BMTC Recruitment 2024: ಬಿಎಂಟಿಸಿ 2,500 ಕಂಡಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ, ವೇತನ- ಆಯ್ಕೆ ವಿವರ

ಸಾರಿಗೆ ಸಂಸ್ಥೆ (BMTC) ಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ. ಸರ್ಕಾರಿ ಉದ್ಯೋಗ ಪಡೆಯಲು ಇಚ್ಛಿಸುವ ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತಿಳಿಸಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಯಲ್ಲಿ 2,500 ನಿರ್ವಾಹಕ (ಕಂಡಕ್ಟರ್) ಹುದ್ದೆಗಳು ಖಾಲಿ ಇವೆ. ಉಳಿದ ವೃಂದದಲ್ಲಿ 2286 ನಿರ್ವಾಹಕ ಹುದ್ದೆಗಳು, ಸ್ಥಳೀಯ ವೃಂದದಲ್ಲಿ 214 (ಹಿಂಬಾಕಿ 15 ಹುದ್ದೆಗಳು ಸೇರಿ) ಹುದ್ದೆಗಳು ಇದ್ದು, ಆಸಕ್ತರು ಅಧಿಸೂಚನೆ ನೋಡಿಕೊಂಡು ಕೂಡಲೇ ಅರ್ಜಿ ಸಲ್ಲಿಸಬೇಕು. ನೇಮಕಾತಿ ಪ್ರಕ್ರಿಯೆ ಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.

BMTC Recruitment 2024: Eligible Candidates Can Apply for the BMTC 2,500 Conductor

ನೇಮಕಾತಿ ಪೂರ್ಣ ಮಾಹಿತಿ

ಸಂಸ್ಥೆ ಹೆಸರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)

ಉದ್ಯೋಗ ಸಂಸ್ಥೆ ಹೆಸರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)

ಹುದ್ದೆಯ ಹೆಸರು: ನಿರ್ವಾಹಕ (ಕಂಡಕ್ಟರ್)

ಒಟ್ಟು ಹುದ್ದೆ ಸಂಖ್ಯೆ: 2,500 ಹುದ್ದೆ

ಮಾಸಿಕ ವೇತನ: 18,660 ರಿಂದ 25,300ರೂಪಾಯಿ

ಅರ್ಜಿ ಸಲ್ಲಿಕೆ ಕೊನೆ ದಿನ: ಏಪ್ರಿಲ್ 10

ವಿದ್ಯಾರ್ಹತೆ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಪಾಸ್ ಅಥವಾ ಐಸಿಎಸ್‌ಇ / ಸಿಬಿಎಸ್‌ಇ ದ್ವಿತೀಯ ಪಿಯುಸಿ ಉತ್ತೀಣಗೊಳ್ಳಬೇಕು. ಮೂರು ವರ್ಷಗಳ ಡಿಪ್ಲೋಮಾ ಪಡೆದಿರಬೇಕು ಎಂದು ತಿಳಿಸಲಾಗಿದೆ. ಮುಕ್ತ ವಿವಿಯಿಂದ ಪಿಯುಸಿ, ಜೆಒಸಿ / ಜೆಎಲ್‌ಸಿ ಕೋರ್ಸ್ ಪಡೆದವರು ಈ ಹುದ್ದೆ ಪಡೆಯಲು ಅರ್ಹರಲ್ಲ ಎಂದು ಪ್ರಾಧಿಕಾರ ಮಾಹಿತಿ ನೀಡಿದೆ.

BMTC Recruitment 2024: Eligible Candidates Can Apply for the BMTC 2,500 Conductor

ಹೆಚ್ಚುವರಿ ಅರ್ಹತೆ

ಅಭ್ಯರ್ಥಿಗಳಿಗೆ ಮಾನ್ಯತೆ ಪಡೆದ ಮೋಟಾರು ವಾಹನ ನಿರ್ವಾಹಕ ಪರವಾನಗಿ ಮತ್ತು ಬ್ಯಾಡ್ಜ್ ಹೊಂದಿರಬೇಕು.

ಪುರುಷರ ಎತ್ತರ 160 ಸೆಂಮಿ ಹಾಗೂ ಮಹಿಳೆಯರ ಎತ್ತರ 150 ಸೆಂಮಿ ಕಡ್ಡಾಯಗೊಳಿಸಲಾಗಿದೆ. ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ದಾಟಿರಬೇಕು.

ಜಾತಿವಾರು ವಯೋಮಾನದ ವಿವರ

ಸಾಮಾನ್ಯ ವರ್ಗ: ಗರಿಷ್ಠ 35 ವರ್ಷ

2A / 2B / 3A / 3B ಅಭ್ಯರ್ಥಿಗು: 38 ವರ್ಷ

ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1 ಅಭ್ಯರ್ಥಿಗಳೂ: ಗರಿಷ್ಠ 40 ವರ್ಷ

ಮಾಜಿ ಸೈನಿಕ / ಇಲಾಖಾ ಅಭ್ಯರ್ಥಿಗಳು: ಗರಿಷ್ಠ 45 ವರ್ಷ

ತರಬೇತಿ

ಅರ್ಜಿ ಸಲ್ಲಿಸುವ ನಿರ್ವಾಹಕ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಒಂದು ವರ್ಷ ಕಾಲ ವೃತ್ತಿ ತರಬೇತಿ ನೀಡಲಾಗುತ್ತದೆ. ಈ ಅವಧಿಯಲ್ಲಿ ಪ್ರತಿ ತಿಂಗಳು ತರಬೇತಿ ಭತ್ಯೆ ಎಂದು 9,100 ರೂಪಾಯಿ ಕೊಡಲಾಗುವುದು ಎಂದು ತಿಳಿಸಿದ್ದಾರೆ.

ಆಯ್ಕೆ ಹೇಗೆ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಬಿಎಂಟಿಸಿ ನಿಗಮದಿಂದ ಎರಡು ಲಿಖಿತ ಪರೀಕ್ಷೆ ನಡೆಸಬೇಕು. ಇದರಲ್ಲಿ ಅಭ್ಯರ್ಥಿಗಳ ಮೆರಿಟ್ ಆಧಾರದಲ್ಲಿ ಮತ್ತು ದಾಖಲಾತಿ ಪರಿಶೀಲನೆ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಅರ್ಜಿ ಸಲ್ಲಿಕೆ ವಿಧಾನ

ಆಸಕ್ತ ಅಭ್ಯರ್ಥಿಗಳು ನಿಗದಿತ ಸಮಯದೊಳಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ಜಾಲತಾಣ http://kea.kar.nic.in ಗೆ ಭೇಟಿ ನೀಡಬೇಕು. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.

ಶುಲ್ಕದ ವಿವರ

ಇತರ ಹಿಂದುಳಿದ ವರ್ಗಗಳಿಗೆ: 750 ರೂಪಾಯಿ

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಮಾಜಿ ಸೈನಿಕ ಮತ್ತು ಅಂಗವಿಕಲ ಅಭ್ಯರ್ಥಿಗಳು: 500 ರೂಪಾಯಿ

ನೆನಪಿಡಬೇಕಾದ ದಿನಾಂಕ

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 2024 ಮಾರ್ಚ 10

ಅರ್ಜಿ ಸಲ್ಲಿಕೆ ಕೊನೆ ದಿನಾಂಕ: 2024 ಏಪ್ರಿಲ್ 10

ಶುಲ್ಕ ಪಾವತಿಗೆ ಕಡೆಯ ದಿನಾಂಕ: 2024 ಏಪ್ರಿಲ್ 13

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+