ESIC Job Recruitment: ಭರ್ಜರಿ ಉದ್ಯೋಗ, ಕೈತುಂಬ ವೇತನ! ಮೇ 26ರೊಳಗೆ ಅರ್ಹರು ಅರ್ಜಿ ಸಲ್ಲಿಸಿ..
ಬೆಂಗಳೂರು, ಏಪ್ರಿಲ್ 13: ನೌಕರರ ರಾಜ್ಯ ವಿಮಾ ನಿಗಮ (ESIC) ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಖಾಲಿ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಿಡಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಮಾಸಿಕ ಬೃಹತ್ ಮೊತ್ತದ ವೇತನ ಹಾಗೂ ಸರ್ಕಾರಿ ನೌಕರಿ ಹುಡುಕುತ್ತಿದ್ದರೆ ಅಂತವರಿಗೆ ಇದೊಂದು ಸುವರ್ಣ ಅವಕಾಶವಾಗಿದೆ.
ನೌಕರರ ರಾಜ್ಯ ವಿಮಾ ನಿಗಮ (ESIC) ಸ್ಪೆಷಲಿಸ್ಟ್ ಗ್ರೇಡ್-II (ಹಿರಿಯ ಮತ್ತು ಕಿರಿಯ ವಿಭಾಗ) ಹುದ್ದೆಗಳ ನೇಮಕಾತಿ ನಡೆಸುತ್ತಿದೆ. ಆಸಕ್ತ ವಿದ್ಯಾರ್ಥಿಗಳು ಸೂಕ್ತ ದಾಖಲೆಗಳ ಸಮೇತವಾಗಿ ಮೇ 26 ರೊಳಿಗೆ ಸಲ್ಲಿಸಬೇಕು. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಧಿಸೂಚನೆ ಓದಿಕೊಂಡು ಅರ್ಜಿ ಸಲ್ಲಿಸಿದರೆ ಇನ್ನಷ್ಟು ಉತ್ತಮ.

ನೇಮಕಾತಿ ಮಾಹಿತಿ ಹೀಗಿದೆ
ನೇಮಕಾತಿ ಸಂಸ್ಥೆ: ನೌಕರರ ರಾಜ್ಯ ವಿಮಾ ನಿಗಮ (ESIC)
ಹುದ್ದೆಗಳ ಹೆಸರು: ಸ್ಪೆಷಲಿಸ್ಟ್ ಗ್ರೇಡ್-II (ಹಿರಿಯ ಮತ್ತು ಕಿರಿಯ ವಿಭಾಗ
ಅಂತಿಮ ದಿನಾಂಕ: ಮೇ 26
ಗರಿಷ್ಠ ವಯೋಮಿತಿ: 45
ಅರ್ಜಿ ಸಲ್ಲಿಕೆ ಶುಲ್ಕ: ರೂ. 500
ವಿದ್ಯಾರ್ಹತೆ: ಅಗತ್ಯ ವಿದ್ಯಾರ್ಹತೆ
ESIC ನೇಮಕಾತಿ 2025: ವಯಸ್ಸಿನ ಮಿತಿ
ಈ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಕೊನೆ ದಿನ ಮೇ 26ಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳು 45 ವರ್ಷ ಮೀರಿರಬಾರದು. ಅಲ್ಲದೇ ESIC ಉದ್ಯೋಗಿಗಳು ಮತ್ತು ಸರ್ಕಾರಿ ನೌಕರರಿಗೆ 5 ವರ್ಷಗಳವರೆಗೆ ವಯಸ್ಸಿನಲ್ಲಿ ಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ. ರಿಸರ್ವ್ (SC/ST/OBC) ಹುದ್ದೆಗಳ ಮೀಸಲಿಟ್ಟಿದ್ದರೆ ಮಾತ್ರ ವಯೋಮಿತಿ ಸಡಿಲಿಕೆ ಅರ್ಹರಾಗುತ್ತಾರೆ.
