ಬರೋಬ್ಬರಿ ₹1,00,00,000 ಸಂಬಳದ ಉದ್ಯೋಗ ತೊರೆದ ಬೆಂಗಳೂರಿನ ಟೆಕ್ಕಿ; ಕಾರಣ ಏನು ಬೇರೆಯದ್ದೇ ಇದೆ
ಸಾಮಾನ್ಯವಾಗಿ ಉತ್ತಮ ಸಂಬಳ ಸಿಗುವ ಉದ್ಯೋಗಕ್ಕಾಗಿ ಬಹುತೇಕ ಮಂದಿ ಕಾಯುತ್ತಿರುತ್ತಾರೆ. ಇಂತಹದ್ದರ ನಡುವೆ ಇತ್ತೀಚಿನ ದಿನಗಳಲ್ಲಿ ಕೋಟಿ.. ಕೋಟೀ ಸಂಬಳದ ಉದ್ಯೋಗ ತೊರೆಯುವವರ ಸಂಖ್ಯೆ ಹೆಚ್ಚಾಗಿಬಿಟ್ಟಿದೆ. ಇದೀಗ ಬೆಂಗಳೂರು ಮೂಲದ ಟೆಕ್ಕಿಯೊಬ್ಬರು ಬರೋಬ್ಬರಿ 1,00,00,000 ರೂಪಾಯಿ ಉದ್ಯೋಗ ತ್ಯಜಿಸಿದ್ದಾರೆ. ಹಾಗಾದರೆ ಇದಕ್ಕೆ ಕಾರಣ ಏನೆಂದು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಕೋಟಿ ಸಂಬಳದ ಅಮೆಜಾನ್ ಉದ್ಯೋಗ ಬಿಟ್ಟು ಸ್ವಂತ ಉದ್ಯಮ ಸೃಷ್ಟಿಸಿ ಸೋಲನುಭವಿಸಿದ ಕಥೆಯನ್ನು ಟೆಕ್ಕಿಯೊಬ್ಬರು ಹಂಚಿಕೊಂಡಿದ್ದಾರೆ. ಇದೀಗ ಈ ಸೋಲಿನ ಕಥೆ ಸಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

ಬೆಂಗಳೂರು ಮೂಲದ ಟೆಕ್ಕಿಯೊಬ್ಬರು ಒಂದು ಕೋಟಿ ರೂಪಾಯಿ ಪ್ಯಾಕೇಜ್‌ನ ಅಮೆಜಾನ್ ಉದ್ಯೋಗ ತೊರೆದು ಸ್ವಂತ ಉದ್ಯಮ ಸ್ಥಾಪಿಸಿ ಸೋಲನುಭವಿಸಿದ ಕಥೆಯನ್ನು ಹಂಚಿಕೊಂಡಿದ್ದಾರೆ. ಶಕ್ತಿಮಣಿ ತ್ರಿಪಾಠಿ ಎಂಬವರು ರೆಫ್ಲೆಕ್ ಎಂಬ ಕಂಪನಿಯ ಸಹ ಸ್ಥಾಪಕರಾಗಿ ಮತ್ತು ಸಿಟಿಒ ಆಗಿ ಈಗ ಕಾರ್ಯನಿರ್ವಹಿಸುತ್ತಿದ್ದಾರೆ. ವ್ಯವಹಾರಗಳನ್ನು ಸ್ವಯಂಚಾಲಿತಗೊಳಿಸಲು ಇರುವ ಎಐ ಏಜೆಂಟ್ ಕಂಪನಿ ಇದಾಗಿದೆ. ಸ್ವಂತ ಕಂಪನಿ ಆರಂಭಕ್ಕಾಗಿ ಇವರು ಕೋಟೀ ಸಂಬಳ ನೀಡುವ ಅಮೆಜಾನ್ ಕಂಪನಿಯನ್ನು ತೊರೆದರು.
