Congress Manifesto: 30 ಲಕ್ಷ ಹುದ್ದೆಗಳ ಭರ್ತಿ ಹಾಗೂ ಈ ಕುಟುಂಬದ ಮಹಿಳೆಯರಿಗೆ ಪ್ರತಿ ವರ್ಷ ₹1,00,000 ನೆರವು
ನವದೆಹಲಿ, ಏಪ್ರಿಲ್, 05: ಇದೀಗ ದೇಶದಲ್ಲಿ ಲೋಕಸಭೆ ಚುನಾವಣೆ ಕಾವು ಏರುತ್ತಿದ್ದು, ಮತದಾರರನ್ನು ಸೆಳೆಯಲು ಎಲ್ಲಾ ಪಕ್ಷಗಳು ಭಾರೀ ತಯಾರಿ ನಡೆಸುತ್ತಿವೆ. ಇದೀಗ ಇಂದು (ಏಪ್ರಿಲ್ 05) ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಲೋಕಸಭಾ ಚುನಾವಣೆಗೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, 25 ಗ್ಯಾರಂಟಿಗಳಮನ್ನು ಘೋಷಣೆ ಮಾಡಿದೆ. ಈ ವೇಳೆ ಯುವಕರಿಗೆ ಹಾಗೂ ಬಡ ಕುಟುಂಬದ ಮಹಿಳೆಯರಿಗೆ ಗುಡ್‌ನ್ಯೂಸ್‌ವೊಂದನ್ನು ನೀಡಿದೆ. ಮಾಹಿತಿ ಇಲ್ಲಿದೆ ಗಮನಿಸಿ.
ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. 2024ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಬಡ ಕುಟುಂಬದ ಮಹಿಳೆಯರಿಗೆ ಪ್ರತಿ ವರ್ಷ 1,00,000 ರೂಪಾಯಿಗಳ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.'

ಯುವ ನ್ಯಾಯ ಅಡಿಯಲ್ಲಿ ಕೇಂದ್ರ ಸರ್ಕಾರದ ವಿವಿಧ ಹಂತಗಳಲ್ಲಿ ಮಂಜೂರಿ ಆಗಿರುವ ಹುದ್ದೆಗಳಲ್ಲಿ ಸುಮಾರು 30 ಲಕ್ಷ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಘೋಷಣೆ ಮಾಡಿದೆ. ಮತ್ತು ಒಂದು ವರ್ಷದವರೆಗೆ ಅಪ್ರೆಂಟಿಸ್‌ಶಿಪ್ ಕಾರ್ಯಕ್ರಮದಡಿಯಲ್ಲಿ ಯುವಕರಿಗೆ 1 ಲಕ್ಷ ರೂಪಾಯಿ ನೀಡುವುದಾಗಿ ಘೋಷಣೆ ಮಾಡಿದೆ.
ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶ: ಲೋಕಸಭಾ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ಭಾರೀ ಪೈಪೋಟಿ ನಡೆಸುತ್ತಿದ್ದಾರೆ. ಅಲ್ಲದೆ ಆರೋಪ, ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ. ಇನ್ನು ಇಂದು (ಏಪ್ರಿಲ್ 04) ಚಿತ್ರದುರ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ ಕಾರ್ಯಕ್ರಮದ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
"ರಾಮ ಕುಟುಂಬಸ್ಥ, ಸೀತೆ, ಲಕ್ಷ್ಮಣ ಬಿಟ್ರು, ರಾಮ ಒಬ್ಬನಿಗೆ ದೇವಾಲಯ ಕಟ್ಟಿ, ಜೈ ಶ್ರೀರಾಮ್ ಅಂತಾ ಹೇಳುತ್ತಾರೆ. ಶ್ರೀರಾಮ, ಸೀತೆ ಎಲ್ಲರೂ ಒಂದೇ. ಅದಕ್ಕಾಗಿಯೇ ನಾನು ಹೇಳುತ್ತೇನೆ ಜೈ ಸೀತಾರಾಮ, ನಿವೆಲ್ಲರೂ ಸೀತಾರಾಮ ಎಂದು ಹೇಳಿ," ಎಂದು ಜನರಿಗೆ ಕರೆ ನೀಡಿದರು.
