BEL Recruitment 2024: ಬೆಂಗಳೂರಿನಲ್ಲಿ ಬಂಪರ್ ಉದ್ಯೋಗ, ₹55,000 ವೇತನ, ಆಯ್ಕೆ ವಿಧಾನ ನೋಡಿ
ಬೆಂಗಳೂರು, ಫೆಬ್ರವರಿ 06: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಖಾಲಿ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಿಸಿದೆ. ಈ ನಿಮಿತ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಬೆಂಗಳೂರಿನಲ್ಲಿಯೇ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶ ಸದುಪಯೋಗ ಮಾಡಿಕೊಳ್ಳುವಂತೆ ತಿಳಿಸಲಾಗಿದೆ.
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL)ನಲ್ಲಿ ಒಟ್ಟು 55 ಟ್ರೈನಿ ಎಂಜಿನಿಯರ್-I, ಪ್ರಾಜೆಕ್ಟ್ ಎಂಜಿನಿಯರ್-I ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ಫೆಬ್ರವರಿ 14ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ಬಿಇಎಲ್ ಸಂಸ್ಥೆ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.

ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೂ ಮೊದಲು ವಯೋಮಿತಿ, ಅರ್ಜಿ ಶುಲ್ಕ ಸೇರಿದಂತೆ ನೇಮಕಾತಿಯ ಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಬಹುದು.
ನೇಮಕಾತಿ ಪೂರ್ಣ ಮಾಹಿತಿ
ಸಂಸ್ಥೆ ಹೆಸರು: ಬಿಇಎಲ್, ಬೆಂಗಳೂರು
ಹುದ್ದೆ ಹೆಸರು: ಟ್ರೈನಿ ಎಂಜಿನಿಯರ್, ಪ್ರಾಜೆಕ್ಟ್ ಎಂಜಿನಿಯರ್
ಟ್ರೈನಿ ಎಂಜಿನಿಯರ್: 33
ಪ್ರಾಜೆಕ್ಟ್ ಎಂಜಿನಿಯರ್ : 22
ಒಟ್ಟು ಖಾಲಿ ಹುದ್ದೆ: 55
ಅರ್ಜಿ ಸಲ್ಲಿಕೆ ಕೊನೆ ದಿನ: ಫೆಬ್ರವರಿ 14
ವಿದ್ಯಾರ್ಹತೆ ಏನಿರಬೇಕು?
ಬಿಇಎಲ್ ತಿಳಿಸಿರುವ ಪ್ರಕಾರ ಈ ಟ್ರೈನಿ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರಿಗೆ ಬಿ.ಎಸ್ಸಿ, ಎಲೆಕ್ಟ್ರಾನಿಕ್ಸ್/ ಮೆಕ್ಯಾನಿಕಲ್/ ಕಂಪ್ಯೂಟರ್ ಸೈನ್ಸ್ನಲ್ಲಿ ಬಿಇ/ಬಿ.ಟೆಕ್ ಆಗಿರಬೇಕು. ಇನ್ನೂ ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆ ಸೇರಬಯಸುವವರಿಗೆ ಬಿ.ಎಸ್ಸಿ, ಎಲೆಕ್ಟ್ರಾನಿಕ್ಸ್/ ಕಂಪ್ಯೂಟರ್ ಸೈನ್ಸ್ನಲ್ಲಿ ಬಿಇ/ಬಿ.ಟೆಕ್ ಪೂರ್ಣಗೊಂಡಿರಬೇಕು ಎಂದು ಹೇಳಲಾಗಿದೆ.

