ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 214 ಹುದ್ದೆಗಳಿಗೆ ಅರ್ಜಿ ಆಹ್ವಾನ
ನವದೆಹಲಿ, ಡಿಸೆಂಬರ್ 17: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 2021-22ನೇ ಸಾಲಿನ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರೆಸಿದೆ. ಈ ಕುರಿತಂತೆ ತನ್ನ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಿದೆ. 214 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ, ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 31 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಈ ಹಿಂದೆ ನೀಡಲಾಗಿದ್ದ ಅಧಿಸೂಚನೆಯ ಕೊನೆ ದಿನಾಂಕವನ್ನೂ ಡಿ.31ಕ್ಕೆ ವಿಸ್ತರಿಸಲಾಗಿದೆ.
ಸಂಸ್ಥೆ ಹೆಸರು: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
ಹುದ್ದೆ ಹೆಸರು: Specialist Officer
ಒಟ್ಟು ಹುದ್ದೆ: 214
ಉದ್ಯೋಗ ಸ್ಥಳ: ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಡಿಸೆಂಬರ್ 31, 2021
ವಿದ್ಯಾರ್ಹತೆ: ಪದವಿ, ಪಿಜಿ ಪದವಿ, ಎಂಬಿಎ, ಬಿ. ಟೆಕ್, ಎಂಸಿಎ, ಎಂಎಸ್ಸಿ, ಸಿಎ, ಸಿಎಫ್ಎ. ಐಸಿಎಐ.. ಇತ್ಯಾದಿ

ವಯೋಮಿತಿ
ಕನಿಷ್ಠ ವಯೋಮಿತಿ: 20 ವರ್ಷ
ಗರಿಷ್ಠ ವಯೋಮಿತಿ: 45 ವರ್ಷ
| ಹುದ್ದೆ ವಿವರ | ||||
|---|---|---|---|---|
| ಕ್ರಮ ಸಂಖ್ಯೆ | ಹುದ್ದೆ ಹೆಸರು | ಹುದ್ದೆ ಸಂಖ್ಯೆ | ವಿದ್ಯಾರ್ಹತೆ | ವಯೋಮಿತಿ |
| 01 | ಎಕಾನಾಮಿಸ್ಟ್/ಎಜಿಎಂ | 01+01 | ಪಿಎಚ್ ಡಿ | 35- 45 ವರ್ಷ |
| 02 | ಆದಾಯ ತೆರಿಗೆ ಅಧಿಕಾರಿ/ಎಜಿಎಂ | 01+68 | ಸಿಎ | 35- 45 ವರ್ಷ |
| 03 | ಮಾಹಿತಿ ಮತ್ತು ತಂತ್ರಜ್ಞಾನ/ಎಜಿಎಂ | 01 | ಪದವಿ/ಪಿಜಿ ಪ್ಲಸ್ ಅನುಭವ | 35- 50 ವರ್ಷ |
| 04 | ಡೇಟಾ ಸೈಂಟಿಸ್ಟ್ | 01 | ಬಿ.ಇ/ ಬಿ.ಟೆಕ್/ಪಿಜಿ | 28- 35 ವರ್ಷ |
| 05 | ಕ್ರೆಡಿಟ್ ಅಧಿಕಾರಿ | 10+4 | ಸಿಎ/ ಐಸಿಎಐ/ ಎಂಬಿಎ | 26- 34 ವರ್ಷ |
| 06 | ಡೇಟಾ ಇಂಜಿಯರ್ | 11 | ಬಿ.ಇ/ಬಿ.ಟೆಕ್/ ಪಿ ಜಿ ಪದವಿ, ಡಿಪ್ಲೋಮಾ | 26- 35 ವರ್ಷ |
| 07 | ಐಟಿ ಸೆಕ್ಯುರಿಟಿ ಅನಾಲಿಸ್ಟ್ | 01 | ಬಿ.ಇ/ಎಂಸಿಎ/ಎಂ.ಟೆಕ್ | 26- 40 ವರ್ಷ |
| 08 | ಐಟಿ Soc ಸೆಕ್ಯುರಿಟಿ ಅನಾಲಿಸ್ಟ್ | 02 | ಬಿ.ಇ/ಎಂಸಿಎ/ಎಂ.ಟೆಕ್/ ಎಂಎಸ್ಸಿ | 26- 40 ವರ್ಷ |
| 09 | ರಿಸ್ಕ್ ಮ್ಯಾನೇಜರ್ | 05+13 | ಪಿಜಿ/ ಪಿಜಿ ಡಿಪ್ಲೋಮಾ | 20-25 ವರ್ಷ |
| 10 | ಟೆಕ್ನಿಕಲ್ ಆಫೀಸರ್(ಕ್ರೆಡಿಟ್) | 05+11 | ಪದವಿ(ಇಂಜಿನಿಯರಿಂಗ್) | 26-34 ವರ್ಷ |
| 11 | ಫೈನಾನ್ಸ್ ಅನಾಲಿಸ್ಟ್ | 20 | ಐಸಿಎಐ, ಎಂಬಿಎ | 20-35 ವರ್ಷ |
| 12 | ಐಟಿ ಮ್ಯಾನೇಜರ್ | 15 | ಪದವಿ/ಪಿಜಿ | 20-35 ವರ್ಷ |
| 13 | ಕಾನೂನು ಅಧಿಕಾರಿ | 20+2 | ಪದವಿ(ಕಾನೂನು) | 20-35 ವರ್ಷ |
| 14 | ರಿಸ್ಕ್ ಮ್ಯಾನೇಜರ್ | 10 | ಎಂಬಿಎ/ಪಿಜಿ ಡಿಪ್ಲೋಮಾ | 20-35 ವರ್ಷ |
| 15 | ಸೆಕ್ಯುರಿಟಿ/ಮ್ಯಾನೇಜರ್ | 03 | ಪದವಿ/ ಕಂಪ್ಯೂಟರ್ ಜ್ಞಾನ | 26-45 ವರ್ಷ |
| 16 | ಸೆಕ್ಯುರಿಟಿ | 09 | ಪದವಿ/ ಕಂಪ್ಯೂಟರ್ ಜ್ಞಾನ | 26-45 ವರ್ಷ |
ನೇಮಕಾತಿ ಪ್ರಕ್ರಿಯೆ: ಆನ್ ಲೈನ್ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ.
