ಮೈಸೂರಿನಲ್ಲಿ ನೂರಾರು ಹುದ್ದೆಗಳ ನೇಮಕಕ್ಕೆ ನೇರ ಸಂದರ್ಶನ: ಎಲ್ಲಿ? ಯಾವಾಗ? ಇಲ್ಲಿದೆ ವಿವರ
ಮೈಸೂರು, ನವೆಂಬರ್ 25: ರಾಷ್ಟ್ರೀಯ ಆರೋಗ್ಯ ಅಭಿಯಾನದಲ್ಲಿನ ವಿವಿಧ ಕಾರ್ಯಕ್ರಮಗಳಲ್ಲಿ ಮೈಸೂರಿನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಸೇವೆಯನ್ನು ಗುತ್ತಿಗೆ ಆಧಾರದ ಮೇಲೆ 2024-25ನೇ ಸಾಲಿಗೆ ನೇಮಕ ಮಾಡಿಕೊಳ್ಳಲು ನೇರ ಸಂದರ್ಶನ ಆಯೋಜಿಸಲಾಗಿದೆ. ಡಿಸೆಂಬರ್ 2ರಂದು ಬೆಳಗ್ಗೆ 10:30 ಗಂಟೆಯಿಂದ ಸಂಜೆ 4:30ರವೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಆವರಣದಲ್ಲಿ ಸಂದರ್ಶನ ನಡೆಯಲಿದೆ.
ಸದಸ್ಯ ಕಾರ್ಯದರ್ಶಿ ಅವರ ಸಮ್ಮುಖದಲ್ಲಿ ನೇರ ಸಂದರ್ಶನ ಏರ್ಪಡಿಸಲಾಗಿದ್ದು, ಉದ್ಯೋಗಾಂಕ್ಷಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಉದ್ಯೋಗ ಪಡೆದುಕೊಳ್ಳಲು ಮುಕ್ತ ಅವಕಾಶವಿದೆ.

ಮಕ್ಕಳ ತಜ್ಞರು (01), ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು (01), ಅರವಳಿಕೆ ತಜ್ಞರು (03), ಮನೋ ವೈದ್ಯರು (01), ಎಸ್.ಎನ್.ಸಿ.ಯು ವೈದ್ಯರು (01), ಎನ್.ಆರ್.ಸಿ ವೈದ್ಯರು (01), ವೈದ್ಯಾಧಿಕಾರಿಗಳು (ಐ.ಸಿ.ಯು, ಹೆಚ್.ಡಿ.ಯು) (14), ರಕ್ತ ನಿಧಿ ವೈದ್ಯಾಧಿಕಾರಿಗಳು (01), ಆರ್.ಬಿ.ಎಸ್.ಕೆ ವೈದ್ಯರು (02), ನೇತ್ರ ಸಹಾಯಕರು (04), ಮನೋ ಸಾಮಾಜಿಕ ಕಾರ್ಯಕರ್ತರು (01), ಕಮ್ಯೂನಿಟಿ ಸ್ಟಾಫ್ ನರ್ಸ್ (01), ಶೂಶ್ರೂಷಕರು (ಹೆಚ್.ಡಿಯು, ಐ.ಸಿ.ಯು)03, ಶೂಶ್ರೂಷಕರು (ಆರ್.ಬಿ.ಎಸ್.ಕೆ) 01.
ಶೂಶ್ರೂಷಕರು (ಎನ್.ಬಿ.ಎಸ್.ಯು-27 ಮತ್ತು ಎಸ್.ಎನ್.ಸಿ.ಯು-01), ಜಿಲ್ಲಾ ಆಶಾ ಮೆಂಟರ್(01), ತಾಲೂಕು ಆಶಾ ಮೆಂಟರ್ (01), ಅರವಳಿಕೆ ತಜ್ಞರ 01, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು (ಆಯುಷ್ಮತಿ ಕಾರ್ನರ್) 02, ಶಸ್ತç ಚಿಕಿತ್ಸಕರು (ಆಯುಷ್ಮತಿ ಕಾರ್ನರ್) 01, ಪೂರ್ಣಕಾಲಿಕ ವೈದ್ಯರು 04, ವೈದ್ಯರು (ನಮ್ಮ ಕ್ಲಿನಿಕ್) 03, ಶುಶ್ರೂಷಕಿಯರು (ಮಹಿಳಾ ಅಭ್ಯರ್ಥಿಗಳು ಮಾತ್ರ) 02, ಔಷಧಿ ವಿತರಕರು 02, ಪ್ರಯೋಗ ಶಾಲಾ ತಂತ್ರಜ್ಞರು 01, ಆರೋಗ್ಯ ನಿರೀಕ್ಷಣಾಧಿಕಾರಿಗಳು (ನಮ್ಮ ಕ್ಲಿನಿಕ್) 09.
ಫಿಜಿಷಿಯನ್(ಎನ್,ಪಿ-ಎನ್.ಸಿ.ಡಿ) 01, ಫಿಜಿಷಿಯನ್ (ಎನ್.ಪಿ.ಹೆಚ್.ಸಿ.ಇ) 01, ಫಿಜಿಷಿಯನ್(ಎನ್.ಪಿ..ಪಿ,ಸಿ) 01, ವೈದ್ಯಾಧಿಕಾರಿಗಳು(ಎನ್.ಪಿ-ಎನ್.ಸಿ.ಡಿ) 12, ಶುಶ್ರೂಷಕರು (ಎನ್.ಪಿ.ಪಿ.ಸಿ) 02, ಶುಶ್ರೂಷಕರು (ಎನ್.ಪಿ,ಹೆಚ್,ಸಿ.ಇ) 01, ಬ್ಲಾಕ್ ಹೆಲ್ತ್ ಪಬ್ಲಿಕ್ ಎಪಿಡಮಾಲಜಿಸ್ಟ್ 03, ಬ್ಲಾಕ್ ಹೆಲ್ತ್ ಪಬ್ಲಿಕ್ ಲ್ಯಾಬ್-ಪ್ರಯೋಗಶಾಲಾ ತಂತ್ರಜ್ಞರು (01), ವೈದ್ಯರು (ಎನ್.ಟಿ.ಇ.ಪಿ) (01), ಹಿರಿಯ ವೈದ್ಯರು (ಎನ್.ಟಿ.ಇ.ಪಿ) 01, ಟಿ.ಬಿ.ಹೆಚ್.ವಿ ((ಎನ್.ಟಿ.ಇ.ಪಿ) 01 ಸೇರಿದಂತೆ ಒಟ್ಟು 115 ಹುದ್ದೆಗಳಿಗೆ ಸಂದರ್ಶನವನ್ನು ಕರೆಯಲಾಗಿದೆ.

ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಲು ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳು ಎಲ್ಲಾ ದಾಖಲಾತಿಗಳೊಂದಿಗೆ ಡಿಸೆಂಬರ್ 2ರಂದು ನಡೆಯಲಿರುವ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ. ಈ ಸಂಬಂಧ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಂಪರ್ಕಿಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯ ಸದಸ್ಯ ಕಾರ್ಯದರ್ಶಿ ತಿಳಿಸಿದ್ದಾರೆ.












Click it and Unblock the Notifications