ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

CMTI Recruitment 2023: 18 ಸೈಂಟಿಸ್ಟ್ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನ, ಫೆ.21ರೊಳಗೆ ಅರ್ಜಿ ಸಲ್ಲಿಸಿ

ಬೆಂಗಳೂರಿನಲ್ಲೇ ಮಾಸಿಕ 2 ಲಕ್ಷ ರೂ. ಸಂಬಳ ಪಡೆಯುವ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಸೆಂಟ್ರಲ್ ಮ್ಯಾನುಫ್ಯಾಕ್ಚರಿಂಗ್ ಟೆಕ್ನಾಲಜಿ ಇನ್​ಸ್ಟಿಟ್ಯೂಟ್ ಸಂಸ್ಥೆಯಲ್ಲಿ ಖಾಲಿ ಹುದ್ದೆಗಳಿಗೆ ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ.

|
Google Oneindia Kannada News

ಬೆಂಗಳೂರು, ಫೆಬ್ರುವರಿ 05: ಬೆಂಗಳೂರಿನಲ್ಲೇ ಮಾಸಿಕ 2 ಲಕ್ಷ ರೂ. ಸಂಬಳ ಪಡೆಯುವ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಸೆಂಟ್ರಲ್ ಮ್ಯಾನುಫ್ಯಾಕ್ಚರಿಂಗ್ ಟೆಕ್ನಾಲಜಿ ಇನ್​ಸ್ಟಿಟ್ಯೂಟ್ (Central Manufacturing Technology Institute) ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಫೆಬ್ರುವರಿ 21ರೊಳಗೆ ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ.

ಸೆಂಟ್ರಲ್ ಮ್ಯಾನುಫ್ಯಾಕ್ಚರಿಂಗ್ ಟೆಕ್ನಾಲಜಿ ಇನ್​ಸ್ಟಿಟ್ಯೂಟ್ ಸಂಸ್ಥೆಯಲ್ಲಿ ಒಟ್ಟು 18 ಸೈಂಟಿಸ್ಟ್​ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳ ಭರ್ತಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಬೆಂಗಳೂರಿನಲ್ಲಿ ಉದ್ಯೋಗ ಮಾಡಲು ಬಯಸುವವರಿಗೆ ಇದೊಂದು ಸುವರ್ಣ ಅವಕಾಶವಾಗಿದೆ. ಅಭ್ಯರ್ಥಿಗಳು ಆನ್​ಲೈನ್​ / ಆಫ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಇದೆ.

CMTI Recruitment 2023: CMTI was Invites for 18th scientist post by eligible

ಅರ್ಜಿ ಸಲ್ಲಿಕೆಗೂ ಮೊದಲು ಖಾಲಿ ಹುದ್ದೆ ಕುರಿತು ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಹುದ್ದೆ ವಿವರ
ಸಂಸ್ಥೆ- ಸೆಂಟ್ರಲ್ ಮ್ಯಾನುಫ್ಯಾಕ್ಚರಿಂಗ್ ಟೆಕ್ನಾಲಜಿ ಇನ್​ಸ್ಟಿಟ್ಯೂಟ್
ಹುದ್ದೆ ಹೆಸರು- ಸೈಂಟಿಸ್ಟ್​
ಖಾಲಿ ಹುದ್ದೆ ಎಷ್ಟು - 18
ಉದ್ಯೋಗ ಸ್ಥಳ- ಬೆಂಗಳೂರು

ಖಾಲಿ ಹುದ್ದೆ ವಿವರ
ಸೈಂಟಿಸ್ಟ್ ಬಿ ವರ್ಗ - 13
ಸೈಂಟಿಸ್ಟ್​ ಸಿ ವರ್ಗ - 3
ಸೈಂಟಿಸ್ಟ್ ಡಿ ವರ್ಗ -2

ಶೈಕ್ಷಣಿಕ ಅರ್ಹತೆ
ಸೈಂಟಿಸ್ಟ್​ ಬಿ ಹುದ್ದೆಗೆ ಅಭ್ಯರ್ಥಿಗಳು ಪದವಿ, ಸ್ನಾತಕೋತ್ತರ ಪದವಿ, ಪಿಎಚ್​.ಡಿ, ಎಂಸಿಎ ಆಗಿರಬೇಕು. ಸೈಂಟಿಸ್ಟ್​ ಸಿ ಹುದ್ದೆಗೆ ಅಭ್ಯರ್ಥಿಗಳು ಪದವಿ, ಸ್ನಾತಕೋತ್ತರ ಪದವಿ, ಪಿಎಚ್​.ಡಿ ಮುಗಿಸಿರಬೇಕು. ಸೈಂಟಿಸ್ಟ್ ಡಿ ಪದವಿ, ಸ್ನಾತಕೋತ್ತರ ಪದವಿ, ಪಿಎಚ್​.ಡಿ ಆಗಿರಬೇಕು.

