1,500 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಬಿಎಂಟಿಸಿ

ಬೆಂಗಳೂರು, ಮೇ 19 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಚಾಲಕ ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 1,500 ಹುದ್ದೆಗಳಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 20, 2015.

1500 ಹುದ್ದೆಗಳ ಪೈಕಿ ಹೈದರಾಬಾದ್-ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ 120 ಮತ್ತು ಇತರ ಅಭ್ಯರ್ಥಿಗಳಿಗೆ 1380 ಹುದ್ದೆಗಳನ್ನು ಮೀಸಲಾಗಿಡಲಾಗಿದೆ. ಅರ್ಜಿ ಸಲ್ಲಿಸಲು ಜೂನ್ 20, ಅರ್ಜಿ ಶುಲ್ಕವನ್ನು ಪಾವತಿ ಮಾಡಲು ಜೂನ್ 22 ಕೊನೆಯ ದಿನಾಂಕವಾಗಿದೆ. [ಕನ್ನಡದಲ್ಲಿ ನೇಮಕಾತಿ ಆದೇಶ ಓದಿ]

BMTC

ವಿದ್ಯಾರ್ಹತೆ : ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿರಬೇಕು. (ಮುಕ್ತ ವಿವಿಯಿಂದ ಪಡೆದ 500 ಅಂಕಗಳ ವಿದ್ಯಾರ್ಹತೆ ಅಂಕಪಟ್ಟಿ ಪರಿಗಣಿಸಲಾಗುವುದಿಲ್ಲ). ಎಚ್‌ಪಿವಿ/ಎಚ್‌ಟಿವಿ ಅಥವ ಎಚ್‌ಜಿವಿ ಚಾಲಾನಾ ಪರವಾನಗಿಯನ್ನು ಹೊಂದಿ ಕನಿಷ್ಠ ಎರಡು ವರ್ಷಗಳಾಗಿರಬೇಕು. ಕರ್ನಾಟಕ ಬ್ಯಾಡ್ಜ್ ಹೊಂದಿರಬೇಕು. [ಅರ್ಜಿ ಸಲ್ಲಿಸಲು ವಿಳಾಸ]

ವಯೋಮಿತಿ : ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ 24 ವರ್ಷ, ಗರಿಷ್ಠ 35 ವರ್ಷಗಳು. 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ ಕನಿಷ್ಟ 24 ಗರಿಷ್ಠ 38 ವರ್ಷಗಳು. ಪ.ಜಾ/ಪ.ಪಂ/ಪ್ರವರ್ಗ 1ರ ಅಭ್ಯರ್ಥಿಗಳಿಗೆ ಕನಿಷ್ಠ 24 ವರ್ಷ ಗರಿಷ್ಠ 40 ವರ್ಷಗಳು. [ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ]

ಅರ್ಜಿ ಶುಲ್ಕ : ಸಾಮಾನ್ಯ ವರ್ಗ, 2ಎ/2ಬಿ/3ಎ/3ಬಿ 300 ರೂ.ಗಳು. ಪ.ಜಾ/ಪ.ಪಂ/ಮಾಜಿ ಸೈನಿಕರಿಗೆ 150 ರೂ.ಗಳು. ಬಿಎಂಟಿಸಿ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಿದ ನಂತರ ದೊರೆಯುವ ಚಲನ್ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಂಡು ಎಲೆಕ್ಟ್ರಾನಿಕ್ ಅಂಚೆ ಕಚೇರಿಯಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಅರ್ಜಿಗಳನ್ನು ಮೇ 20ರಿಂದ ಜೂನ್ 20ರ ಸಂಜೆ 5.30ರವರೆಗೆ ಮಾತ್ರ ಸಲ್ಲಿಸಲು ಅವಕಾಶವಿದೆ. ನಿಗದಿತ ದಿನಾಂಕದ ನಂತರ ಸಲ್ಲಿಸುವ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ. ಒಬ್ಬ ಅಭ್ಯರ್ಥಿ ಒಂದು ಅರ್ಜಿಯನ್ನು ಮಾತ್ರ ಸಲ್ಲಿಸಲು ಅಕವಾಶವಿದೆ. ಒಮ್ಮೆ ಸಲ್ಲಿಸಿದ ಅರ್ಜಿಯನ್ನು ತಿದ್ದುಪಡಿ ಮಾಡಲು ಅವಕಾಶವಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+