ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಎಚ್‌ಡಿ, ಎಲ್‌ಎಲ್‌ಬಿ, ಎಂಟೆಕ್‌ ಮಾಡಿದವರಿಂದ ಕಾನ್ಸ್‌ಟೇಬಲ್ ಹುದ್ದೆಗೆ ಅರ್ಜಿ: ಅಪಾಯದ ಹಂತಕ್ಕೆ ತಲುಪಿದ ನಿರುದ್ಯೋಗ?

|
Google Oneindia Kannada News

ಹೈದರಾಬಾದ್‌, ಜನವರಿ 21: ಭಾರತದಲ್ಲಿನ ನಿರುದ್ಯೋಗ ಸಮಸ್ಯೆ ಅಪಾಯದ ಹಂತಕ್ಕೆ ತಲುಪಿರುವ ಸೂಚನೆಗಳು ಕಂಡುಬರುತ್ತಿವೆ. ಒಂದು ಕಡೆ ಬಹುರಾಷ್ಟ್ರೀಯ ಕಂಪನಿಗಳು ಸಾವಿರಾರು ಲೆಕ್ಕದಲ್ಲಿ ಉದ್ಯೋಗಗಳನ್ನು ಕಡಿತಗೊಳಿಸುತ್ತಿವೆ. ಇನ್ನೊಂದು ಕಡೆ ಓದಿದವರಿಗೆ ಕೆಲಸಗಳು ಸಿಗುತ್ತಿಲ್ಲ. ಕೋವಿಡ್‌ ನಂತರದ ಭೀಕರ ಪರಿಣಾಮಗಳನ್ನು ಜಗತ್ತಿನ ಬಹುತೇಕ ರಾಷ್ಟ್ರಗಳು ಎದುರಿಸುತ್ತಿವೆ. ಅದಕ್ಕೆ ಭಾರತವೂ ಹೊರತಲ್ಲ. ಏರುತ್ತಿರುವ ಬೆಲೆಗಳು, ಉದ್ಯೋಗಗಳ ಕಡಿತ, ಆರ್ಥಿಕ ತೊಂದರೆಗಳು ಭಾರತವನ್ನು ನರಳಿಸುತ್ತಿವೆ. ಇದು ಮುಂದೆ ಯಾವ ಹಂತಕ್ಕೆ ಬಂದು ನಿಲ್ಲಲಿದೆ ಎಂಬುದನ್ನು ಕಾಲವೇ ಉತ್ತರಿಸಬೇಕಿದೆ.

ಇದಕ್ಕೆ ಪೂರಕವೆಂಬಂತೆ ಆಂಧ್ರ ಪ್ರದೇಶದಲ್ಲಿ ಘಟನೆಯೊಂದು ನಡೆದಿದೆ. ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಿದವರಲ್ಲಿ 10 ಪಿಎಚ್‌ಡಿ ಮತ್ತು 930 ಎಂಟೆಕ್ ಪದವೀಧರರಿದ್ದು, ಭಾನುವಾರ ಲಿಖಿತ ಪರೀಕ್ಷೆಗೆ ಹಾಜರಾಗಲಿದ್ದಾರೆ.

ರಾಜ್ಯ ಮಟ್ಟದ ಪೊಲೀಸ್ ನೇಮಕಾತಿ ಮಂಡಳಿಯ ಅಧಿಕೃತ ಟಿಪ್ಪಣಿಯ ಪ್ರಕಾರ, ಕಾನ್ಸ್‌ಟೇಬಲ್ ಹುದ್ದೆಗೆ ಅರ್ಹತೆಯ ತೊಂದರೆ ಎದುರಾಗಿದೆ. ಅಭ್ಯರ್ಥಿಗಳ ಪಟ್ಟಿಯಲ್ಲಿ 5,284 MBA, 4,365-M Sc ಮತ್ತು 94 LLB ಪದವಿ ಹೊಂದಿರುವವರು ಇದ್ದಾರೆ.