ಇನ್ನು ಅಮಿತ್ ಷಾ ಅವರನ್ನು ಭೇಟಿ ಮಾಡಿ ಕರ್ನಾಟಕದಲ್ಲಿ ಬರಗಾಲ ಇದೆ, ಹಣ ಬಿಡುಗಡೆ ಮಾಡಿ ಎಂದು ಮನವಿ ಮಾಡಲಾಗಿತ್ತು. ಡಿಸೆಂಬರ್ 23ರಂದು ಸಭೆ ನಡೆಸಿ ರಾಜ್ಯಕ್ಕೆ ಹಣ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದ್ದರು. ಆದರೆ ಎಂಟು ತಿಂಗಳು ಕಳೆದರೂ ಸಭೆ ನಡೆಸಲಿಲ್ಲ, ಹಣ ಬಿಡುಗಡೆ ಮಾಡಲಿಲ್ಲ. ನಾವು ರಾಜ್ಯಕ್ಕೆ 18,171 ಕೋಟಿ ಹಣ ಕೇಳಿದ್ದೇವೆ. 48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ನಾವು ರೈತರಿಗೆ 33,2,500 ಸಾವಿರ ರೈತರಿಗೆ 2,000 ಹಣ ಕೊಟ್ಟಿದ್ದೇನೆ ಎಂದು ಹೇಳಿದರು.
ನಮ್ಮ ರಾಜ್ಯದಿಂದಲೇ ಅತಿ ಹೆಚ್ಚು ತೆರಿಗೆ ಹಣ ವಸೂಲಿ ಮಾಡಿಕೊಡಲಾಗುತ್ತದೆ. ನಮಗೇ ಅನ್ಯಾಯ ಮಾಡಿದರೇ ಹೇಗೆ ನಿರ್ಮಲಾ ಸೀತಾರಾಮನ್ ಅವರೇ? ಎಂದು ಪ್ರಶ್ನೆ ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಮತಕ್ಕಾಗಿ ಮೋದಿ ರೋಡ್ ಶೋ ಮಾಡ್ತಾರೆ. ದುಡ್ಡು ಕೊಟ್ಟು ಜನ ಕರೆದುಕೊಂಡು ಬರುತ್ತಾರೆ. 27 ಜನ ಸಂಸದರು ಇದ್ದರು. ರಾಜ್ಯದ ಬಗ್ಗೆ ಒಬ್ಬರು ಮಾತನಾಡಲಿಲ್ಲ. ಮೋದಿ ಕಂಡರೆ ಗಡಗಡ ಎಂದು ನಡುಗುತ್ತಾರೆ. ಇಂತಹವರನ್ನು ಯಾಕೆ ಪಾರ್ಲಿಮೆಂಟ್‌ಗೆ ಕಳುಹಿಸಬೇಕು. ರಾಜ್ಯದ 27 ಬಿಜೆಪಿ ಎಂಪಿಗಳು ಕೋಲೆ ಬಸವನ ರೀತಿ ಇದ್ದಾರೆ. ಎಲ್ಲದಕ್ಕೂ ಬರೀ ತಲೆ ಅಲ್ಲಾಡಿಸುತ್ತಾರೆ, ನಾರಾಯಣಸ್ವಾಮಿ ಮಾತಾಡಲಿಲ್ಲ, ಗೋವಿಂದ ಕಾರಜೋಳ ಮಾತನಾಡಲಿಲ್ಲ ಎಂದು ಸಂಸದರ ವಿರುದ್ಧ ವಾಗ್ದಾಳಿ ನಡೆಸಿದರು.
ಇನ್ನು ಬಿಜೆಪಿ ವಿರುದ್ಧ ಮಾಡಿದವರನ್ನು ಹೆದರಿಸುತ್ತಾರೆ. ಹಾಗೆಯೇ ಕೆ.ಎಸ್.ಈಶ್ವರಪ್ಪ ಪಕ್ಷೇತರವಾಗಿ ನಿಂತರೆ ಅವರಿಗೆ ಇ.ಡಿ ಬಿಟ್ಟು ಹೆದರಿಸುತ್ತಾರೆ ಎಂದು ಆಕ್ರೋಶ ಹೊರಹಾಕಿದರು.












Click it and Unblock the Notifications