Government Job Recruitment: ಚಿತ್ರದುರ್ಗದಲ್ಲಿ ಉದ್ಯೋಗ ಖಾಲಿ ಇದೆ, ವೇತನ ವಿವರ
ಚಿತ್ರದುರ್ಗ, ಅಕ್ಟೋಬರ್ 27: ರಾಜ್ಯ ಸರ್ಕಾರಿ ವ್ಯಾಪ್ತಿಯಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಇಲ್ಲೊಂದು ಸುವರ್ಣ ಅವಕಾಶ ಇದೆ. ಹೌದು, ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ (KHPT) ತನ್ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೊಳಿಸಲು ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಈ ನಿಮಿತ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಕೂಡಲೇ ಅರ್ಜಿಗಳನ್ನು ಸಲ್ಲಿಸಬೇಕು.
ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್‌ನಲ್ಲಿ (KHPT) ಒಂದು ಪ್ರಾಜೆಕ್ಟ್ ಆಫೀಸರ್ (ನಾನ್- ಮೆಡಿಕಲ್) ಹುದ್ದೆ ಖಾಲಿ ಇದೆ. ಸರ್ಕಾರಿ ಉದ್ಯೋಗ ಹುಡುಕುತ್ತಿರುವವರು ಈ ಕೂಡಲೇ ಆನ್‌ಲೈನ್ ಅರ್ಜಿ ಸಲ್ಲಿಸಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಚಿತ್ರದುರ್ಗದಲ್ಲಿ ಉದ್ಯೋಗ ನೀಡಲಾಗುತ್ತದೆ ಎಂದು ನೇಮಕಾತಿ ಅಧಿಸೂಚನೆ ತಿಳಿಸಿದೆ. ಆಸಕ್ತರು ಇಲ್ಲಿ ನೀಡಲಾಗಿರುವ ನೇಮಕಾತಿ ಪೂರ್ಣ ಮಾಹಿತಿ ತಿಳಿದು ಅರ್ಜಿ ಸಲ್ಲಿಸಬೇಕು.

ನೇಮಕಾತಿ ಪೂರ್ಣ ಮಾಹಿತಿ
ನೇಮಕಾತಿ ಸಂಸ್ಥೆ: ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್, ಚಿತ್ರದುರ್ಗ
ಹುದ್ದೆ ಹೆಸರು: ಪ್ರಾಜೆಕ್ಟ್ ಆಫೀಸರ್
ಒಟ್ಟು ಹುದ್ದೆ: ಒಂದು
ಪೋಸ್ಟಿಂಗ್: ಚಿತ್ರದುರ್ಗ
ಮಾಸಿಕ ವೇತನ: ನಿಯಮಾನುಸಾರ
ಅರ್ಜಿ ಸಲ್ಲಿಕೆ ಕೊನೆ ದಿನ: 2024 ಅಕ್ಟೋಬರ್ 28.
ಶೈಕ್ಷಣಿಕ ಅರ್ಹತೆ
ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಲ್ಲಿ ಪಬ್ಲಿಕ್ ಹೆಲ್ತ್/ ಸೋಷಿಯಲ್ ವರ್ಕ್/ಸೋಷಿಯಲ್ ಸೈನ್ಸ್/ಸ್ಟಾಟಿಸ್ಟಿಕ್ಸ್/ ಸೋಷಿಯಾಲಜಿ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವುದು ಕಡ್ಡಾಯ ಎಂದು ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ ನೇಮಕಾತಿ ಅಧಿಸೂಚನೆ ಮಾಹಿತಿ ನೀಡಿದೆ.
ವಯಸ್ಸಿನ ಮಿತಿ ವಿವರ
ನೇಮಕಾತಿ ಒಳಪಡುವ ಅಭ್ಯರ್ಥಿಗಳ ವಯಸ್ಸು ಇಂತಿಷ್ಟು ಇರಲಿ ಎಂದು ನಿಗಿದ ಮಾಡಿಲ್ಲ. ಜಾತಿ ಮೀಸಲಾತಿ ಅನುಸಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ ಎಂದು ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ ನೇಮಕಾತಿ ಅಧಿಸೂಚನೆತಲ್ಲಿ ತಿಳಿಸಲಾಗಿದೆ.
ನೇಮಕಾತಿ ಹೇಗೆ?
ಅನುಭವದ ಆಧಾರದಲ್ಲಿ ನೇಮಕಾತಿ ನಡೆಸಲು ತೀರ್ಮಾನಿಸಿರುವ ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ ಅಭ್ಯರ್ಥಿಗಳು ಸಂಬಂಧಿತ ರಂಗದಲ್ಲಿ ಒಂದರಿಂದ ಎರಡು ವರ್ಷ ಅನುಭವ ಇರುವವರಿಗೆ ಆದ್ಯತೆ ನೀಡುತ್ತದೆ. ಅನುಭವದ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಿದೆ. ಮಾಸಿಕ ವೇತನ ನಿಗದಿ ಮಾಡಿಲ್ಲ. ಬದಲಾಗಿ ನಿಯಮಾನು ಸಾರ ನೀಡಲಿದ್ದು, ಆಯ್ಕೆ ಆದರೆ ಚಿತ್ರದುರ್ಗದಲ್ಲಿ ಪೋಸ್ಟಿಂಗ್ ನೀಡಲಿದೆ.
ಗಮನಿಸಬೇಕಾದ ಅಂಶವೆಂದರೆ ಯಾವುದೇ ಜಾತಿ ಮೀಸಲಾತಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ನಿಗದಿ ಮಾಡಲಾಗಿಲ್ಲ. ಹೀಗಾಗಿ ಅರ್ಜಿ ಸಲ್ಲಿಕೆ ಸಂಪೂರ್ಣ ಉಚಿತವಾಗಿರಲಿದೆ.
ಅರ್ಜಿ ಸಲ್ಲಿಕೆ ಹೇಗೆಂದು ನೋಡುವುದಾದರೆ, ಅಭ್ಯರ್ಥಿಗಳು ಇಲ್ಲಿ ನೀಡಲಾಗಿರುವ https://www.khpt.org/work-with-us/vacancies-form/?post_applied_for=36095 ಅಧಿಕೃತ ಲಿಂಕ್ ಮೂಲಕ ಅರ್ಜಿ ಸಲ್ಲಿಸಬೇಕು. ಸೂಕ್ತ ದಾಖಲಾತಿ ಸಮೇತ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ಪ್ರಕಟಣೆ ಮಾಹಿತಿ ನೀಡಿದೆ.












Click it and Unblock the Notifications