ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ಯೋಗ ಸೃಷ್ಟಿಯಲ್ಲಿ ದೇಶದಲ್ಲಿ ಅಗ್ರಸ್ಥಾನದಲ್ಲಿರುವ ನಗರ ಯಾವುದು ಗೊತ್ತಾ?

|
Google Oneindia Kannada News

ಬೆಂಗಳೂರು, ಡಿ. 14: ದೇಶದ ದೊಡ್ಡ ಸಮಸ್ಯೆಗಳ ಪಟ್ಟಿಯಲ್ಲಿ ಅಗ್ರಸ್ಥಾನದ್ಲಿರುವುದು ನಿರುದ್ಯೋಗವೇ. ಜಗತ್ತಿನ ಅತಿ ಹೆಚ್ಚು ಯುವಸಮೂಹವಿರುವ ಭಾರತದಲ್ಲಿ ನಿರುದ್ಯೋಗದ ಸಮಸ್ಯೆ ಅತಿ ಕೆಟ್ಟದಾಗಿದೆ. ಆದರೆ, ಬೆಂಗಳೂರಿಗರಿಗೆ ಸಿಹಿ ಸುದ್ದಿಯೊಂದು ಬಂದಿದೆ.

ಹೌದು, ಭಾರತದ ಸಿಲಿಕಾನ್ ವ್ಯಾಲಿ ಬೆಂಗಳೂರು ಕೈಗಾರಿಕೆಗಳಲ್ಲಿ ಅತಿ ಹೆಚ್ಚು ಉದ್ಯೋಗ ಸೃಷ್ಟಿ ದರವನ್ನು ಹೊಂದಿರುವ ನಗರಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಜೈಪುರ, ವಡೋದರಾ ಮತ್ತು ಗೋವಾಗಳು ಉನ್ನತ ಉದ್ಯೋಗ ಮಾರುಕಟ್ಟೆಗಳಾಗಿ ಸೇಪರ್ಡೆಯಾಗಿವೆ.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಯೋಜನೆಯಿಂದ ಆಸ್ತಿ ಮೌಲ್ಯ ಹೆಚ್ಚಳಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಯೋಜನೆಯಿಂದ ಆಸ್ತಿ ಮೌಲ್ಯ ಹೆಚ್ಚಳ

ಭಾರತೀಯ ನಗರಗಳ ಪೈಕಿ ಬೆಂಗಳೂರು ಮಾಹಿತಿ ತಂತ್ರಜ್ಞಾನ (ಐಟಿ) ಜೊತೆಗೆ ಇತರ ಕ್ಷೇತ್ರಗಳಲ್ಲಿಯೂ ಸಹ ಹೆಚ್ಚಿನ ಸಂಖ್ಯೆಯ ಉದ್ಯೋಗಗಳನ್ನು ಸೃಷ್ಟಿಸುತ್ತಿದೆ ಎಂದು ಸಮೀಕ್ಷೆಯು ಕಂಡುಹಿಡಿದಿದೆ.th

ದೇಶದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಸಿಲಿಕಾನ್ ಸಿಟಿಗೆ ಅಗ್ರಸ್ಥಾನ

ದೇಶದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಸಿಲಿಕಾನ್ ಸಿಟಿಗೆ ಅಗ್ರಸ್ಥಾನ

ಉದ್ಯೋಗ ಸೃಷ್ಟಿಯ ವಿಷಯದಲ್ಲಿ ಭಾರತದ ನಗರಗಳು ಯಾವ ಸ್ಥಾನದಲ್ಲಿವೆ..? ಎಂಬ ಬಗ್ಗೆ ಖಾಸಗಿ ಕಂಪನಿಯೊಂದು ಸಮೀಕ್ಷೆ ನಡೆಸಿದ್ದು, ಅದರಲ್ಲಿ ಪ್ರಮುಖ ಉದ್ಯೋಗ ಮಾರುಕಟ್ಟೆಯಾಗಿ ನಮ್ಮ ಬೆಂಗಳೂರು ಮೊದಲ ಸ್ಥಾನ ಕಾಯ್ದುಕೊಂಡಿದೆ. ಈ ಪಟ್ಟಿಯಲ್ಲಿ ಜೈಪುರ, ವಡೋದರಾ ಮತ್ತು ಗೋವಾ ಕೂಡ ಸೇರಿವೆ.

