ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ಯಾರ ಮೆಡಿಕಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ

|
Google Oneindia Kannada News

ಮೈಸೂರು, ಫೆಬ್ರವರಿ 26 : ಕೇಂದ್ರ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌)ಯಲ್ಲಿ ಖಾಲಿ ಇರುವ ವಿವಿಧ ಪ್ಯಾರ ಮೆಡಿಕಲ್ ಹುದ್ದೆಗಳನ್ನು ಭರ್ತಿ ಮಾಡಲು ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 23, 2016.

ಆನ್ ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿದೆ. www.crpfindia.com ವೆಬ್‍ಸೈಟ್‌ಗೆ ಭೇಟಿ ನೀಡಿ, ಲಾಗಿನ್ ಆಗಿ ದಿನಾಂಕ: 23/03/2016 ರೊಳಗಾಗಿ ಸಲ್ಲಿಸಬಹುದು. [KPSC ನೇಮಕಾತಿ, ಅರ್ಜಿ ಸಲ್ಲಿಸಲು ಮಾರ್ಚ್ 4 ಕೊನೆ ದಿನ]

jobs

* ಸಬ್ ಇನ್ಸ್‌ಪೆಕ್ಟರ್ ಸ್ಟಾಫ್ ನರ್ಸ್ ಹುದ್ದೆಗೆ ಅರ್ಜಿ ಸಲ್ಲಿಸಲು ವಯೋಮಿತಿ 18 ರಿಂದ 30 ವರ್ಷ. ಪಿಯುಸಿ ಯೊಂದಿಗೆ 3.5 ವರ್ಷದ ನರ್ಸಿಂಗ್ ಮತ್ತು ಮಿಡ್ ವೈಫರಿ ಕೋರ್ಸ್‌ನಲ್ಲಿ ತೇರ್ಗಡೆಯಾಗಿರಬೇಕು ಹಾಗೂ ಕೇಂದ್ರ/ರಾಜ್ಯ ನರ್ಸಿಂಗ್ ಕೌನ್ಸಿಲ್‍ನಲ್ಲಿ ನೋಂದಾವಣೆಯಾಗಿರಬೇಕು. [ಪೌರಾಡಳಿತ ಇಲಾಖೆಯಲ್ಲಿ ಕೆಲಸ ಖಾಲಿ ಇದೆ]

* ಸಬ್ ಇನ್ಸ್‌ಪೆಕ್ಟರ್ ರೇಡಿಯೋಗ್ರಾಫರ್ ಹುದ್ದೆಗೆ ಅರ್ಜಿ ಸಲ್ಲಿಸಲು ವಯೋಮಿತಿ 18 ರಿಂದ 30 ವರ್ಷ. ಪಿಯುಸಿ ಯಲ್ಲಿ ವಿಜ್ಞಾನ ವಿಷಯಗಳೊಂದಿಗೆ ರೇಡಿಯೋ ಡಯಾಗ್ನಸಿಸ್ ವಿಷಯದಲ್ಲಿ 2 ವರ್ಷದ ಡಿಪ್ಲೊಮೊ ಕೋರ್ಸ್ ತೇರ್ಗಡೆಯಾಗಿರಬೇಕು.

* ಸಹಾಯಕ ಸಬ್ ಇನ್ಸ್‌ಪೆಕ್ಟರ್ ಫಾರ್ಮಸಿಸ್ಟ್ ಹುದ್ದೆಗೆ ಅರ್ಜಿ ಸಲ್ಲಿಸಲು ವಯೋಮಿತಿ 20 ರಿಂದ 25. ಪಿಯುಸಿ ಯೊಂದಿಗೆ ಫಾರ್ಮಸಿ ವಿಷಯದಲ್ಲಿ ಡಿಪ್ಲೊಮೊ ಕೋರ್ಸ್ ತೇರ್ಗಡೆಯಾಗಿರಬೇಕು.

* ಸಹಾಯಕ ಸಬ್ ಇನ್ಸ್‌ಪೆಕ್ಟರ್ ಲ್ಯಾಬೋರೇಟರಿ ಟೆಕ್ನೀಷಿಯನ್ ಹುದ್ದೆಗೆ ಅರ್ಜಿ ಸಲ್ಲಿಸಲು ವಯೋಮಿತಿ 20 ರಿಂದ 25 ವರ್ಷ. 10 ನೇ ತರಗತಿ ಯೊಂದಿಗೆ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಲಾಜಿ ವಿಷಯದಲ್ಲಿ ಡಿಪ್ಲೊಮೊ ಕೋರ್ಸ್ ತೇರ್ಗಡೆಯಾಗಿರಬೇಕು.