ಆದರೆ, ಉದ್ಯಮಿಯಾಗಿ ನನಗೆ 2024 ವರ್ಷ ಯಶಸ್ಸು ನೀಡಲಿಲ್ಲ ಎಂದು ತನ್ನ ಸೋಲಿನ ಕಥೆಯನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಇದೀಗ ಭಾರೀ ವೈರಲ್ ಆಗುತ್ತಿದೆ. "2024 ನನ್ನ ಪಾಲಿಗೆ ಕಠಿಣ ವರ್ಷವಾಗಿತ್ತು. ಯಾವುದೇ ಬ್ಯಾಕಪ್ ಇಲ್ಲದೆ, ಅಮೆಜಾನ್ ಕಂಪನಿ ನೀಡುತ್ತಿದ್ದ 1 ಕೋಟಿ ರೂಪಾಯಿ ಉದ್ಯೋಗ ತೊರೆದೆ. ಸ್ಟಾರ್ಟಪ್ ಆರಂಭಿಸುವ ದೃಷ್ಟಿಯಿಂದ ನಾನು ಉದ್ಯೋಗವನ್ನು ತೊರೆದೆ," ಎಂದು ಟ್ವೀಟ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
ಉದ್ಯೋಗ ಬಿಟ್ಟ ಬಳಿಕ ತನ್ನ ಮೊದಲ ಸ್ಟಾರ್ಟಪ್ Hoobahoo AI ಅನ್ನು 2024ರಲ್ಲಿ ಆರಂಭಿಸಿದru. ಇವರ ಸ್ಟಾರ್ಟಪ್ ಐಡಿಯಾವನ್ನು ವೈ ಕಾಂಬಿನೇಟರ್ ರಿಜೆಕ್ಟ್ ಮಾಡಿತ್ತು. ವೈ ಕಾಂಬಿನೇಟರ್ ಎನ್ನುವುದು ಸ್ಟಾರ್ಟಪ್‌ಗಳಿಗೆ ಫಂಡ್ ಸಹಾಯ ಮಾಡುವಂತಹ ಸಂಸ್ಥೆಯಾಗಿದೆ. ಬಂಡವಾಳ ಸಂಗ್ರಹಿಸಲು ಇವರು ಸುಮಾರು 30 ವೆಂಚರ್ ಕ್ಯಾಪಿಟಲಿಸ್ಟ್‌ಗಳನ್ನು ಸಂಪರ್ಕಿಸಿದ್ದರಂತೆ. ಆದರೆ, ಹಣ ಸಂಗ್ರಹಿಸಲು ಸಾಧ್ಯವಾಗಲಿಲ್ಲ. ಕೊನೆಗೆ ತುಂಬಲಾರದ ನಷ್ಟದೊಂದಿಗೆ ತನ್ನ ಹೂಬಾಹೂ ಎಐ ಕಂಪನಿಯನ್ನು ಮುಚ್ಚಬೇಕಾಯಿತು ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
ಬಳಿಕ ತ್ರಿಪಾಠಿ ಮತ್ತು ಸಹ ಸ್ಥಾಪಕ ಕುನಾಲ್ ರಂಜನ್ ಜೊತೆಯಾಗಿ ಬಿ2bi ಸಾಸ್ ಫಾರ್ ಎಂಜಿನಿಯರಿಂಗ್ ಟೀಮ್ಸ್‌ಗಾಗಿ ಕೆಲಸ ಮಾಡಿದ್ದಾರೆ. ಆದರೆ, ಈ ಐಡಿಯಾ ಸಾಧ್ಯವಿಲ್ಲ ಎಂದೆನಿಸಿ ಅದನ್ನೂ ಕೈಬಿಟ್ಟರು. ಬಳಿಕ ತ್ರಿಪಾಠಿ ಕೋಡರ್ಮನ್ ಎಐನಲ್ಲಿ ಕೆಲಸ ಮಾಡಿದ್ದಾರೆ. ಅಲ್ಲೂ ಯಶಸ್ಸು ಕೈಗೂಡಲಿಲ್ಲ. ಹೀಗೆ ಹಲವು ಹಿನ್ನಡೆಗಳ ಬಳಿಕ ಸಹ ಸ್ಥಾಪಕ ಪ್ರೊಕ್ಯೂರ್‌ಮೆಂಟ್‌ಗಾಗಿ ಎಐ ಏಜೆಂಟ್ ಅಭಿವೃದ್ಧಿಪಡಿಸಲು ನಿರ್ಧರಿಸಿದರು. ಆದರೆ, ಈ ಡೊಮೇನ್‌ನಲ್ಲಿ ಇವರಿಗೆ ಅನುಭವದ ಕೊರತೆಯಿರುವುದು ಕಂಡುಬಂತು. ಆದ್ದರಿಂದ ಈ ಪ್ರಯತ್ನವನ್ನೂ ಕೈಬಿಡಬೇಕಾಯಿತು.