ರಾಂಡ್‌ಸ್ಟಾಡ್ ಇನ್‌ಸೈಟ್ ಟ್ಯಾಲೆಂಟ್ ಟ್ರೆಂಡ್‌ ರಿಪೋಟ್‌ 2022 (Randstad Insights Talent Trends Report) ರ ಪ್ರಕಾರ, ಜೂನಿಯರ್ ಲೇವೆಲ್‌ನ್ಲ್ಲಿ 37. 58%, ಮಧ್ಯಮ ಮಟ್ಟದಲ್ಲಿ 43. 61% ಮತ್ತು ಹಿರಿಯ ಮಟ್ಟದ ನೇಮಕಾತಿಗಳಲ್ಲಿ 50. 5% ಅಂಕಗಳನ್ನು ಗಳಿಸಿದ್ದು, ಶ್ರೇಣಿ -1 ನಗರಗಳಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ.

ಎಂಟು ಮೊದಲ ಶ್ರೇಣಿ ನಗರಗಳಲ್ಲಿ ಬೆಂಗಳೂರು ಮೊದಲು!

ಎಂಟು ಮೊದಲ ಶ್ರೇಣಿ ನಗರಗಳಲ್ಲಿ ಬೆಂಗಳೂರು ಮೊದಲು!

ಈ ಸಮೀಕ್ಷೆಯ ಅವಧಿಯಲ್ಲಿ ಎಫ್‌ಎಂಸಿಜಿ ವಲಯದಲ್ಲಿ ರಾಜಧಾನಿ ಬೆಂಗಳೂರು ಜೂನಿಯರ್ ಮಟ್ಟದಲ್ಲಿ 37.9%, ಮಧ್ಯಮ ಮಟ್ಟದಲ್ಲಿ 42.1% ಮತ್ತು ಹಿರಿಯ ಮಟ್ಟದ ಉದ್ಯೋಗ ಸೃಷ್ಟಿಗೆ 46.6% ಕೊಡುಗೆ ನೀಡಿದೆ

ಎಕನಾಮಿಕ್ ಟೈಮ್ಸ್ ನಡೆಸಿದ ರಾಂಡ್‌ಸ್ಟಾಡ್ ಒಳನೋಟಗಳ ಟ್ರೆಂಡ್ಸ್ ವರದಿಯ ಎರಡನೇ ಆವೃತ್ತಿಯು ಎಂಟು ಮೊದಲ ಶ್ರೇಣಿ ನಗರಗಳು ಮತ್ತು 18 ಎರಡನೇ ಶ್ರೇಣಿ ನಗರಗಳಲ್ಲಿನ ಟ್ರೆಂಡ್‌ಗಳನ್ನು ವಿಶ್ಲೇಷಿಸಿದೆ. ವರದಿಯು ಎಫ್‌ಎಂಸಿಜಿ ಮತ್ತು ಚಿಲ್ಲರೆ ವ್ಯಾಪಾರ, ಟೆಲಿಕಾಂ ಮತ್ತು ಉಪಯುಕ್ತತೆಗಳು, ನಿರ್ಮಾಣ ಮತ್ತು ಮೂಲಸೌಕರ್ಯಗಳ ಒಳನೋಟಗಳನ್ನು ಒದಗಿಸಿದೆ. y

ಸುಮಾರು 1,00,000 ಉದ್ಯೋಗಗಳನ್ನು ವಿಶ್ಲೇಷಿಸಿದ ವರದಿ

ಸುಮಾರು 1,00,000 ಉದ್ಯೋಗಗಳನ್ನು ವಿಶ್ಲೇಷಿಸಿದ ವರದಿ

ಈ ವರದಿಯು ಜನವರಿಯಿಂದ ಜುಲೈವರೆಗೆ ನಡೆದ ಸಮೀಕ್ಷೆಯನ್ನು ಅಧರಿಸಿದೆ. ಈ ಅವಧಿಯಲ್ಲಿ ಅನುಭವದ ಹಂತಗಳಲ್ಲಿ ಸುಮಾರು 1,00,000 ಉದ್ಯೋಗಗಳನ್ನು ವಿಶ್ಲೇಷಿಸಲಾಗಿದೆ.