Doctorates, LLBs, MTechs in race for police constable job in Andhra Pradesh

6,400 ಕಾನ್‌ಸ್ಟೆಬಲ್ ಹುದ್ದೆಗಳಿಗೆ ಪರೀಕ್ಷೆ ಬರೆಯುತ್ತಿರುವ 5,03,486 ಅಭ್ಯರ್ಥಿಗಳಲ್ಲಿ ಒಟ್ಟಾರೆ 13,961 ಸ್ನಾತಕೋತ್ತರ ಪದವೀಧರರು ಮತ್ತು 1, 55,537 ಪದವೀಧರರು ಸೇರಿದ್ದಾರೆ.

APSLPRB 3,580 (ಪುರುಷರು ಮತ್ತು ಮಹಿಳೆಯರು) ಸ್ಟೈಪೆಂಡರಿ ಕೆಡೆಟ್ ಟ್ರೈನಿ (SCT) ಪೊಲೀಸ್ ಕಾನ್ಸ್‌ಟೇಬಲ್‌ಗಳು (ಸಿವಿಲ್) ಮತ್ತು 2,520 (ಪುರುಷರು) SCT ಪೊಲೀಸ್ ಕಾನ್ಸ್‌ಟೇಬಲ್‌ಗಳನ್ನು (AP ವಿಶೇಷ ಪೊಲೀಸ್) ನೇಮಕ ಮಾಡಲು ಅಧಿಸೂಚನೆಯನ್ನು ಹೊರಡಿಸಿದೆ.

Doctorates, LLBs, MTechs in race for police constable job in Andhra Pradesh

ಒಟ್ಟು 5,03,486 ಅರ್ಜಿದಾರರ ಪೈಕಿ 3,95,415 ಪುರುಷರು ಮತ್ತು 1,08,071 ಮಹಿಳೆಯರು. 3.64 ಲಕ್ಷಕ್ಕೂ ಹೆಚ್ಚು ಅರ್ಜಿದಾರರು ತೆಲುಗು ಭಾಷೆಯನ್ನು ಲಿಖಿತ ಪರೀಕ್ಷಾ ಮಾಧ್ಯಮವಾಗಿ ಆಯ್ಕೆ ಮಾಡಿಕೊಂಡಿದ್ದಾರೆ. 1.39 ಲಕ್ಷಕ್ಕೂ ಹೆಚ್ಚು ಜನರು ಇಂಗ್ಲಿಷ್ ಮತ್ತು 227 ಮಂದಿ ಉರ್ದು ಮಾಧ್ಯಮವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಭಾರತದಲ್ಲಿ ನಿರುದ್ಯೋಗ ದರವು 2022 ರ ನವೆಂಬರ್‌ನಲ್ಲಿ 8 ಪ್ರತಿಶತದಿಂದ ಡಿಸೆಂಬರ್‌ನಲ್ಲಿ 8.30 ಪ್ರತಿಶತಕ್ಕೆ ಏರಿಕೆಯಾಗಿದೆ ಎಂದು ಭಾರತೀಯ ಆರ್ಥಿಕತೆಯನ್ನು ಮೇಲ್ವಿಚಾರಣೆ ಮಾಡುವ ಕೇಂದ್ರ ಹೇಳಿದೆ.

Doctorates, LLBs, MTechs in race for police constable job in Andhra Pradesh

ಭಾರತದಲ್ಲಿ, ಆಯ್ಕೆಮಾಡಿದ ಕುಟುಂಬಗಳನ್ನು ನೇರವಾಗಿ ಸಂದರ್ಶನ ಮಾಡುವ ಮೂಲಕ ನಿರುದ್ಯೋಗ ದರವನ್ನು ಅಂದಾಜಿಸಲಾಗಿದೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿಯು 15 ವರ್ಷಕ್ಕಿಂತ ಮೇಲ್ಪಟ್ಟ 522,000 ಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡ 174,405 ಕ್ಕೂ ಹೆಚ್ಚು ಕುಟುಂಬಗಳನ್ನು ಸಂದರ್ಶನ ಮಾಡಿದೆ.

English summary
There are 10 PhD and 930 MTech graduates who have applied for Andhra Pradesh Police Constable post and will appear for the written exam on Sunday,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X