ವಯಸ್ಸಿನ ಮಿತಿ
ಟ್ರೈನಿ ಎಂಜಿನಿಯರ್ ಹುದ್ದೆ ಅಭ್ಯರ್ಥಿಗಳಿಗೆ ಗರಿಷ್ಠ 28 ವರ್ಷ ಹಾಗೂ ಪ್ರಾಜೆಕ್ಟ್ ಎಂಜಿನಿಯರ್ ಅಭ್ಯರ್ಥಿಗಳಿಗೆ ಗರಿಷ್ಠ 32 ವರ್ಷ ಆಗಿರಬೇಕು ಎಂದು ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಮಾಹಿತಿ ನೀಡಿದೆ.
ವಯೋಮಿತಿ ಸಡಿಲಿಕೆ
ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದ್ದರೆ, ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ 05 ವರ್ಷಗಳು ಹಾಗೂ PwBD ಅಭ್ಯರ್ಥಿಗಳಿಗೆ ಒಟ್ಟು 10 ವರ್ಷ ಸಡಿಲಿಕೆ ಸಿಗಲಿದೆ.
ಇನ್ನೂ SC/ST/PwBD ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ ಇರುವುದಿಲ್ಲ. ಇನ್ನೂ ಸಾಮಾನ್ಯ/OBC/EWS ಅಭ್ಯರ್ಥಿಗಳಿಗೆ 150 ರೂಪಾಯಿ ಅರ್ಜಿ ಶುಲ್ಕ ನಿಗದಿ ಮಾಡಲಾಗಿದೆ. ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವ ಸಾಮಾನ್ಯ/OBC/EWS ಅಭ್ಯರ್ಥಿಗಳಿಗೆ ಒಟ್ಟು 400 ರೂಪಾಯಿ ನಿಗದಿ ಆಗಿದೆ. ಈ ಹಣವನ್ನು ನೀವು ಆನ್‌ಲೈನ್ ಮೂಲಕವೇ ಪಾವತಿಸಬೇಕಿದೆ.
ಮಾಸಿಕ ವೇತನ ವಿವರ
ಟ್ರೈನಿ ಎಂಜಿನಿಯರ್ ಹುದ್ದೆ ನೌಕರಿನಿಗೆ ಮಾಸಿಕ 30,000 ರಿಂದ 40,000 ರೂಪಾಯಿ
ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಯ ಉದ್ಯೋಗಿಗ ಮಾಸಿಕ 40,000-55,000 ರೂಪಾಯಿ
ಆಯ್ಕೆ ಪ್ರಕ್ರಿಯೆ ಹೇಗಿರಲಿದೆ?
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕಂಪನಿಯು ಮೊದಲು ಲಿಖಿತ ಪರೀಕ್ಷೆ ನಡೆಸಲಿದೆ. ನಂತರ ಸಂದರ್ಶನ ನಡೆಸಿ ಆಯ್ಕೆ ಮಾಡಲಿದೆ. ಇಲ್ಲಿ ಆಯ್ಕೆ ಆಗುವವರಿಗೆ ರಾಜಧಾನಿ ಬೆಂಗಳೂರಿನಲ್ಲಿಯೇ ಪೋಸ್ಟಿಂಗ್ ನೀಡಲಾಗುವುದು ಎಂದು ಬಿಇಎಲ್ ತಿಳಿಸಿದೆ.
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳ ಸಹಿತಿ ಈ ಕೆಳಕಂಡ, ' ವ್ಯವಸ್ಥಾಪಕರು (HR), ಉತ್ಪನ್ನ ಅಭಿವೃದ್ಧಿ ಮತ್ತು ನಾವೀನ್ಯತೆ ಕೇಂದ್ರ (PDIC), ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಪ್ರೊ. U R ರಾವ್ ರಸ್ತೆ, ನಾಗಾಲ್ಯಾಂಡ್ ವೃತ್ತದ ಹತ್ತಿರ, ಜಾಲಹಳ್ಳಿ ಪೋಸ್ಟ್, ಬೆಂಗಳೂರು - 560013, ಭಾರತ' ಇಲ್ಲಿಗೆ ನಿಗದಿತ ದಿನಾಂಕದೊಳಗೆ ಕಳುಹಿಸಬೇಕು.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ: ಜನವರಿ 31
ಅರ್ಜಿ ಸಲ್ಲಿಕೆ ಕೊನೆ ದಿನಾಂಕ: ಫೆಬ್ರವರಿ 14
ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೂ ಕಾಯದೇ ಈ ಕೂಡಲೇ ಅಗತ್ಯ ದಾಖಲೆಗಳ ಸಹಿತ ಅರ್ಜಿ ಸಲ್ಲಿಸುಬೇಕು. ಹೆಚ್ಚಿನ ಮಾಹಿತಿಗೆ ಅಧಿಸೂಚನೆ ಪರಿಶೀಲಿಸಿವುದು ಒಳ್ಳೆಯದು.












Click it and Unblock the Notifications