ಪ್ರತಿಭಾವಂತರ ಲಭ್ಯತೆಯಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿದೆ. ದೂರದ ಕೆಲಸಕ್ಕಾಗಿ ಹೋಗುವವರಿಗೆ ಮೂಲಸೌಕರ್ಯ ಮತ್ತು ಸಾರಿಗೆ ವ್ಯವಸ್ಥೆ ಸೇರಿದಂತೆ ಬೆಂಗಳೂರು ಅನುಕೂಲಕರವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಗ್ರಾಹಕ ಸರಕುಗಳ ಸಾಗಣೆ, ಚಿಲ್ಲರೆ ವ್ಯಾಪಾರ, ಟೆಲಿಕಾಂ, ನಿರ್ಮಾಣ ಮತ್ತು ಮೂಲಸೌಕರ್ಯ ಮತ್ತು ಶಕ್ತಿ ಮತ್ತು ಅಗತ್ಯ ವಸ್ತುಗಳ ಪ್ರಮುಖ ಉದ್ಯಮಗಳಲ್ಲಿ ಮುಂಬೈ ಎಲ್ಲಾ ಹಂತಗಳಲ್ಲಿ ಉನ್ನತ ಸ್ಥಾನವನ್ನು ಪಡೆದುಕೊಂಡಿದೆ.

ಸಮೀಕ್ಷೆಯ ಮೊದಲ ಆವೃತ್ತಿಯಲ್ಲೂ ಬೆಂಗಳೂರಿಗೆ ಅಗ್ರಸ್ಥಾನ

ಸಮೀಕ್ಷೆಯ ಮೊದಲ ಆವೃತ್ತಿಯಲ್ಲೂ ಬೆಂಗಳೂರಿಗೆ ಅಗ್ರಸ್ಥಾನ

ಸೆಪ್ಟೆಂಬರ್ 2021 ರಿಂದ ಫೆಬ್ರವರಿ 2022 ರವರೆಗಿನ ಆರು ತಿಂಗಳ ಅವಧಿಯನ್ನು ಒಳಗೊಂಡ ವರದಿಯ ಮೊದಲ ಆವೃತ್ತಿಯಲ್ಲಿ ಬೆಂಗಳೂರು ಎಲ್ಲಾ ಮೊದಲ ಶ್ರೇಣಿ ನಗರಗಳಲ್ಲಿ ಉನ್ನತ ಉದ್ಯೋಗ ಸೃಷ್ಟಿಕರ್ತ ನಗರವಾಗಿ ಹೊರಹೊಮ್ಮಿದೆ.

ಈ ವಲಯವು ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮೆ , ಉತ್ಪಾದನೆ, ಮಾಹಿತಿ ತಂತ್ರಜ್ಞಾನ (IT), ಫಾರ್ಮಾ, ಆರೋಗ್ಯ ಮತ್ತು ಜೀವ ವಿಜ್ಞಾನಗಳನ್ನು ಒಳಗೊಂಡಿದೆ.

ವರದಿಯ ಮೊದಲ ಆವೃತ್ತಿಯು ಐಟಿ ಉದ್ಯೋಗಗಳಿಗಾಗಿ ನಡೆದ ಸಮೀಕ್ಷೆಯಲ್ಲಿ ಪುಣೆ ಎರಡನೇ ಸ್ಥಾನದಲ್ಲಿ ಇದೆ. ಇತ್ತ ಎರಡನೇ ಶ್ರೇಣಿಯ ನಗರಗಳ ಪೈಕಿ ನಾಸಿಕ್ ಮತ್ತು ತಿರುವನಂತಪುರವು ಅಗ್ರ ನಗರಗಳಾಗಿ ಸ್ಥಾನ ಪಡೆದಿವೆ.

English summary
Silicon Valley Bengaluru topped the list of highest job creation rate in Indian Cities. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X