಏನಿದೆ

ಅಧಿಸೂಚನೆಯ ಪ್ರಕಾರ, ನರ್ಸ್​, ತಜ್ಞ ವೈದ್ಯರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ಮೀರಿರಬಾರದು. ಇನ್ನು ಸಲಹೆಗಾರ ವೈದ್ಯರ ಹುದ್ದೆಗೆ ಅರ್ಜಿ ಸಲ್ಲಿಸಲಿರುವ ಆಸಕ್ತ ಅಭ್ಯರ್ಥಿಗಳಿಗೆ ವಯಸ್ಸು 50 ವರ್ಷ ಮೀರಿರಬಾರದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಮೆರಿಟ್ ಆಧಾರದಲ್ಲಿ ಪಟ್ಟಿ ಸಿದ್ಧಪಡಿಸಿ ಅವರಿಗೆ ನೇರ ಸಂದರ್ಶನ ನಡೆಯಲಿದೆ.

ಅರ್ಜಿ ಸಲ್ಲಿಕೆ ವಿಳಾಸ

ಅರ್ಜಿ ಕಳುಹಿಸಬೇಕಾದ ವಿಳಾಸ ಜಿಲ್ಲಾ ಸರ್ವೇಯರ್‌ಗಳ ಕಚೇರಿ, ಜಿಲ್ಲಾ ಪ್ರಯೋಗಾಲಯ ಆವರಣ, ಜಿಲ್ಲಾ ಆಸ್ಪತ್ರೆಯ ಹಿಂಭಾಗ, ಚಿತ್ರದುರ್ಗ - 577501 ಇಲ್ಲಿಗೆ ಆಫ್‌ಲೈನ್ ಮೂಲಕ ಅರ್ಜಿ ಕಳುಹಿಸಬೇಕು. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 9449843250 ಸಂಖ್ಯೆ ಸಂಪರ್ಕಿಸಬಹುದು. ಇಲ್ಲವೇ ವೆಬ್‌ಸೈಟ್‌ https://chitradurga.nic.in/en/ ಗೆ ಭೇಟಿ ನೀಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+