ಧಾರವಾಡದಲ್ಲಿ ಕೆಲಸ ಖಾಲಿ ಇದೆ; ವಿದ್ಯಾರ್ಹತೆ ವಿವರಗಳು
ಧಾರವಾಡ, ಫೆಬ್ರವರಿ 15: ಧಾರವಾಡದಲ್ಲಿ ಸಹಾಯಕ ಪ್ರಾಧ್ಯಾಪಕ, ಲೆಕ್ಕಿಗ ಕಂ ಸಹಾಯಕ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹರು ಅರ್ಜಿಗಳನ್ನು ಸಲ್ಲಿಸಬೇಕಿದೆ. ಹುದ್ದೆಯ ವಿವರಗಳು ಇಲ್ಲಿವೆ.
ರಾಜ್ಯ ಬಾಲಕಾರ್ಮಿಕ ನಿರ್ಮೂಲನೆ ಕ್ರಿಯಾ ಯೋಜನಾ ಅನ್ವಯ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಕಛೇರಿಯಲ್ಲಿ ಖಾಲಿ ಇರುವ ಲೆಕ್ಕಿಗ ಕಂ ಸಹಾಯಕ ಸ್ಥಾನಕ್ಕೆ ಸಿಬ್ಬಂದಿಯನ್ನು ಗೌರವಧನದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.

ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ, ಧಾರವಾಡ ವಿಭಾಗದ ಹುಬ್ಬಳ್ಳಿಯ ಪ್ರಿಯದರ್ಶಿನಿ ಕಾಲೋನಿಯ ಅಕ್ಷಯ ಪಾರ್ಕ್‌ನ ಕಾರ್ಮಿಕ ಭವನ ಸಹಾಯಕ ಆಯುಕ್ತರ ಕಚೇರಿ ಕಾರ್ಯಾಲಯದಲ್ಲಿ ಅರ್ಜಿಯನ್ನು ಪಡೆದು ಫೆಬ್ರವರಿ 28ರ ಸಂಜೆ 5 ಗಂಟೆಯ ಒಳಗಾಗಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಬಿಕಾಂ ಪದವಿಯನ್ನು ಪಡೆದಿರಬೇಕು, ಅಕೌಟೆಂಟ್ ಹುದ್ದೆಯಲ್ಲಿ ಕನಿಷ್ಠ 5 ವರ್ಷ ಅನುಭವ ಹೊಂದಿರಬೇಕು, ಕನ್ನಡ ಮತ್ತು ಇಂಗ್ಲಿಷ್ ಮಾತನಾಡಲು ಹಾಗೂ ಉತ್ತಮ ಬರವಣಿಗೆಯ ಕೌಶಲ್ಯವನ್ನು ಹೊಂದಿರಬೇಕು, ಕಂಪ್ಯೂಟರ್ (ಎಮ್.ಎಸ್.ಆಫೀಸ್, ಟ್ಯಾಲಿ, ಇಂಟರ್ನೆಟ್ ಆಪರೇಶನ್) ಜ್ಞಾನವನ್ನು ಪಡೆದಿರಬೇಕು, ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕನಿಷ್ಠ 40 ವಯಸ್ಸಿನ ಒಳಗಿರಬೇಕು.
ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ http://dharwad.nic.in ನಲ್ಲಿ ನೋಡಬಹುದು ಎಂದು ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಸದಸ್ಯ ಕಾರ್ಯದರ್ಶಿಗಳು ಹಾಗೂ ಸಹಾಯಕ ಕಾರ್ಮಿಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಹಾಯಕ ಪ್ರಾಧ್ಯಾಪಕ ಹುದ್ದೆಯ ವಿವರ; ಧಾರವಾಡ ಜಿಲ್ಲೆಯ ಕೃಷಿ ವಿಶ್ವವಿದ್ಯಾಲಯ, ಸಮುದಾಯ ವಿಜ್ಞಾನ ಮಹಾವಿದ್ಯಾಲಯ, ಆಹಾರ ಸಂಸ್ಕರಣಾ ತಂತ್ರಜ್ಞಾನ ವಿಭಾಗ, ಬಿ.ಟೆಕ್. (ಫುಡ್ ಟೆಕ್) ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರ ಒಂದು ತಾತ್ಕಾಲಿಕ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತರು ಅರ್ಜಿ ನಮೂನೆಯ ಎರಡು ಪ್ರತಿಗಳೊಂದಿಗೆ ಫೆಬ್ರವರಿ 27, 2024ರಂದು ಮುಂಜಾನೆ 11 ಗಂಟೆಗೆ ವಿದ್ಯಾಧಿಕಾರಿಗಳು (ಸವಿ), ಸಮುದಾಯ ವಿಜ್ಞಾನ ಮಹಾವಿದ್ಯಾಲಯದ ಕಚೇರಿಯಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು.
ಹೆಚ್ಚಿನ ಮಾಹಿತಿಗಾಗಿ 0836-2214234 ಹಾಗೂ ಕೃವಿವಿ ಜಾಲತಾಣ www.uasd.edu ಗೆ ಸಂಪರ್ಕಿಸಬಹುದೆಂದು ಡೀನ್ (ಸವಿ), ಸಮುದಾಯ ವಿಜ್ಞಾನ ಮಹಾವಿದ್ಯಾಲಯ, ಕೃವಿವಿ, ಧಾರವಾಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications