ಬೆಂಗಳೂರು ಜಿ. ಪಂಚಾಯಿತಿ ನೇಮಕಾತಿ; ಸೆ. 11ರ ತನಕ ಅರ್ಜಿ ಹಾಕಿ

ಬೆಂಗಳೂರು, ಸೆಪ್ಟೆಂಬರ್ 01: ಬೆಂಗಳೂರು ಜಿಲ್ಲಾ ಪಂಚಾಯಿತಿ 4 ಹುದ್ದೆಗಳ ಭರ್ತಿಗೆ ಅಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಸೆಪ್ಟೆಂಬರ್ 11ರ ತನಕ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.

Recommended Video

      1000 ಚದರ ಕಿಲೋಮೀಟರ್ Indiaದ ಗಡಿಯನ್ನು ಆಕ್ರಮಿಸಿಕೊಂಡ China | Oneindia Kannada

      ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಆಯುಷ್ಮಾನ್ ಭಾರತ್ ಯೊಜನೆಯಡಿ ಅಭಿವೃದ್ಧಿಗೊಳಿಸಿರುವ 'ಆಯುಷ್ ಕ್ಷೇಮ ಕೇಂದ್ರ'ಗಳಿಗೆ ಯೋಗ ತರಬೇತುದಾರರು ಬೇಕಾಗಿದ್ದಾರೆ. ಒಟ್ಟು 4 ಕೇಂದ್ರಗಳಿಗೆ ನಾಲ್ಕು ತರಬೇತುದಾರರನ್ನು ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

      ಬನ್ನೇರುಘಟ್ಟ, ಬ್ಯಾತ, ಸೋಮನಹಳ್ಳಿ ಮತ್ತು ಗಂಟಗಾನಹಳ್ಳಿ ಕೇಂದ್ರಗಳಿಗೆ ತರಬೇತುದಾರರನ್ನು ನೇಮಕ ಮಾಡಲಾಗುತ್ತಿದೆ. ಪ್ರತಿ ಗಂಟೆಗೆ 250 ರೂ. ನಂತೆ, ಗರಿಷ್ಠ 32 ಗಂಟೆಗಳ ಅವಧಿಯ ಸೇವೆಗೆ 8000 ರೂ. ವೇತನ ನೀಡಲಾಗುತ್ತದೆ.

      Bangalore Zilla Panchayat Recruitment 2020 Apply For 4 Posts

      ಈ ಹುದ್ದೆ ಸಂಪೂರ್ಣ ತಾತ್ಕಾಲಿಕವಾಗಿದ್ದು 11 ತಿಂಗಳ ಅವಧಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಯಾವುದೇ ಸಂದರ್ಭದಲ್ಲಿಯೂ ಈ ಹುದ್ದೆಗಳನ್ನು ಖಾಯಂ ಎಂದು ಪರಿಗಣಿಸುವುದಿಲ್ಲ.

      ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಡಿ. ಎ. ಒ/ ಸಂಬಂಧಿಸಿದ ಕ್ಷೇಮ ಕೇಂದ್ರದ ವೈದ್ಯರು ನಿಗದಿಪಡಿಸಿದ ಸಮಯದಲ್ಲಿ ಜನರಿಗೆ ಯೋಗ ತರಬೇತಿ ನೀಡಬೇಕು.

      ಅರ್ಜಿಗಳನ್ನು ಜಿಲ್ಲಾ ಆಯುಷ್ ಕಚೇರಿ ಬೆಂಗಳೂರು ಅಥವ ಸಂಬಂಧಿಸಿದ ಕೇಂದ್ರದಿಂದ 4/9/2020ರ ತನಕ ಪಡೆದುಕೊಳ್ಳಬಹುದು. ಭರ್ತಿ ಮಾಡಿದ ಅರ್ಜಿಯನ್ನು ಖುದ್ದಾಗಿ ಅಥವ ಅಂಚೆ ಮೂಲಕ ಸಲ್ಲಿಸಲು 11/9/2020ರ ಸಂಜೆ 5 ಗಂಟೆ ಕೊನೆಯ ದಿನವಾಗಿರುತ್ತದೆ.

      ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆಯುಷ್ ಕಚೇರಿಯನ್ನು ಸಂಪರ್ಕಿಸಬಹುದು. ವೆಬ್ ಸೈಟ್ ವಿಳಾಸ

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+