ಅರ್ಜಿ ಶುಲ್ಕ: ಎಸ್ ಸಿ/ ಎಸ್ಟಿ: 175 ರು + ಜಿಎಸ್‌ಟಿ ಇತರೆ: 850 ರು
ಶುಲ್ಕ ಪಾವತಿ ವಿಧಾನ: ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಬಹುದು. ಆನ್ ಲೈನ್ ಮೂಲಕವೇ ಪೇಮೆಂಟ್ ಮಾಡಬಹುದು. ಡೆಬಿಟ್ ಕಾರ್ಡ್/ ರುಪೇ ಕಾರ್ಡ್/ ವೀಸಾ ಕಾರ್ಡ್/ ಮಾಸ್ಟರ್ ಕಾರ್ಡ್/ಮಾಸ್ಟ್ರೋ ಅಲ್ಲದೆ ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಕ್ಯಾಶ್ ಕಾರ್ಡ್/ಮೊಬೈಲ್ ವ್ಯಾಲೆಟ್/ಯುಪಿಐ ಮೂಲಕ ಹಣ ಪಾವತಿಸಬಹುದು.
ಪ್ರಮುಖ ದಿನಾಂಕಗಳು ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 23/11/2021
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 31/12/2021
ಆನ್‌ಲೈನ್ ಪರೀಕ್ಷೆ ಸಂಭಾವ್ಯ ದಿನಾಂಕ: 22/01/2022
ಅರ್ಜಿ ಸಲ್ಲಿಸುವ ವಿಧಾನ: * ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಅಧಿಸೂಚನೆ ಓದಿಕೊಂಡು, ಅರ್ಹತೆಯುಳ್ಳ ಅಭ್ಯರ್ಥಿಗಳು ಅಧಿಕೃತ ವೆಬ್ ತಾಣದಲ್ಲಿ ನೇಮಕಾತಿ ಲಿಂಕ್ ಕ್ಲಿಕ್ ಮಾಡಿ.
* ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಮುನ್ನ ಐಬಿಪಿಎಸ್ ವೆಬ್ ತಾಣ(https://ibpsonline.ibps.in/cbiosvsnov21/basic_details.php)ದಲ್ಲಿ ನೋಂದಣಿ ಮಾಡಿಕೊಳ್ಳಿ.
* ಅರ್ಜಿ ಸಲ್ಲಿಸುವ ಮುನ್ನ ಇಮೇಲ್ ಐಡಿ ಹಾಗೂ ಮೊಬೈಲ್ ನಂಬರ್ ನೀಡಿ.
* ವಯೋಮಿತಿ, ವಿದ್ಯಾರ್ಹತೆ, ಅನುಭವ, ವಯೋಮಿತಿ ವಿನಾಯಿತಿ ಮುಂತಾದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸತಕ್ಕದ್ದು.
* ತಾಂತ್ರಿಕ/ ತಾಂತ್ರಿಕೇತರ ಹುದ್ದೆ ಅರ್ಜಿ ನಮೂನೆಯನ್ನು ಕ್ಲಿಕ್ ಮಾಡಿ ಅರ್ಜಿಯನ್ನು ಭರ್ತಿ ಮಾಡಿ ಅಗತ್ಯ ಪ್ರಮಾಣ ಪತ್ರಗಳನ್ನು ಲಗತ್ತಿಸಿ.
* ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಬಹುದು. ಆನ್ ಲೈನ್ ಮೂಲಕವೇ ಪೇಮೆಂಟ್ ಮಾಡಬಹುದು. ಡೆಬಿಟ್ ಕಾರ್ಡ್/ ರುಪೇ ಕಾರ್ಡ್/ ವೀಸಾ ಕಾರ್ಡ್/ ಮಾಸ್ಟರ್ ಕಾರ್ಡ್/ಮಾಸ್ಟ್ರೋ ಅಲ್ಲದೆ ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಕ್ಯಾಶ್ ಕಾರ್ಡ್/ಮೊಬೈಲ್ ವ್ಯಾಲೆಟ್/ಯುಪಿಐ ಮೂಲಕ ಹಣ ಪಾವತಿಸಬಹುದು.
* ಅರ್ಜಿ ಸಲ್ಲಿಸಿದ್ದಕ್ಕೆ ಹಾಗೂ ಶುಲ್ಕ ಪಾವತಿಗೆ ಇ ರಸೀತಿ ಪಡೆದುಕೊಳ್ಳಿ. ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಅಧಿಕೃತ ವೆಬ್‌ತಾಣಕ್ಕೆ ಭೇಟಿ ನೀಡಿ.












Click it and Unblock the Notifications