ದೇನಾ ಬ್ಯಾಂಕ್ ನಲ್ಲಿ 300 ಪ್ರೊಬೆಶನರಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಒಟ್ಟು 300 ಪ್ರೊಬೆಶನರಿ ಅಧಿಕಾರಿ ಹುದ್ದೆಗಳಿಗೆ ದೇನಾ ಬ್ಯಾಂಕ್ ಅರ್ಜಿ ಆಹ್ವಾನಿಸಿದ್ದು, ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು 09ನೇ ಮೇ, 2017 ಕಡೆಯ ದಿನ.
ಬೆಂಗಳೂರು, ಏಪ್ರಿಲ್ 21 : ಒಟ್ಟು 300 ಪ್ರೊಬೆಶನರಿ ಅಧಿಕಾರಿ ಹುದ್ದೆಗಳಿಗೆ ದೇನಾ ಬ್ಯಾಂಕ್ ಅರ್ಜಿ ಆಹ್ವಾನಿಸಿದ್ದು, ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು 09ನೇ ಮೇ, 2017 ಕಡೆಯ ದಿನವಾಗಿದೆ.
ಬ್ಯಾಂಕ್ ಹೆಸರು : ದೇನಾ ಬ್ಯಾಂಕ್
ಹುದ್ದೆ : ಪ್ರೊಬೆಶನರಿ ಅಧಿಕಾರಿ (300)
ಕೆಲಸದ ಸ್ಥಳ : ಭಾರತದಾದ್ಯಂತ
ಅರ್ಜಿ ಸಲ್ಲಿಕೆಗೆ ಕಡೆಯ ದಿನ : 09ನೇ ಮೇ, 2017. [ದೇನಾ ಬ್ಯಾಂಕ್ ನಲ್ಲಿ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ]

ವಿದ್ಯಾರ್ಹತೆ: ಯುಜಿಸಿಯ ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯದಲ್ಲಿ ಯಾವುದೇ ವಿಭಾಗದಲ್ಲಿ ಪದವಿ ಪಡೆದಿರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಶೇ 55, ಇತರೆ ವರ್ಗದ ಅಭ್ಯರ್ಥಿಗಳು ಶೇ 60ರಷ್ಟ ಅಂಕದೊಂದಿಗೆ ಉತ್ತೀರ್ಣರಾಗಿಬೇಕು.
ವೇತನ ಶ್ರೇಣಿ : 31,705 - 45,950 ರು. ಪ್ರತಿ ತಿಂಗಳು.
ವಯೋಮಿತಿ : 2017ರ ಏಪ್ರಿಲ್ 1ರ ಹೊತ್ತಿಗೆ 29 ವರ್ಷದವರಾಗಿರಬೇಕು.
ಆಯ್ಕೆಯ ವಿಧಾನ : ಅರ್ಹ ಅಭ್ಯರ್ಥಿಗಳಿಗೆ ಆನ್ ಲೈನ್ ಪರೀಕ್ಷೆ, ಗುಂಪು ಸಂವಹನ ಹಾಗೂ ಸಂದರ್ಶನವಿರುತ್ತದೆ.
ಶುಲ್ಕ : ಪ್ರೊಬೆಶನರಿ ಅಧಿಕಾರಿ ಹುದ್ದೆಗಳಿಗೆ ಅರ್ಹತೆ ಉಳ್ಳವರು ಮತ್ತು ಇಚ್ಛೆಯುಳ್ಳವರು ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ 50 ರು. ಇತರರು 400 ರು. ದಿನಾಂಕ 18.04.2017ರೊಳಗೆ ಪಾವತಿಸಿಬೇಕು.
ಇನ್ನು ಹೆಚ್ಚಿನ ವಿವರಣೆ ಇಲ್ಲಿ ಕ್ಲಿಕ್ಕಿಸಿ.












Click it and Unblock the Notifications