ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಆಹ್ವಾನ: ಎಲ್ಲಿ? ಏನು? ಯಾವಾಗ?

ಕೃಷಿ ಸಂಖ್ಯಾಶಾಸ್ತ್ರ ವಿಭಾಗದಲ್ಲಿ ಉದ್ಯೋಗ ಹುಡುಕುತ್ತಿರುವ ಆಕಾಂಕ್ಷಿಗಳಿಗೆ ಇದೀಗ ಗುಡ್ ನ್ಯೂಸ್ ಸಿಕ್ಕಿದೆ. ಕರ್ನಾಟಕದ ಪ್ರತಿಷ್ಠಿತ ಕೃಷಿ ಮಹಾ ವಿದ್ಯಾಲಯವು ಇದೀಗ, ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅಭ್ಯರ್ಥಿಗಳನ್ನ ಆಯ್ಕೆ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಈ ಬಗ್ಗೆ ಸುತ್ತೋಲೆ ಕೂಡ ಹೊರಡಿಸಿದೆ. ಹಾಗಾದ್ರೆ ಯಾವುದು ಆ ಕೃಷಿ ಮಹಾ ವಿದ್ಯಾಲಯ? ಸಂದರ್ಶನದ ದಿನಾಂಕ ಯಾವುದು? ಏನೆಲ್ಲಾ ದಾಖಲೆ ಬೇಕು? ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ.

ಅಂದಹಾಗೆ ಧಾರವಾಡ ಕೃಷಿ ಮಹಾ ವಿದ್ಯಾಲಯವು ಈಗ, ಕೃಷಿ ಸಂಖ್ಯಾಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ತಾತ್ಕಾಲಿಕ, ಅಂದ್ರೆ 179 ದಿನಗಳ ಅವಧಿಯ ಮೀರದಂತೆ ಅರ್ಹ ಅಭ್ಯರ್ಥಿಗಳನ್ನ ನೇಮಕ ಮಾಡಿಕೊಳ್ಳಲು ಅರ್ಜಿಗಳನ್ನ ಆಹ್ವಾನಿಸಿದೆ. ಹೀಗೆ ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ, ತಮ್ಮ ಅರ್ಜಿ ಸಲ್ಲಿಸಲು ಅವಕಾಶ ಇದೆ. ಹಾಗಾದ್ರೆ ಈ ಸಂದರ್ಶನ ನಡೆಯುವುದು ಯಾವಾಗ? ಹಾಗೆ ಸಂದರ್ಶನಕ್ಕೆ ಬರುವ ಅಭ್ಯರ್ಥಿಗಳು ಯಾವ ಯಾವ ದಾಖಲೆ ತರಬೇಕು? ಈ ಬಗ್ಗೆ ಮಾಹಿತಿಗೆ ಮುಂದೆ ಓದಿ.

Explore The Job Openings In Dharwad Agriculture University

ಡಿಸೆಂಬರ್ 15 ರಂದು ಸಂದರ್ಶನ

ಹೌದು ಇದೀಗ ಧಾರವಾಡ ಕೃಷಿ ಮಹಾ ವಿದ್ಯಾಲಯ ಕರೆದಿರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ತಾತ್ಕಾಲಿಕ ನೇಮಕಾತಿಗೆ ಇಚ್ಛಿಸುವವರು ಡಿಸೆಂಬರ್ 15 ಕ್ಕೆ ಸಂದರ್ಶನಕ್ಕೆ ಹಾಜರ್ ಆಗಬೇಕಿದೆ. ನೇಮಕಾತಿ ಪಡೆಯಲು ಬಯಸುವ ಅರ್ಹ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು 2 ಪ್ರತಿಗಳ ಜತೆ ಡಿಸೆಂಬರ್ 15 ರಂದು ಬೆಳಗ್ಗೆ 11 ಗಂಟೆಗೆ ಡೀನ್ (ಕೃಷಿ) ರವರ ಕಚೇರಿ, ಕೃಷಿ ಮಹಾ ವಿದ್ಯಾಲಯ, ಧಾರವಾಡ ಈ ವಿಳಾಸಕ್ಕೆ ಸಂದರ್ಶನಕ್ಕೆ ಹಾಜರ್ ಆಗಬಹುದು ಅಂತ ಮಾಹಿತಿ ನೀಡಲಾಗಿದೆ.

ಯಾವೆಲ್ಲಾ ದಾಖಲೆ ತರಬೇಕು?

ಹಾಗೇ ಮತ್ತೊಂದು ಕಡೆ ಧಾರವಾಡ ಕೃಷಿ ಮಹಾ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ತಾತ್ಕಾಲಿಕ ನೇಮಕಾತಿಗೆ ಸಂದರ್ಶನಕ್ಕೆ ಬರುವವರು, ತಮ್ಮ ತಮ್ಮ ವಿದ್ಯಾರ್ಹತೆಗೆ ಸಂಬಂಧಪಟ್ಟ ಎಲ್ಲ ಮೂಲ ದಾಖಲೆ ಮತ್ತು ಎರಡು ಜೆರಾಕ್ಸ್ ಪ್ರತಿಗಳನ್ನು ಸಂದರ್ಶನ ವೇಳೆ ತರಬೇಕು ಎಂದು ಸೂಚನೆ ನೀಡಲಾಗಿದೆ.

Explore The Job Openings In Dharwad Agriculture University

ಹುದ್ದೆಯ ನೇಮಕಾತಿ ಬಗ್ಗೆ ಮಾಹಿತಿ

ಹಾಗೇ ಸಂದರ್ಶನಕ್ಕೆ ಬರುವ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಬಂದು ಸಂದರ್ಶನಕ್ಕೆ ಹಾಜರ್ ಆಗಬೇಕು. ಸದರಿ ನೇಮಕಾತಿ ತಾತ್ಕಾಲಿಕ ಆಗಿರುವುದರಿಂದ ಯಾವುದೇ ಸಮಯಕ್ಕೆ & ಕಾರಣ ತಿಳಿಸದೇ ಕೆಲಸದಿಂದ ತೆಗೆಯಬಹುದು. ಇದು ಕೃಷಿ ವಿಶ್ವವಿದ್ಯಾಲಯದ ಯಾವುದೇ ಖಾಯಂ ನೇಮಕಾತಿ ಹಕ್ಕಿಗೆ ಒಳಪಟ್ಟಿರುವುದಿಲ್ಲ ಎಂದು ಕೃಷಿ ಮಹಾ ವಿದ್ಯಾಲಯಲದ ಡೀನ್ ತಮ್ಮ ಪ್ರಕಟಣೆಯಲ್ಲಿ, ಈ ನೇಮಕಾತಿ ಬಗ್ಗೆ ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+