ಅಭ್ಯರ್ಥಿಗಳು ವಯೋಮಿತಿ
ಅಭ್ಯರ್ಥಿಗಳಿಗೆ ಸೈಂಟಿಸ್ಟ್​ ಬಿ ಹುದ್ದೆಗೆ 32 ವರ್ಷ ವಯೋಮಿತಿ, ಸೈಂಟಿಸ್ಟ್​ ಸಿ ವರ್ಗದ ಹುದ್ದೆಗೆ 35 ವರ್ಷ ಹಾಗೂ ಸೈಂಟಿಸ್ಟ್​ ಡಿ ವರ್ಗದ ಹುದ್ದೆಗೆ 40 ಆಗಿರಬೇಕು. ಇದರಲ್ಲಿ ವಯೋಮಿತಿ ಸಡಿಲಿಕೆ ನೋಡುವುದಾದರೆ ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಹಾಗೂ ಡಿಪಾರ್ಟ್​ಮೆಂಟಲ್ ಅಭ್ಯರ್ಥಿಗಳಿಗೆ 5 ವರ್ಷ, ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ PWD ಅಭ್ಯರ್ಥಿಗಳಿಗೆ 10 ವರ್ಷ ವಯಸ್ಸಿನ ಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.

CMTI Recruitment 2023: CMTI was Invites for 18th scientist post by eligible

ಅರ್ಜಿ ಶುಲ್ಕ ಎಷ್ಟಿದೆ?
ಎಸ್‌ಸಿ, ಎಸ್‌ಟಿ ಮತ್ತು ಪಿಡಬ್ಲ್ಯುಡಿ ಮಹಿಳೆಯರು ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 500 ರೂಪಾಯಿ, ಜನರಲ್ ಮತ್ತು EWS ಅಭ್ಯರ್ಥಿಗಳು- 750 ರೂ. ಶುಲ್ಕವನ್ನು ಆನ್​ಲೈನ್ ಇಲ್ಲವೇ ಡಿಮ್ಯಾಂಡ್​ ಡ್ರಾಫ್ಟ್​ ಮೂಲಕ ಪಾವತಿಸಬೇಕು.

ಕ್ವಾಲಿಫಿಕೇಶನ್ ಆಧಾರದಲ್ಲಿ ಹಾಗೂ ಅನುಭವ ಆಧಾರದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಇದಕ್ಕು ಮೊದಲು ಅಭ್ಯರ್ಥಿಗಳು ಲಿಖಿತ ಪರೀಕ್ಷೆ ಎದುರಿಸಬೇಕು. ನಂತರ ಸಂದರ್ಶನ ನಡೆಯಲಿದೆ ಎಂದು ಸಂಸ್ಥೆ ತಿಳಿಸಿದೆ.

ವೇತನದ ವಿವರ
ಸೈಂಟಿಸ್ಟ್ ಬಿ ಹದ್ದೆಗೆ ತಿಂಗಳಿಗೆ ರೂ. 56,100-1,77,500
ಸೈಂಟಿಸ್ಟ್​ಸಿ ಹುದ್ದೆಗೆ ತಿಂಗಳಿಗೆ ರೂ. 67,700- 2,08,700
ಸೈಂಟಿಸ್ಟ್​ ಡಿ ವರ್ಗದ ಹುದ್ದೆಗೆ ಮಾಸಿಕ ರೂ. 78,800-2,09,200 ಇರಲಿದೆ.

ಆನ್‌ಲೈನ್‌ https://www.applytocmti.in/recruitment/index.php ಮೂಲಕ ಅರ್ಜಿ ಸಲ್ಲಿಸಬೇಕು. ನಂತರ ಅರ್ಜಿಯ ಹಾರ್ಡ್​ ಕಾಪಿಯನ್ನು ವಿಳಾಸ " ಮುಖ್ಯ ಆಡಳಿತಾಧಿಕಾರಿ, ಕೇಂದ್ರೀಯ ಉತ್ಪಾದನಾ ತಂತ್ರಜ್ಞಾನ ಸಂಸ್ಥೆ, ತುಮಕೂರು ರಸ್ತೆ, ಬೆಂಗಳೂರು-560022 ಇಲ್ಲಿಗೆ ಫೆಬ್ರವರಿ 21ರೊಳಗೆ ಮುನ್ನ ಕಳುಹಿಸಬೇಕು.

English summary
CMTI Recruitment 2023: Central Manufacturing Technology Institute was Invites for 18th scientist post by eligible, Apply before Feb 21 in offline.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X