ESIC ಹುದ್ದೆಗೆ ಮಾಸಿಕ ವೇತನ
ಸ್ಪೆಷಲಿಸ್ಟ್ ಗ್ರೇಡ್-II (ಹಿರಿಯ) ಹುದ್ದೆಗೆ ಆಯ್ಕೆ ಆದವರಿಗೆ ಮಾಸಿಕವಾಗಿ 78,800 ರೂಪಾಯಿ ಆರಂಭಿಕ ವೇತನ ಸಿಗಲಿದೆ. ಜೊತೆಗೆ ಸರ್ಕಾರಿ ಭತ್ಯೆ ಇತರ ಸೌಲಭ್ಯಗಳು ಸಿಗಲಿವೆ. ಇನ್ನೂ ಸ್ಪೆಷಲಿಸ್ಟ್ ಗ್ರೇಡ್-II (ಕಿರಿಯ) ಹುದ್ದೆಗೆ ಆಯ್ಕೆ ಆದವರಿಗೆ 67,700 ರೂಪಾಯಿ ಆರಂಭಿಕ ವೇತನ 67,000 ರೂಪಾಯಿ ನೀಡಲಾಗುತ್ತದೆ. ಇದರೊಂದಿಗೆ ಸರ್ಕಾರದಿಂದ ಸಿಗುವ ತುಟ್ಟಿಭತ್ಯೆ, ಮನೆ ಬಾಡಿಗೆ ಭತ್ಯೆ, ಎನ್‌ಪಿಎ ಹಾಗೂ ಸಾರಿಗೆ ಭತ್ಯೆ ಸೇರಿ ಹೆಚ್ಚುವರಿ ಪ್ರಯೋಜನ ಸಿಗುತ್ತವೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಅರ್ಜಿ ಸಲ್ಲಿಕೆ ಪ್ರಕ್ರಿಯೆ
ಈ ಖಾಲಿ ಹುದ್ದೆಗಳಿಗೆ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಸೂಕ್ತ ದಾಖಲೆಗಳ ಸಮೇತವಾಗಿ ಅರ್ಜಿ ನಮೂನೆ ಭರ್ತಿ ಮಾಡಿ, ಸ್ವಯಂ-ದೃಢೀಕರಿಸಿದ ದಾಖಲೆ ಲಗತ್ತಿಸಬೇಕು. ಸ್ಪೀಡ್ ಪೋಸ್ಟ್ ಮೂಲಕ ಆಯಾ ಪ್ರಾದೇಶಿಕ ಕಚೇರಿಗೆ ಕಳುಹಿಸುವಂತೆ ಅಧಿಸೂಚನೆಯಲ್ಲಿ ವಿಳಾಸ ಕೊಡಲಾಗಿದೆ.
ಅರ್ಜಿ ಕಳುಹಿಸುವಾಗಿ ನೀವು ಲಕೋಟೆಯ ಮೇಲೆ ಸ್ಪಷ್ಟವಾಗಿ ಪ್ರದೇಶಕ್ಕೆ ತಜ್ಞ Gr.-II (ಜೂನಿಯರ್/ಸೀನಿಯರ್ ಸ್ಕೇಲ್) ಹುದ್ದೆಗೆ ಅರ್ಜಿ, ಅರ್ಜಿ ಸಲ್ಲಿಸಿದ ವಿಶೇಷತೆ: ಎಂದು ಬರೆದಿರಬೇಕು. ಈ ಅರ್ಜಿಯನ್ನು ಮೇ 26 ESIC ವಿಳಾಸಕ್ಕೆ ಕಳುಹಿಸಬೇಕು. ತಡವಾಗಿ ಬಂದ ಅರ್ಜಿ ಪರಿಗಣಿಸುವುದಿಲ್ಲ ಎಂದು ತಿಳಿಸಲಾಗಿದೆ. .
ಅರ್ಜಿ ಶುಲ್ಕ ವಿವರ
ಅರ್ಜಿ ಶುಲ್ಕವು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 500 ರೂ. ನಿಗದಿಪಡಿಸಲಾಗಿದೆ. ಮಹಿಳೆಯರು, ಎಸ್‌ಸಿ/ಎಸ್‌ಟಿ PwBD (ಬೆಂಚ್‌ಮಾರ್ಕ್ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳು), ಮಾಜಿ ಸೈನಿಕರು ಹಾಗೂ ಇಎಸ್‌ಐಸಿ ಉದ್ಯೋಗಿಗಳು ಸೇರಿ ಕೆಲವರಿಗೆ ಶುಲ್ಕ ವಿನಾಯಿತಿ ಕೊಡಲಾಗಿದೆ. ಹೆಚ್ಚಿನ ಮಾಹಿತಿಗೆ https://www.esic.gov.in/recruitments ಈ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕು.
-
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ಬೇಸಿಗೆಯ ಸುಡು ಬಿಸಿಲಿನಿಂದ ಪಾರಾಗಲು ಭೇಟಿ ನೀಡಬಹುದಾದ ಭಾರತದ 10 ಪ್ರೇಕ್ಷಣೀಯ ಸ್ಥಳಗಳು












Click it and Unblock the Notifications