* ಸಹಾಯಕ ಸಬ್ ಇನ್ಸ್‌ಪೆಕ್ಟರ್ ಡೆಂಟಲ್ ಟೆಕ್ನೀಷಿಯನ್ ಹುದ್ದೆಗೆ ಅರ್ಜಿ ಸಲ್ಲಿಸಲು ವಯೋಮಿತಿ 20 ರಿಂದ 25 ವರ್ಷ. 10 ನೇ ತರಗತಿಯೊಂದಿಗೆ 2 ವರ್ಷದ ದಂತ ಆರೋಗ್ಯ ವಿಷಯದಲ್ಲಿ ಡಿಪ್ಲೊಮೊ ಕೋರ್ಸ್ ತೇರ್ಗಡೆಯಾಗಿರಬೇಕು.

* ಹೆಡ್ ಕಾನ್ಸ್‌ಟೇಬಲ್ ಲ್ಯಾಬೋರೇಟರಿ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಲು ವಯೋಮಿತಿ 20 ರಿಂದ 25 ವರ್ಷ. 10 ನೇ ತರಗತಿಯಲ್ಲಿ ತೇರ್ಗಡೆಯಾಗಿರಬೇಕು, ಮತ್ತು ಲ್ಯಾಬೋರೇಟರಿ ಸಹಾಯಕ ವಿಷಯದಲ್ಲಿ ಪ್ರಮಾಣ ಪತ್ರ ಪಡೆದಿರಬೇಕು.

* ಹೆಡ್ ಕಾನ್ಸ್‌ಟೇಬಲ್‌ ಎಕ್ಸರೇ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಲು ವಯೋಮಿತಿ 20 ರಿಂದ 25 ವರ್ಷ. 10 ನೇ ತರಗತಿ ತೇರ್ಗಡೆಯೊಂದಿಗೆ ರೇಡಿಯೋ ಡಯಾಗ್ನಸಿಸ್ ವಿಷಯದಲ್ಲಿ 2 ವರ್ಷದ ಡಿಪ್ಲೊಮೊ ಕೋರ್ಸ್‌ ತೇರ್ಗಡೆಯಾಗಿರಬೇಕು.

* ಹೆಡ್ ಕಾನ್ಸ್‌ಟೇಬಲ್‌ ಏರ್ ಕಂಡಿಷನಿಂಗ್ ಪ್ಲಾನಟ್ ಟೆಕ್ನೀಷಿಯನ್ ಹುದ್ದೆಗೆ ಅರ್ಜಿ ಸಲ್ಲಿಸಲು ವಯೋಮಿತಿ 20 ರಿಂದ 25 ವರ್ಷ. 10ನೇ ತರಗತಿ ತೇರ್ಗಡೆಯೊಂದಿಗೆ ರೆಫ್ರಿಜರೇಷನ್ & ಏರ್ ಕಂಡಿಷನಿಂಗ್ ವಿಷಯದಲ್ಲಿ ಐಟಿಐ ಕೋರ್ಸ್ ತೇರ್ಗಡೆಯಾಗಿರಬೇಕು.

* ಹೆಡ್ ಕಾನ್ಸ್‌ಟೇಬಲ್ ಸ್ಟೆವಾರ್ಡ್ ಹುದ್ದೆಗೆ ಅರ್ಜಿ ಸಲ್ಲಿಸಲು ವಯೋಮಿತಿ 20 ರಿಂದ 25 ವರ್ಷ. 10 ನೇ ತರಗತಿ ತೇರ್ಗಡೆಯೊಂದಿಗೆ ಊಟ ಮತ್ತು ಸೇವೆ ವಿಷಯದಲ್ಲಿ ಡಿಪ್ಲೊಮೊ ಕೋರ್ಸ್ ತೇರ್ಗಡೆಯಾಗಿರಬೇಕು.

* ಕಾನ್ಸ್‌ಟೇಬಲ್ ವಾರ್ಡ್ ಬಾಯ್/ಗರ್ಲ್ ಹುದ್ದೆಗೆ ಅರ್ಜಿ ಸಲ್ಲಿಸಲು ವಯೋಮಿತಿ 20 ರಿಂದ 25 ವರ್ಷ. 10 ನೇ ತರಗತಿ ತೇರ್ಗಡೆಯೊಂದಿಗೆ ಪ್ರಥಮ ಚಿಕಿತ್ಸೆ ವಿಷಯದಲ್ಲಿ ಪ್ರಮಾಣ ಪತ್ರ ಪಡೆದಿರಬೇಕು.

ಹೆಚ್ಚಿನ ಮಾಹಿತಿಗಾಗಿ ಉಪ ಮುಖ್ಯಸ್ಥರು, ವಿಶ್ವವಿದ್ಯಾನಿಲಯ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ, ಮಾನಸಗಂಗೋತ್ರಿ, ಮೈಸೂರು ಇವರನ್ನು ಸಂಪರ್ಕಿಸಬಹುದಾಗಿದೆ.

English summary
Central Reserve Police Force has released notification for 182 Paramedical staff vacancies. 23rd March 2016 last date for submit applications.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X