ಬಳಿಕ ರಿಫ್ಲೆಕ್ ಎಐನಲ್ಲಿ ಕೆಲಸ ಮಾಡಲು ಆರಂಭಿಸಿದರು. ಕೇವಲ 7 ದಿನಗಳಲ್ಲಿ ಮಿನಿಮಮ್ ವಿಯಬಲ್ ಪ್ರಾಡಕ್ಟ್ ಅಭಿವೃದ್ಧಿಪಡಿಸಿದರು. ಈ ಕಲ್ಪನೆಯನ್ನು ಮೌಲ್ಯೀಕರಿಸಲು ಸುಮಾರು 50ಕ್ಕೂ ಹೆಚ್ಚು ಉದ್ಯಮ ನಾಯಕರ ಜೊತೆ ಸಂದರ್ಶನಗಳನ್ನು ನಡೆಸಿದರು. ಪ್ರಯತ್ನಗಳು ಸ್ವಲ್ಪ ಮಟ್ಟಿಗೆ ಫಲ ನೀಡಿದವು. ತ್ರಿ ಲೆಟರ್ಸ್ ಆಫ್ ಇಂಟೆಂಟ್(ಎಲ್‌ಒಐ)ಗಾಗಿ ಇದನ್ನು ಮಾಡಿದ್ದರು. ಇದರಿಂದ ಇವರಿಗೆ ಗ್ರಾಹಕರು ದೊರಕುವ ಸಾಧ್ಯತೆಯಿತ್ತು. ಇದರಿಂದ ವೈ ಕಾಂಬಿನೇಟರ್‌ಗೆ ಅರ್ಜಿ ಸಲ್ಲಿಸುವವರಲ್ಲಿ ಟಾಪ್ 10 ಅರ್ಜಿದಾರರಲ್ಲಿ ಒಬ್ಬರಾದರು. ಆದರೆ, ಅಂತಿಮವಾಗಿ ಇವರ ಅರ್ಜಿ ರಿಜೆಕ್ಟ್ ಆಯಿತು.
ರಿಫ್ಲೆಕ್ ಎಐಯು ಹಲವು ಸಮಸ್ಯೆಗಳನ್ನು ಏಕಕಾಲದಲ್ಲಿ ಪರಿಹರಿಸಲು ಪ್ರಯತ್ನಿಸುವುದನ್ನು ಇವರು ಕಂಡುಕೊಂಡಿದ್ದಾರೆ. ಸದ್ಯ ಎಐ ಡಿಜಿಟಲ್ ಮಾರ್ಕೆಟರ್ ಅನ್ನು ನಿರ್ಮಿಸುತ್ತಿದ್ದಾರೆ. ಬೆಂಗಳೂರು ಮೂಲದ ಈ ಟೆಕ್ಕಿಯು "ನಾನು ಬಹಳಷ್ಟು ಬಾರಿ ವಿಫಲನಾಗಿದ್ದೇನೆ. ಈ ಹಿನ್ನಡೆಗಳಿಂದ ನಾನು ಸಾಕಷ್ಟು ಕಲಿತಿದ್ದೇನೆ" ಎಂದು ಹೇಳಿದ್ದಾರೆ. "2025ನೇ ವರ್ಷವು ನನ್ನ ಉದ್ಯಮಶೀಲತೆಯ ಪ್ರಯತ್ನವನ್ನು ತ್ಯಜಿಸಲು ಮತ್ತು ಉದ್ಯೋಗಿಯಾಗಿ ಮತ್ತೆ ಬೇರೆ ಕಂಪನಿಗೆ ಕೆಲಸಕ್ಕೆ ತೆರಳಲು ಒತ್ತಾಯಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ ಅಂತಾ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಸದ್ಯ ಈ ಪೋಸ್ಟ್ ಭಾರೀ ವೈರಲ್ ಆಗುತ್ತಿದ್ದು, ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಬಹುತೇಕ ಮಂದಿ ಮುಂದಿನ ದಿನಗಳಲ್ಲಿ ನೀವು ದೊಡ್ಡ ಮಟ್ಟದಲ್ಲಿ ಬೆಳೆಯಲ್ಲಿದ್ದೀರಿ. ಅದಕ್ಕೆ ಈ ನಿಮ್ಮ ಸಾಕಷ್ಟು ಪ್ರಯತ್ನಗಳೇ ಕಾರಣ. ನೀವು ಕೆಲಸ ಸೃಷ್ಟಿಸಿಕೊಳ್ಳುವುದರಲ್ಲಿ ಸೋತಿರಬಹುದು ಜೀವನದಲ್ಲಿ ಸೋತಿಲ್ಲ. ಒಂದಲ್ಲ ಒಂದು ದಿನ ನಿಮ್ಮ ಶ್ರಮಕ್ಕೆ ಫಲ ಸಿಕ್ಕೇ ಸಿಗುತ್ತದೆ ಎಂದು ಹೇಳುವ ಮೂಲಕ ಧೈರ್ಯ ತುಂಬುವ ಕೆಲಸವನ್ನು ಮಾಡಿದ್ದಾರೆ.












Click it and Unblock the Notifications