ಭಾರತೀಯ ಸೇನೆ ನೇಮಕಾತಿ: ಬೆಳಗಾವಿ ವಲಯದಿಂದ ಅರ್ಜಿ ಆಹ್ವಾನ
ಬೆಳಗಾವಿ, ಡಿ. 28: ಬೆಳಗಾವಿ ವಲಯದ ಸೇನಾ ನೇಮಕಾತಿ ಕಚೇರಿಯಿಂದ ಭಾರತೀಯ ಸೇನೆ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಸಿಪಾಯಿ(ಜನರಲ್ ಡ್ಯೂಟಿ) ವಿವಿಧ ಹುದ್ದೆಗಳಿಗೆ ಆಯ್ಕೆಯಾಗ ಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಆರ್ಮಿ ನೇಮಕಾತಿ ರ‍್ಯಾಲಿಯನ್ನು ಬೆಳಗಾವಿ ಅಲ್ಲದೆ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಲ್ಲೂ ಆಯೋಜಿಸಲಾಗಿದೆ.
ದಿನಾಂಕ: ಫೆಬ್ರವರಿ 01 ರಿಂದ ಮಾರ್ಚ್ 31, 2021( ಕೊವಿಡ್ 19 ಮಾರ್ಗಸೂಚಿಯಂತೆ ದಿನಾಂಕದಲ್ಲಿ ಬದಲಾವಣೆ ಸಾಧ್ಯತೆಯಿದೆ)

ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಯಿಂದ 10ನೇ ತರಗತಿ ಪಾಸ್ 45% ಅಂಕ. ಗ್ರೇಡ್ ಆಧಾರವಾದರೆ ಸಿ2 ಅಥವಾ ಡಿ ಗ್ರೇಡ್ ಪಡೆದುಕೊಂಡಿರಬೇಕು.
ದೈಹಿಕ ಸಾಮರ್ಥ್ಯ
ವಯೋಮಿತಿ: 17.5 ರಿಂದ 21 ವರ್ಷ (1998ರ ಅಕ್ಟೋಬರ್ 01ರಿಂದ ಏಪ್ರಿಲ್ 01, 2002ರೊಳಗೆ ಹುಟ್ಟಿದವರು)
ಎತ್ತರ: 177 ಸೆಂ.ಮೀ
ಎದೆ ಸುತ್ತಳತೆ: 77 ಸೆಂ.ಮೀ,
ಆರ್ಮಿ ನೇಮಕಾತಿ ರ‍್ಯಾಲಿಗೆ ಆಗಮಿಸುವುದಕ್ಕೂ ಮುನ್ನ ಅಭ್ಯರ್ಥಿಗಳು ಸೇನೆಯ ಅಧಿಕೃತ ವೆಬ್ ತಾಣದಿಂದ ಅಡ್ಮಿಟ್ ಕಾರ್ಡ್ ಪಡೆದುಕೊಂಡು ನಿಗದಿತ ದಿನದಂದು ಹಾಜರಾಗಬೇಕಾಗುತ್ತದೆ.
ಆನ್ ಲೈನ್ ನೋಂದಣಿ ಆರಂಭ ದಿನಾಂಕ: ಡಿಸೆಂಬರ್ 05, 2020
ಆನ್ ಲೈನ್ ನೋಂದಣಿ ಕೊನೆ ದಿನಾಂಕ: ಜನವರಿ 18, 2021
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ












Click it and Unblock the Notifications