Central Bank Recruitment 2023: ಬೆಂಗಳೂರಿನಲ್ಲಿ ಉದ್ಯೋಗವಕಾಶ, ಜುಲೈ 28ರೊಳಗೆ ಅರ್ಜಿ ಹಾಕಿ
ಬೆಂಗಳೂರು, ಜುಲೈ 24: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (Central Bank of India) ತನ್ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಬೇಕಿದೆ.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾನಲ್ಲಿ ಒಂದು ಬ್ಯುಸಿನೆಸ್ ಕರೆಸ್ಪಾಂಡೆಂಟ್ ಸೂಪರ್ವೈಸರ್ ಹುದ್ದೆ ಖಾಲಿ ಇದೆ. ಅರ್ಹ ಆಸಕ್ತರು ಅರ್ಜಿ ಸಲ್ಲಿಸಬಹುದು. ಇದೇ ತಿಂಗಳ ಜುಲೈ 28 ಅರ್ಜಿ ಹಾಕಲು ಕೊನೆಯ ದಿನವಾಗಿದೆ ಎಂದು ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.

ಅರ್ಜಿ ಸಲ್ಲಿಕೆ ಮುನ್ನ ಹುದ್ದೆಯ ಸಂಪೂರ್ಣ ವಿವರ, ಶೈಕ್ಷಣಿಕ ಅರ್ಹರ, ಮಾಸಿಕ ವೇತನ, ಇನ್ನಿತರ ಅಂಶಗಳನ್ನು ಇಲ್ಲಿ ಪೂರ್ತಿಯಾಗಿ ತಿಳಿದು ಅರ್ಜಿ ಸಲ್ಲಿಸಬಹುದಾಗಿದೆ.
ಹದ್ದೆಯ ಸಂಪೂರ್ಣ ಮಾಹಿತಿ
ಹುದ್ದೆ ಹೆಸರು - ಬ್ಯುಸಿನೆಸ್ ಕರೆಸ್ಪಾಂಡೆಂಟ್ ಸೂಪರ್ವೈಸರ್
ಖಾಲಿ ಹುದ್ದೆ ಎಷ್ಟು - 1
ವಿದ್ಯಾರ್ಹತೆ- ಪದವಿ, ಬಿಇ, ಎಂ.ಎಸ್ಸಿ, ಎಂಸಿಎ, ಎಂಬಿಎ ಆಗಿರಬೇಕು
ಮಾಸಿಕ ಸಂಬಳ - ರೂ.12,000 ರಿಂದ 15,000 ರೂಪಾಯಿ
ಉದ್ಯೋಗದ ಸ್ಥಳ-ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಬೆಂಗಳೂರು

ಶೈಕ್ಷಣಿಕ ಅರ್ಹತೆ
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಹೇಳಿರುವಂತೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪದವಿ, ಬಿಇ, ಎಂ.ಎಸ್ಸಿ, ಎಂಸಿಎ, ಎಂಬಿಎ ಕಡ್ಡಾಯವಾಗಿ ಪೂರ್ಣಗೊಳಿಸಿರಬೇಕು.
ವಯೋಮಿತಿ- ವೇತನ ವಿವರ
ಅರ್ಜಿ ಸಲ್ಲಿಸಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 12,000-15,000 ರೂಪಾಯಿ ಇರಲಿದೆ. ಇನ್ನೂ ಅಭ್ಯರ್ಥಿಗಳ ವಯಸ್ಸು ಕನಿಷ್ಠ 21 ವರ್ಷ ಮತ್ತು ಗರಿಷ್ಠ 45 ವರ್ಷ ನಿಗದಿ ಮಾಡಲಾಗಿದೆ. ಮೀಸಲಾತಿ ಅನುಗುಣವಾಗಿ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರಲಿದೆ ಎಂದು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಅಧಿಸೂಚನೆ ತಿಳಿಸಿದೆ.
ಅಭ್ಯರ್ಥಿಗ ಆಯ್ಕೆ ಹೇಗೆ?
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮೊದಲು ಲಿಖಿತ ಪರೀಕ್ಷೆ ನಡೆಯಲಿದೆ ನಂತರ ಅದರಲ್ಲಿ ಆಯ್ಕೆಯಾಗುವವರಿಗೆ ನೇರ
ಸಂದರ್ಶನ ನಡೆಯಲಿದೆ. ಆದ್ದರಿಂದ ಅಭ್ಯರ್ಥಿಗಳು ಈ ಕೂಡಲೇ ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ '' ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಬೆಂಗಳೂರು ಪ್ರಾದೇಶಿಕ ಕಚೇರಿ, ಎರಡನೇ ನೇ ಮಹಡಿ,
ಗ್ರ್ಯಾಂಡ್ ಮೆಜೆಸ್ಟಿಕ್ ಮಾಲ್ ಗಾಂಧಿನಗರ, ಬೆಂಗಳೂರು - 560009 ಇಲ್ಲಿಗೆ ಆಫ್‌ಲೈನ್ ಮೂಲಕ ಕಳಹಿಸಬೇಕು ಎಂದು ಅಧಿಸೂಚನೆ ತಿಳಿಸಿದೆ.












Click it and Unblock the Notifications